ಪೇಪರ್‌ ಮಿಲ್‌ ಆವರಣದಲ್ಲಿ ಅಗ್ನಿ ಅವಘಡ-ತಪ್ಪಿದ ದುರಂತ

0
121

ಕನ್ನಡಮ್ಮ ಸುದ್ದಿ-ದಾಂಡೇಲಿ: ಸ್ಥಳೀಯ ಶ್ರೇಯಸ್‌ ಪೇಪರ್‌ ಮಿಲ್ಲಿನ ಆವರಣದಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳೀಯರ ಹಾಗೂ ಅಗ್ನಿಶಾಮಕ ದಳದವರ ಸೂಕ್ತ ಕಾರ್ಯಾಚರಣೆಯಿಂದ ಆಗಬಹುದಾದ ದುರಂತ ತಪ್ಪಿದಂತಾಗಿದೆ. ಶುಕ್ರವಾರ ಸಂಜೆ ಶ್ರೇಯಸ್‌ ಪೇಪರ್‌ ಮಿಲ್ಲಿನ ಆವರಣದಲ್ಲಿ ತ್ಯಾಜ್ಯ ವಸ್ತುಗಳನ್ನು ದಾಸ್ತಬನಿಟ್ಟಿರುವ ಸ್ಥಳದಲ್ಲಿ ಹಠತ್ತನೆ ಬೆಂಕಿ ತಗುಲಿದ್ದು, ಭಾರಿ ಪ್ರಮಾಣದಲ್ಲಿ ಅಗ್ನಿ ಆವರಿಸಿಕೊಂಡಿತ್ತು. ರಾಶಿ ಹಾಕಲಾಗಿದ್ದ ತ್ಯಾಜ್ಯ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದವರ ಹಾಗೂ ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಮುಂದಾಗಬಹುದಾದ ಭಾರಿ ಅನಾಹುತ ತಪ್ಪಿದಂತಾಗಿದೆ. ಬೆಂಕಿ ತಗುಲಿದ ಪಕ್ಕದಲ್ಲೆ ಕಾರ್ಖಾನೆಯಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ.

loading...