ವನ್ಯಜೀವಿಗಳ ಸಂರಕ್ಷಣೆಗೆ ಯುವಜನತೆಯ ಸಹಕಾರ ಅಗತ್ಯ: ಓ.ಪಾಲಯ್ಯ

0
95

ದಾಂಡೇಲಿ : ತಲೆತಲಾಂತರಗಳಿಂದ ಸಂರಕ್ಷಿಸಿಕೊಂಡು ಬಂದಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕಾರ್ಯ ಪ್ರತಿಯೊಬ್ಬ ನಾಗರಿಕರನದ್ದಾಗಿದೆ. ವಿಶೇಷವಾಗಿ ವನ್ಯಪ್ರಾಣಿಗಳ ಸಂರಕ್ಷಣೆ ಮತ್ತು ಹಸಿರ ತಪ್ಪಲಿನ ಸಂರಕ್ಷಣೆಗೆ ಅರಣ್ಯ ಇಲಾಖೆಯ ಜೊತೆಗೆ ಯುವಜನತೆಯ ಸಹಕಾರ ಅತ್ಯಗತ್ಯ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಕ್ಷೇತ್ರ ನಿರ್ದೇಶಕÀ ಓ.ಪಾಲಯ್ಯ ಹೇಳಿದರು.
ಅವರು ಬಂಗೂರನಗರ ಪದವಿ ಪೂರ್ವ ಮಹಾವಿದ್ಯಾಲಯದ ಎನ್‌.ಎಸ್‌.ಎಸ್‌ ಘಟಕ ಸಹಯೋಗದಲ್ಲಿ ಕಾಲೇಜು ಸಭಾಭವನದಲ್ಲಿ ನಡೆದ ವಿಶ್ವ ವನ್ಯಜೀವಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೊಡ್ಡ ಗಾತ್ರದ ಬೆಕ್ಕಿನ ಜಾತಿಯ ಪ್ರಾಣಿಗಳಾದ ಹುಲಿ, ಚಿರತೆ, ಮುಂತಾದ ಪ್ರಾಣಿಗಳ ಕಳ್ಳಬೇಟೆಯನ್ನು ಮತ್ತು ಅವುಗಳ ಭಾಗಗಳ ಕಳ್ಳ ಮಾರಾಟವನ್ನು ತಡೆಯಲು ಅರಣ್ಯ ಇಲಾಖೆಯ ಜೊತೆಗೆ ಯುವ ಜನಾಂಗದ ಸಹಕಾರ ಅಗತ್ಯವಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಬಂಗೂರನಗರ ಪದವಿ ಪೂರ್ವ ಮಹಾವಿದ್ಯಾಲಯದ ಡಾ.ಎಸ್‌.ಎಸ್‌. ಕುಲಕರ್ಣಿಯವರು ಮಾತನಾಡಿ ಹುಲಿಯ ಆಹಾರ ಪಿರ್ಯಾಮಿಡ್‌ನ ತುತ್ತ ತುದಿಯಲ್ಲಿದ್ದು ಹುಲಿಯ ಸಂರಕ್ಷಣೆ ಮಾಡಿದರೆ ಎಲ್ಲ ಪ್ರಾಣಿಗಳ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದರು.
ಇನ್ನೋರ್ವ ಅತಿಥಿತಿಗಳಾಗಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೈ.ಎನ್‌.ಮುನವಳ್ಳಿ ಅವರು ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಗೂರನಗರ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಎಫ್‌.ಬಿ.ಹೋಳಿ ವಹಿಸಿ ಮಾತನಾಡುತ್ತ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಳಗಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಡಾ.ಸಂತೋಷ ಚವ್ಹಾಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾದ್ಯಾಪಕ ಡಾ.ಬಿ.ಎಲ್‌.ಗುಂಡುರ ವಂದಿಸಿದರು.

loading...