ಜೇನು ಸಾಕಾಣಿಕೆ ಪ್ರಧಾನ ಕಸುಬು ಆಗಿದೆ: ರಾಮಾ

0
122

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಜೇನು ಸಾಕಾಣಿಕೆ ಒಂದು ಪ್ರಧಾನ ಉಪ ಕಸುಬು ಆಗಿದೆ. ಕಡಿಮೆ ಬಂಡವಾಳದಲ್ಲಿ ತೊಡಗಿಸಬಹುದಾದ ವೃತ್ತಿಯಾಗಿದೆ. ಶ್ರದ್ಧೆ-ತಾಳ್ಮೆಯಿಂದ ಜೇನು ಸಾಕಾಣಿಕೆ ಮಾಡಬಹುದು. ಜೇನುತುಪ್ಪ, ಜೇನುಮೇಣ, ಪರಾಗ, ರಾಜಶಾಹಿರಸ, ಜೇನು ಕುಟುಂಬಗಳು ಪ್ರತ್ಯಕ್ಷ ಲಾಭಗಳಾದರೆ ಪರಾಗಸ್ಮರ್ಶ ಕ್ರಿಯೆಯಿಂದ ರೈತರು ಬೆಳೆಯುವ ಎಲ್ಲಾ ಬೆಳೆಗಳ ಉತ್ಪನ್ನ, ಅರಣ್ಯದ ಉತ್ಪನ್ನ, ಸಮೃದ್ಧಿಯೇ ಪರೋಕ್ಷ ಲಾಭ. ಜೇನುತುಪ್ಪದಲ್ಲಿ ಔಷಧಿಯ ಗುಣ, ಆಹಾರಗುಣ, ಸೌಂದರ್ಯ ವರ್ಧಕ ಗುಣಗಳಿವೆ. ಆದ್ದರಿಂದ ನಾವೆಲ್ಲರೂ ಹೆಜ್ಜೇನು, ತುಡುವೆ ಜೇನು, ಮಿಶ್ರಿಜೇನು, ಕೋಲುಜೇನು ಸಂರಕ್ಷಿಸಿ ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡಬೇಕೆಂದು ಯಲ್ಲಾಪುರ ಜೇನು ತಜ್ಞ ರಾಮಾ ಮರಾಠಿ ಹೇಳಿದರು.
ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಸಮೃದ್ಧಿ ಜೇನು ಉತ್ಪಾದಕರ ಸಂಘ ಜಿಲ್ಲಾ ವಲಯ ಯೋಜನೆಯಡಿ ಕೃಷಿಕರಿಗೆ ಹೊರಜಿಲ್ಲೆ ಪ್ರವಾಸ ಕಾರ್ಯಕ್ರಮದ ನಿಮಿತ್ತ ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮುದ್ದಿನಗದ್ದೆಯಲ್ಲಿ ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ಸವದತ್ತಿ, ಹುಕ್ಕೇರಿಯ ರೈತರು ಹಾಗೂ ರೈತ ಮಹಿಳೆಯರು ಪಾಲ್ಗೊಂಡಿದ್ದರು. ಆರ್‌.ಐ.ಪಟ್ಟಣಶೆಟ್ಟಿ ಸಹಾಯಕ ತೋಟಗಾರಿಕಾ ಅಧಿಕಾರಿ ಬೆಳಗಾವಿ, ಗಣೇಶ ಭಟ್ಟ ಜೇನು ಕೃಷಿ ಪ್ರದರ್ಶಕರು ಬೆಳಗಾವಿ, ಸಂಜಯ ಮುತ್ತಗಿ, ರಾಮಚಂದ್ರ ಪಾಟೀಲ, ವಸಂತ ಜಾಂಬುಟಕರ, ಅಕ್ಕಮಹಾದೇವಿ ಉಪಸ್ಥಿತರಿದ್ದರು.
ಸುಸ್ಥಿರ ಹೆಜ್ಜೇನು ಕೊಯ್ಲು ಸಹಾಯಕ ಆರ್‌.ಜಿ.ಭಟ್ಟ ಬೆಳಸೂರ, ಜೇನು ಸಾಕಾಣಿಕೆ, ಜೇನಿನಲ್ಲಿ ವಿಧಗಳು, ಜೇನಿನಲ್ಲಿ ಬೇರ್ಪಡಿಸುವುದು, ಸಂಚಾರಿ ಜೇನು ಕೃಷಿ, ಸುಸ್ಥಿರ ಹೆಜ್ಜೇನು ಕೊಯ್ಲು ಯಂತ್ರಗಳ ಮೂಲಕ ಜೇನುತುಪ್ಪ ತೆಗೆಯುವುದು ಮುಂತಾದವುಗಳ ಬಗ್ಗೆ ತರಬೇತಿ ನೀಡಿದರು.

loading...