ಪ್ರಧಾನಿ ಭಾಷಣಕ್ಕೆ ಅಡ್ಡಿ ಪಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಸೂಚನೆ ನೀಡಿದ್ದರಂತೆ

0
42

ನವದೆಹಲಿ – ಲೋಕಸಭೆಯಲ್ಲಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ಘೋಷಣೆ ಕೂಗುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸಂಸದರಿಗೆ ಸೂಚನೆ ನೀಡಿದ್ದರು ಎಂದು ಹೇಳಲಾಗಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಸಂಸತ್ ನ ಲೋಕಸಭಾ ಕಲಾಪದ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ಸಂಸದರು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನೂ ಕೂಗುತ್ತಿದ್ದರು.
ಇದು ಕಲಾಪದ ನೇರ ದೃಶ್ಯಾವಳಿ ವೇಳೆಯಲ್ಲೂ ದಾಖಲಾಗಿತ್ತು. ಕಾಂಗ್ರೆಸ್ ಸಂಸದರ ಈ ನಡೆ ಹಿಂದೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆ ಇತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ ಅವರಿಗೆ ಅಡ್ಡಿಪಡಸಲೆಂದು ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದರಿಗೆ ಸೂಚನೆ ನೀಡಿದ್ದರಂತೆ. ಅದರಂತೆ ಅವರ ಭಾಷಣದ ವೇಳೆಯಲ್ಲಿ ಕಾಂಗ್ರೆಸ್ ಸಂಸದರು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಿಷಯಾಧರಿತ ಘೋಷಣೆ ಕೂಗುವಂತೆ ಸೂಚನೆ ನೀಡಿದ್ದರಂತೆ.
ಇದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಅವರೂ ಕೂಡ ಮಧ್ಯಾಹ್ನ 12 ಗಂಟೆ ವೇಳೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರಿಗೂ ಕಲಾಪಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದರಂತೆ.
ಈ ಪೈಕಿ ಕೆಲ ಸಂಸದರು ಪೂರ್ವಭಾವಿ ಸಿದ್ಧತೆ ಮಾಡಿಕೊಂಡೇ ಸದನಕ್ಕೆ ಆಗಮಿಸಿದ್ದರು. ಬಿಳಿ ಹಾಳೆಗಳ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಬರೆದು ಅದನ್ನು ಕಲಾಪಕ್ಕೆ ತಂದಿದ್ದರು.
ಇಷ್ಟೇ ಪ್ರಧಾನಿ ಮೋದಿ ಭಾಷಣದ ವೇಳೆ ಕಾಂಗ್ರೆಸ್ ಸಂಸದರು ಘೋಷಣೆಗಳನ್ನೂ ಕೂಗಿ-ಕೂಗಿ ಅವರ ಗಂಟಲು ಕೆಡದ ಹಾಗೆ ನೋಡಿಕೊಳ್ಳಲು ಸೋನಿಯಾಗಾಂಧಿ ಅವರು ಚಾಕಲೇಟ್ ಗಳನ್ನೂ ಕೂಡ ಸಂಸದರಿಗೆ ನೀಡಿದ್ದರಂತೆ.
ಅಷ್ಚೇ ಯಾವ ವಿಚಾರದ ಕುರಿತು ಘೋಷಣೆ ಕೂಗಬೇಕು, ಯಾವ ಘೋಷಣೆ ಕೂಗಬಾರದು ಎಂಬಿತ್ಯಾದಿ ಅಂಶಗಳು ಮೊದಲೇ ನಿರ್ಧಾರವಾಗಿತ್ತು ಎಂದು ಕಾಂಗ್ರೆಸ್ ಸಂಸದರೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ನಿನ್ನೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ, ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಮೋದಿ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿದ್ದರು.

loading...