ಬಿಜೆಪಿ ಪಕ್ಷದಿಂದ ಉತ್ತಮ ಆಡಳಿತ : ಕವಟಗಿಮಠ

0
60

ಕನ್ನಡಮ್ಮ ಸುದ್ದಿ-ನರಗುಂದ: ದೇಶದ 30 ರಾಜ್ಯಗಳಲ್ಲಿ ಈಗಾಗಲೇ 22 ರಾಜ್ಯಗಳಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಆಡಳಿತ ಹೊಂದಿವೆ. ತ್ರೀಪುರಾ ಹಾಗೂ ನಾಗಾಲ್ಯಾಂಡ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಜಯಸಾಧಿಸಿವೆ. ಬಿಜೆಪಿ ಉತ್ತಮ ಆಡಳಿತ ನೀಡಿ ಬಡಜನರ ಅನೂಕೂಲತೆಗಾಗಿ ಶ್ರಮಿಸುತ್ತಿದೆ ಎನ್ನುವುದಕ್ಕೆ ಈ ಚುನಾವಣೆಗಳೇ ಸಾಕ್ಷಿ ಎಂದು ಗದಗ ಜಿಲ್ಲಾ ವಿಧಾನಸಭೆ ಚುನಾವಣೆ ಬಿಜೆಪಿ ಉಸ್ತುವಾರಿ ವೀಕ್ಷಕ ಚಂದ್ರಶೇಖರ ಕವಟಗಿಮಠ ತಿಳಿಸಿದರು.
ಪಟ್ಟಣದಲ್ಲಿಯ ಮಾಜಿ ಶಾಸಕ ಸಿ.ಸಿ. ಪಾಟೀಲ ಅವರ ನಿವಾಸದ ಆವರಣದಲ್ಲಿ ರವಿವಾರ ಜರುಗಿದ ನವಕರ್ನಾಟ ನಿರ್ಮಾಣಕ್ಕಾಗಿ ನವಶಕ್ತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಬಿಜೆಪಿ ಎಂದಿಗೂ ಪರದಾಡುವುದಿಲ್ಲ. ಬಿಜೆಪಿ ಈ ಮೊದಲು ಜನಸಂಘವೆಂದು ಗುರುತಿಸಿದ ಸಂದರ್ಭದಲ್ಲಿ ಆಗಿನ ಶ್ಯಾಮಪ್ರಕಾಶ ಮುಖರ್ಜಿ ಮತ್ತು ಉಪಾಧ್ಯಾಯವರು ಮಾಡಿದ ಸಾಧನೆಗಳನ್ನು ತುಲನಾತ್ಮಕವಾಗಿ ಅಳವಡಿಸಿಕೊಂಡಿರುವ ಬಿಜೆಪಿ ಸಮಾಜದ ಎಲ್ಲ ಧರ್ಮಗಳನ್ನು ಒಂದು ಎಂದು ಕಾಣುವ ಮೂಲಕ ದೀನ,ದಲಿತರ ಬದುಕಿಗಾಗಿ ಶ್ರಮವಹಿಸುವ ಪಕ್ಷವಾಗಿದೆ ಹೀಗಾಗಿ ದೇಶದ 22 ರಾಜ್ಯಗಳಲ್ಲಿ ಬಿಜೆಪಿ ತನ್ನ ಆಡಳಿತ ನಡೆಸುತ್ತಿರುವುದು ಸತ್ಯ ಸಂಗತಿ. ದೇಶದಲ್ಲಿ ಓರ್ವ ಪ್ರಧಾನಿ ಇರಬೇಕೆನ್ನುವುದು ಜನಸಂಘದ ಧುರೀಣ ಶಾಮ ಪ್ರಕಾಶ ಮುಖರ್ಜಿಯವರು ತತ್ವವಾಗಿತ್ತು. ಇದನ್ನು ಆಗಿನಿಂದಲೇ ಬಿಂಭಿಸಿದ್ದರು. ಆದರೆ ಭಾರತದೇಶ ಹೊರತಾಗಿಯೂ ನಮ್ಮ ವ್ಯಾಪ್ತಿಯಲ್ಲಿಯೇ ಇರುವ ಜಮ್ಮುಕಾಶ್ಮೀರಕ್ಕೆ ಮತ್ತೋರ್ವ ಪ್ರಧಾನಿ. ದೇಶದಲ್ಲಿ ಇಬ್ಬರು ಪ್ರಧಾನಿಗಳಿರುವುದು ಸವಿಂಧಾನಾತ್ಮಕವಾಗಿ ನಿಯಮಮೀರಿದ್ದಾಗಿದೆ. ಕಾಂಗ್ರೆಸ್‌ ಪಕ್ಷ ನೆಹರು ಒಂದೇ ಮನೆತನದ ಪ್ರಧಾನಿಗಳನ್ನು ಎಷ್ಟೋ ವರ್ಷಗಳ ವರೆಗೆ ಮುನ್ನೆಡೆಸಿತು. ಪ್ರಧಾನಿಯನ್ನಾಗಿ ಮುಖರ್ಜಿಯವರನ್ನು ಮಾಡಲು ಹೊರಟರೆ ಅವರನ್ನು ರಾಷ್ಟ್ರಪತಿಗಳನ್ಣಾಗಿ ಮಾಡಿದ್ದು ಕಾಂಗ್ರೆಸ್‌ಎಂದು ಕಿಡಿಕಾರಿದರು. 