ಸ್ಮಶಾನ ಜಾಗೆ ವಿವಾದ: ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ

0
67

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಹಲವು ದಶಕದಿಂದ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುವ ಭೂಮಿಯಲ್ಲಿ ವ್ಯಕ್ತಿಯೊಬ್ಬ ದಿಢೀರ್ ದಾಖಲೆ ಸೃಷ್ಠಿಸಿದ್ದು, ಶವ ಸಂಸ್ಕಾರಕ್ಕೆ ಬಿಡುತ್ತಿಲ್ಲ ಎಂದು ದಲಿತ ಪರ ಮುಖಂಡರು ಮಂಗಳವಾರ ರಾಮಾಪೂರ ಗ್ರಾ.ಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿಸಿದರು.

ರಾಮಾಪೂರ ಗ್ರಾಮದ ಬಳಿ ಶಂಕ್ರಪ್ಪ ಅಂಗಡಿ ಅವರ ಹೊಲದ ಬದಿಯಲ್ಲಿ 17 ಗುಂಟೆ ಗೌಂಟಾನ್ ಜಾಗೆಯಲ್ಲಿ ದಶಕದಿಂದಲೂ ಮಾದಿಗ ಸಮುದಾಯ ಶವ ಸಂಸ್ಕಾರ ನಡೆಯಿಸುತ್ತಾ ಬಂದಿದ್ದೇವೆ. ಆದರೆ, ಆ ಜಾಗೆಯೂ ನಮ್ಮ ಹೊಲದಲ್ಲಿದೆ ಎಂದು ಎಸ್. ಅಂಗಡಿ ತಕರಾರು ತೆಗೆದಿದ್ದಾರೆ. ಮಂಗಳವಾರ ನೀಲಪ್ಪ ಮಾದರ ಎಂಬುವರು ಮೃತಪಟ್ಟಿದ್ದು, ಶವಸಂಸ್ಕಾರಕ್ಕೆ ಅಡತಡೆಯಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೊಡಿಕೊಂಡರು.
ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ತಾ.ಪಂ ಇಓ ಎಂ.ವಿ ಚಳಗೇರಿ ರಾಮಾಪೂರ ಗ್ರಾಮದಲ್ಲಿನ ದುರ್ಗಾದೇವಿ ದೇವಸ್ಥಾನದಲ್ಲಿ ಶಾಂತಿ ಸಭೆಯನ್ನು ನಡೆಯಿಸಿದರು. ಬಳಿಕ ಅವರು ಮಾತನಾಡಿ, ಗೌಂಟಾನ್ ಜಾಗೆಯಲ್ಲಿ ಶವಸಂಸ್ಕಾರ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಗ್ರಾ.ಪಂ ವತಿಯಿಂದ ಶವ ಸಂಸ್ಕಾರದ ಜಾಗೆಯಂದು ಠರಾವು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಅನಿತಾ ಅಂಗಡಿ, ಪಿಡಿಓ ಬಸಯ್ಯ ಇಟಗಿಮಠ, ಪಿಎಸ್‍ಐ ಆರ್.ವೈ ಜಲಗೇರಿ ಇದ್ದರು. ಪ್ರತಿಭಟನೆಯ ನೇತೃತ್ವವನ್ನು ದುರಗಪ್ಪ ಕಟ್ಟಿಮನಿ, ಪ್ರಕಾಶ ಹೊಸಳ್ಳಿ, ದುರಗಪ್ಪ ಮಾದರ, ಯಮನೂರಪ್ಪ ಸನ್ನಕ್ಕಿ, ಮಂಜುನಾಥ ಬುರಡಿ, ಲಕ್ಷ್ಮಣ ಸನ್ನಕ್ಕಿ, ಬಸವರಾಜ ಮಾದರ, ಅಶೋಕ ಮಾದರ ವಹಿಸಿದ್ದರು.

loading...