ಕಳಕಪ್ಪ ಬಂಡಿ ಆರೋಪದಲ್ಲಿ ಹುರಳಿಲ್ಲ : ಶ್ರೀಧರ

0
38

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಇತ್ತಿಚೆಗೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ಮನೆ ನೀಡಲು ಆಶ್ರಯ ಸಮಿತಿ ಸದಸ್ಯರು ಹಣ ಪಡೆದು ಅರ್ಜಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಆರೋಪದಲ್ಲಿ ಯಾವೂದೇ ಹುರಳಿಲ್ಲ ಎಂದು ಆಶ್ರಯ ಸಮಿತಿ ಸದಸ್ಯ ಶ್ರೀಧರ ಗಂಜಿಗೌಡರ ತಿರುಗೇಟು ನೀಡಿದರು.

ಪಟ್ಟಣದ ಜವಳಿ ಪ್ಲಾಟ್‍ನಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಬ್ಲಾಕ್ ಆಶ್ರಯ ಸಮಿತಿಯಿಂದ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಂದು ಪಕ್ಷದ ವಿರುದ್ಧ ಅಥವಾ ವ್ಯಕ್ತಿಯ ವಿರುದ್ಧ ಯಾವೂದೇ ಆರೋಪ ಮಾಡಬೇಕಿದ್ದರೆ ಅವುಗಳಿಗೆ ಸೂಕ್ತ ದಾಖಲೆಗಳಿದ್ದರೆ ಆರೋಪ ಮಾಡಬೇಕು ವಿನಹ ಸುಮ್ಮನೆ ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ ಎಂದು ಮಾಜಿ ಸಚಿವರು ಆಶ್ರಯ ಸಮಿತಿ ಸದಸ್ಯರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾಡಿರುವ ಆರೋಪಗಳು ಜನರ ದಿಕ್ಕುತಪ್ಪಿಸಲು ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದ ಅವರು, ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ವಾಜಪೇಯಿ ಬಡವಾಣೆಯಲ್ಲಿ ಮನೆ ಇದ್ದವರಿಗೆ ಮನೆ ನೀಡಿದ ಪರಿಣಾಮ ಕೆಲವರು ಬಾಡಿಗೆ ನೀಡಿದ್ದಾರೆ, ಇನ್ನೂ ಕೆಲವರು ಮಾರಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‍ನಿಂದ ಕೇವಲ ನಿರಾಶ್ರಿತರಿಗೆ ಮಾತ್ರ ಮನೆಗಳನ್ನು ನೀಡಬೇಕು ಎನ್ನುವ ಉದ್ಧೇಶವಿದೆ. ಆದರೆ ಕೆಲ ಬಿಜೆಪಿಯ ಕಾರ್ಯಕರ್ತರು ಹೇಳುವು ಅಂತೆಕಂತೆಗಳನ್ನು ಮುಂದಿಟ್ಟುಕೊಂಡು ಮಾಜಿ ಸಚಿವರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಹೀಗಾಗಿ ಇಂತಹ ಆರೋಪಗಳಿಗೆ ಸಾರ್ವಜನಿಕರು ಕಿವಿಗೊಡುವ ಅವಶ್ಯಕತೆಯಿಲ್ಲ ಎಂದರು.

ಪುರಸಭೆ ಸದಸ್ಯ ಶಿವರಾಜ ಘೊರ್ಪಡೆ ಮಾತನಾಡಿ, ಪಟ್ಟಣದಲ್ಲಿ ಮನೆಯಿಲ್ಲದ 1116 ನಿರಾಶ್ರರಿತರಿಗೆ ಮನೆ ನೀಡುವ ಉದ್ಧೇಶದಿಂದ ಕರೆಯಲಾಗಿದ್ದ ಅರ್ಜಿಗಳಿಗೆ ಅಂದಾಜು ಮೂರು ಪಟ್ಟು ಅರ್ಜಿಗಳು ಬಂದಿವೆ. ಹೀಗಾಗಿ ಪಾರದರ್ಶಕ ಹಾಗೂ ನಿರಾಶ್ರಿತರಿಗೆ ಮನೆ ನೀಡುವ ಉದ್ಧೇಶದಿಂದ ಅರ್ಜಿಗಳನ್ನು ಕೂಲಕುಂಶವಾಗಿ ಪರಶೀಲಿಸಲಾಗುತ್ತಿದೆ. ಅಲ್ಲದೆ ಪ್ರತಿಯೊರ್ವ ಫಲಾನುಭವಿಗಳ ಆಧಾರ್ ಜೋಡಣೆ ಮಾಡುವ ಮೂಲಕ ಅರ್ಜಿಗಳ ವಿಲೇವಾರಿ ನಡೆಸಲಾಗುತ್ತಿದೆ. ಹೀಗಾಗಿ ಇಲ್ಲಿ ಯಾವೂದೇ ಫಲಾನುಭವಿಗಳಿಂದ ಹಣ ಪಡೆದಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.
ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ, ಚಂಬಣ್ಣ ಚವಡಿ, ಸುಭಾನಸಾಬ ಆರಗಿದ್ದಿ, ಹಸನ ತಟಗಾರ, ವೆಂಕಟೇಶ ಮುದಗಲ್, ಉಮೇಶ ರಾಠೋಡ, ಕೊಟ್ರೇಶ ಚಿಲಕಾ, ದಾದು ಹಣಗಿ ಸೇರಿದಂತೆ ಇತರರು ಇದ್ದರು.

loading...