1951 ರಿಂದ ಇದುವರೆಗೂ ಶಿಸ್ತುಬದ್ದ ಪಕ್ಷದ ಚುನಾವಣೆಗಳನ್ನು ಮಾಡುತ್ತ ತನ್ನ ಘನತೆ ಗೌರವಗಳನ್ನು ಕಾಪಾಡಿಕೊಂಡಿರುವುದು ಬಿಜೆಪಿ. ಈ ದೇಶದ ಶಿಸ್ತುಬದ್ದ ಹಾಗೂ ಶಾಂತಿ ನೆಮ್ಮದಿ ದೊರೆಯುವ ಆಡಳಿತ ಬಯಸುವ ಬಿಜೆಪಿ ಧೋರಣಗೆಳು ಇಂದು ದೇಶದ ಎಲ್ಲ ಜನಾಂಗದ ಸಮ್ಮತಿಪಡೆದುಕೊಂಡಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹಾಗೂ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಸಿ. ಪಾಟೀಲ ಮಾತನಾಡಿ, ಗದಗ ಹಾಗೂ ಶಿರಹಟ್ಟಿಗಳಲ್ಲಿ ಈಗಾಗಲೇ ನವಶಕ್ತಿ ಸಮಾವೇಶವನ್ನು ಎರಡು ದಿನದ ಹಿಂದೆ ಮಾಡಿ ಪೂರ್ಣಗೊಳಿಸಲಾಗಿದೆ. ದೀನ,ದಲಿತರ ಏಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಹೊಂದಿದ ಆಡಳಿತ ನೀತಿ ಜನತೆಗೆ ನೆಮ್ಮದಿ ತಂದಿದೆ. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ತಿಳಿಸಿದರು.
ಬಿಜೆಪಿ ವಿಭಾಗೀಯ ಕಾರ್ಯದರ್ಶಿ ಜಯತೀರ್ಥ ಕಟ್ಟಿ. ಬಿಜೆಪಿ ತಾಲೂಕ ಮಂಡಳದ ಅಧ್ಯಕ್ಷ ಎಂ.ಐ. ಮೇಟಿ, ಬಿಜೆಪಿ ಜಿಲ್ಲಾ ಮುಖಂಡ ಎಂ.ಎಸ್‌. ಕರಿಗೌಡ್ರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಕುಮಾರ ನೀಲಗುಂದ, ಚಂದ್ರು ದಂಡಿನ, ಎಂ.ಎಸ್‌. ಪಾಟೀಲ, ಶಶಿಮೌಳಿ ಕುಲಕರ್ಣಿ, ಎ.ಎಂ. ಹುಡೇದ, ಬಿ.ಬಿ. ಐನಾಪೂರ, ಶ್ರೀಪತಿ ಉಡುಪಿ, ಬಸವರಾಜ ಹುಲಕುಂದ, ಶಿವಾನಂದ ಮುತವಾಡ, ಈರಣ್ಣ ಹೊಂಗಲ, ಅಶೋಕ ಕುಲಕರ್ಣಿ, ಶಿವಪುತ್ರಪ್ಪ ಅವರಾದಿ, ಸುಕನ್ಯಾ ಸಾಲಿ, ಶಾರದಾ ಜವಳಿ, ರೇಣುಕಾ ಕೋರಿ, ಬಿ.ವ್ಹಿ. ಮರಿಗುದ್ದಿ, ಎನ್‌,ವ್ಹಿ. ಮೇಟಿ, ಅಶೋಕ ಹೆಬ್ಬಳ್ಳಿ, ಶಿವನಗೌಡ ಹೆಬ್ಬಳ್ಳಿ ಉಪಸ್ಥಿತರಿದ್ದರು. ಅಜ್ಜು ಪಾಟೀಲ ನಿರ್ವಹಿಸಿದರು.

loading...