ಹಳಿಯಾಳ ರುಡ್‌ಸೆಟ್‌ ಮೇಲಿನ ಆರೋಪ ಖಂಡನೀಯ : ಹೆಗಡೆ

0
67

ಕನ್ನಡಮ್ಮ ಸುದ್ದಿ-ದಾಂಡೇಲಿ: ಹಳಿಯಾಳದ ವಿ.ಆರ್‌.ಡಿ ಮೆಮೋರಿಯಲ್‌ ಟ್ರಸ್ಟ್‌ ಹಾಗೂ ಕೆನರಾ ಬ್ಯಾಂಕ್‌ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರುಡ್‌ಸೆಟ್‌ ಕುರಿತು ಯಲ್ಲಾಪುರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಸುನಿಲ ಹೆಗಡೆ ಹಾಗೂ ಬಿಜೆಪಿಯ ಜಿಲ್ಲಾ ವಕ್ತಾರ ಪ್ರಮೋದ್‌ ಹೆಗಡೆ ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದದ್ದು ಮತ್ತು ಖಂಡನೀಯ ಎಂದು ದಾಂಡೇಲಿ ಬ್ಲಾಕ್‌ ಕಾಂಗ್ರೆಸ್ಸಿನ ಉಪಾಧ್ಯಕ್ಷ ವಿ.ಆರ್‌. ಹೆಗಡೆ ನುಡಿದರು.
ಅವರು ಕಾಂಗ್ರೆಸ್‌ ಪಕ್ಷ ಕರ್ನಾಟಕಕ್ಕೆ ಮಾದರಿಯ ಅಭಿವೃದ್ಧಿ ಪರ ಆಡಳಿತ ನೀಡಿದೆ ಬಿಜೆಪಿ ಮುಖಂಡರುಗಳಿಗೆ ಕಾಂಗ್ರೆಸ್‌ ಪಕ್ಷದ ಸಾಧನೆ ಕಂಡು ಅಸೂಯೆ ಮೂಡುತ್ತಿದೆ ಇದಕ್ಕಾಗಿಯೇ ಬಿಜೆಪಿಯವರು ಆಧಾರವಿಲ್ಲದ ಸುಳ್ಳಿನ ಕಥೆ ಕಟ್ಟಿ ಆಪಾದನೆ ಮಾಡುತ್ತಿರುವದನ್ನು ಸಾಮಾನ್ಯ ಜನರು ಕೂಡ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸ್ಥಳೀಯ ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಎಸ್‌.ಎಸ್‌. ಪೂಜಾರ ಹಿಂದೆಂದೂ ಕಾಣದ ಅಭಿವೃದ್ಧಿ ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಆಗಿರುವದನ್ನು ಜನ ಕಂಡು ಮೆಚ್ಚಿದ್ದಾರೆ. ಈ ಬಾರಿ ಬರುವ ಚುನಾವಣೆಯಲ್ಲಿ ಸಚಿವ ಆರ್‌.ವಿ ದೇಶಪಾಂಡೆಯವರು ರೂ.20 ಸಾವಿರಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆಂದರು. ಗೋಷ್ಠಿಯಲ್ಲಿ ಉ.ಕ ಜಿಲ್ಲೆಯ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಬಶೀರ ಗಿರಯಾಳ, ನಾಮ ನಿರ್ದೇಶಿತ ಸದಸ್ಯ ರಾಮಲಿಂಗ ಜಾಧವ, ಕಾಂಗ್ರೆಸ್‌ ಮುಖಂಡ ಕರಿಂ ಅಜರೆಕರ್‌ ಉಪಸ್ಥಿತರಿದ್ದರು.

loading...