ನಗರ ಪ್ರದೇಶದಲ್ಲಿ ಲಾರ್ವಾ ಸಮೀಕ್ಷೆ ಕಾರ್ಯಕ್ಕೆ ಚಾಲನೆ

0
68

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಡೆಂಗಿ ಮತ್ತು ಚಿಕುಂಗುನ್ಯಾ ಖಾಯಿಲೆಗಳು ಈಡಿಸ್‌ ಇಜಿಪ್ಟೆಯಂಬ ಸೋಂಕಿತ ಸೊಳ್ಳೆಗಳಿಂದ ಹರಡುತ್ತಿದ್ದು ಈ ಸೊಳ್ಳೆಗಳು ಮನೆಯಲ್ಲಿ ಸಂಗ್ರಹಿಸಿದ ತೆರೆದಿಟ್ಟ ನೀರಿನಲ್ಲಿ ಮೊಟ್ಟ ಹಾಕಿ,ತಮ್ಮ ಸಂತಾನ ವೃದ್ಧಿ ಮಾಡಿಕೊಳ್ಳುತ್ತವೆ ಆದ್ದರಿಂದ ಮನೆಯಲ್ಲಿ ಸಂಗ್ರಹಿಸಿದ ನೀರನ ಪರಿಕರಗಳ ಮೇಲೆ ತಪ್ಪದೇ ಭದ್ರವಾಗಿ ಮುಚ್ಚಬೇಕು,ಅಲ್ಲದೆ ಈಡಿಸ್‌ ಇಜಿಪ್ಟೆ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವದರಿಂದ ಮುಂಜಾನೆ ಮತ್ತು ಸಂಜೆ ತಪ್ಪದೇ ಎರಡು ಹೊತ್ತು ಧೂಪ, ಲೋಭಾನ ಸಾಂಬ್ರಾಣಿ ಹೊಗೆ ಮತ್ತು ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಅಲ್ಲದೇ ಹಗಲು ಹೊತ್ತಿನಲ್ಲಿ ಮಲಗುವವರು ಸೊಳ್ಳೆ ಪರದೆ ಬಳಸಬೇಕು ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಕೆ ಎ ಹಾದಿಮನಿ ಮಾತನಾಡಿ ಹೇಳಿದರು.
ಪಟ್ಟಣದ ಆರೋಗ್ಯ ಇಲಾಖೆ ವತಿಯಿಂದ ಲಾರ್ವಾ ಸಮೀಕ್ಷೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಳೆ ಅಭಾವದಿಂದ ಮತ್ತು ನೀರಿನ ಸರಬುರಾಜು ವಿಳಂಭ ಕಾರಣದಿಂದ ನಗರ ಪ್ರದೇಶದಲ್ಲಿ ಜನ ನೀರುನ್ನು ಬಹು ದಿನಗಳವರೆಗೆ ಸಂಗ್ರಹಿಸುವ ಕಾರಣದಿಂದ ನಗರ ಪ್ರದೇಶದಲ್ಲಿ ಡೆಂಗಿ ಚಿಕುಂಗುನ್ಯಾ ದಂತಹ ಕೀಟಜನ್ಯ ಡೆಂಗಿ ಚಿಕುಂಗುನ್ಯಾ ರೋಗಗಳು ಹೆಚ್ಚಾಗಬಹುದು ಎಂಬ ಕಾರಣದಿಂದ ನಗರ ಪ್ರದೇಶದ ಸುತ್ತ ಮುತ್ತ ಇರುವ ನೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸಿಬ್ಬಂದಿ ನಿಯೋಜಸಿಕೊಂಡು ಡೆಂಗಿ ಮತ್ತು ಚಿಕುಂಗುನ್ಯಾ ರೋಗಗಳಿಗೆ ಸಂಬಂದಿಸಿದಂತೆ ಲಾರ್ವಾ ಸಮೀಕ್ಷೆ ಮಾಡಿ ಜನರಿಗೆ ಆರೋಗ್ಯ ಶಿಕ್ಷಣ ಮತ್ತು ಮಾಹಿತಿ ನೀಡುವ ಚಟುವಟಿಕೆ ಜರುಗಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಸೂಡಿಯ ಹಿರಿಯ ಆರೋಗ್ಯ ಮೇಲ್ವಿಚಾರಕರಾದ ಮನೋಹರ ಕಣ್ಣಿ ಮಾತನಾಡಿ, ಗಜೇಂದ್ರಗಡದ ನಗರ ಪ್ರದೇಶದಲ್ಲಿ 8 ತಂಡಗಳನ್ನು ರಚಿಸಿಕೊಂಡು ಮನೆ ಮನೆ ಭೇಟಿ ಮಾಡಿ ಅಂತರಮುಖ ಸಂವಹನದ ಮೂಲಕ ಮತ್ತು ಗುಂಪು ಸಭೆಗಳನ್ನು ಮಾಡಿ,ಜನರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಅಲ್ಲದೆ ಸಮಸ್ಯಾತ್ಮಕ ಪ್ರದೇಶದಲ್ಲಿ ಲಾರ್ವಾಹಾರಿ ಮೀನುಗಳಾದ ಗ್ಯಾಂಬುಸಿಯಾ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ ಜನರಿಗೆ ಆರೋಗ್ಯ ಶಿಕ್ಷಣದ ಮೂಲಕ ಅವರ ದೈನಂದಿನ ನೀರು ಸಂಗ್ರಹಿಸುವ ನೀರಿನ ಪರಿಕರಗಳ ಬಗ್ಗೆ ಹೆಚ್ಚು ಗಮನಕೊಡಲು ಸೂಚಿಲಾಗುತ್ತಿದೆ ಎಂದು ಹೇಳಿದರು
ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆಯ ಚಟುವಟಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂಗಮೇಶ ಬಂಕದ, ಡಾ.ಪ್ರಮೀಣ ಮಲ್ಲಾಪೂg,À ಸಮೀಕ್ಷಾ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ಎಮ್‌ ಬಿ ಗಡ್ಡಿ, ಬಿ ಆರ್‌ ಮಣ್ಣೆರಿ, ಪ್ರಭುರಾಜ ಹಾದಿಮನಿ, ವಿಜಯ ತುಕೋಳ, ಸುನೀಲ ಹಬೀಬ, ಪ್ರವೀಣ ರಾಠೋಡ್‌, ಮಂಜು ವರಗಾ, ಮಹೇಶ ಹಿರೇಮಠ, ಪದ್ಮಾ ದಿವಾಣದ, ವಹಿದಾ ನಮಾಜಿ, ಶಾಂತಾ ಪೂಜಾರ, ಗೀತಾ ನಾಯಕ ಸೇರಿದಂತೆ ಇತರರು ಇದ್ದರು.

loading...