ಅರೇ ಕುರಹಟ್ಟಿ ಗ್ರಾಮ ವಿಕಾಸ ಯೋಜನೆಗೆ ಭೂಮಿ ಪೂಜೆ

0
80

ನವಲಗುಂದ : ಅರೇ ಕುರಹಟ್ಟಿ ಗ್ರಾಮ ವಿಕಾಸ ಯೋಜನೆಗೆ ಭೂಮಿ ಪೂಜೆ 1 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಆರಂಭ ಮಾಡಿದ ಶಾಸಕರು.ಪ್ರತ್ಯೇಕ ಗ್ರಾಮ ಪಂಚಾಯತ್‌ ಸ್ಥಾಪಿಸಲು ಸರಕಾರದಿಂದ ಸದನದಲ್ಲಿ ಲಿಖಿತ ಭರವಸೆಯನ್ನು ಪಡೆದುಕೊಂಡು ಬಂದ ಶಾಸಕರು. ಅರೇ ಕುರಹಟ್ಟಿ ಪ್ರತ್ಯೇಕ ಗ್ರಾಮ ಪಂಚಾಯತ್‌ ಸ್ಥಾಪನೆಗೆ ರಾಜ್ಯ ಸರ್ಕಾರ ಸದನದಲ್ಲಿ ಲಿಖಿತ ಭರವಸೆ ನೀಡಿದೆ ಎಂದು ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು. ಅವರು ಬುಧವಾರ ಅರೇಕುರಹಟ್ಟಿ ಗ್ರಾಮದಲ್ಲಿ ಗ್ರಾಮ ವಿಕಾಸ 1 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅರೇ ಕುರಹಟ್ಟಿ ಗ್ರಾಮದ ಜಿ.ಎಸ್‌. ನೀಲಪ್ಪಗೌಡರ, ಗುರಪ್ಪ ನಾಯ್ಕರ, ನಾರಾಯಣ ಮೇಟಿ, ಎನ್‌.ಜಿ. ಕೋನರಡ್ಡಿ, ಫಕೀರಪ್ಪ ಮಾಕಪ್ಪನವರ, ಶಿವಾನಂದ ಲಕ್ಕಣ್ಣವರ, ಶಂಭು ಕಮತರ, ರವಿ ಗುಮ್ಮಟ್ಟೆಣ್ಣವರ, ಮಹ್ಮದ ಹಾಜೀಸಾಬ ಆಡಿನ್‌, ಶಿವಾನಂದ ನೀಲಪ್ಪಗೌಡರ, ಇಮಾಮ್‌ ಹುಸೇನ ನಾಯ್ಕರ್‌, ನಿಂಗನಗೌಡ ನೀಲಪ್ಪಗೌಡರ, ಲಾಡಸಾಬ ಮುಂದಿನಮನಿ, ಪರಪ್ಪ ತೆಗ್ಗಿನಮನಿ, ನೀರಾವರಿ ಇಲಾಖೆ ಇಂಜಿನಿಯರ್‌ ಮಠದ, ಸಿಎಂಜಿಎಸ್‌ವೈ ಬಿರಾದಾರ, ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

loading...