ಕಾಂಗ್ರೆಸ್ ಜನಪ್ರತಿನಿಧಿಗಳಿಂದ ಕುರುಬ ಸಮಾಜದ ನಿರ್ಲಕ್ಷ್ಯ: ಬೀರಪ್ಪ

0
55

ಗಜೇಂದ್ರಗಡ: ಪಟ್ಟಣದ ರೋಣ ರಸ್ತೆಯಲ್ಲಿರುವ ಜಿ.ಕೆ.ಬಂಡಿ ಗಾರ್ಡನಲ್ಲಿ ಸೋಮವಾರ ಹಾಲುಮತ ಸಮಾಜದ ಕೆಲ ಪ್ರಮುಖರು ನಡೆಸಿದ ಸಭೆಯನ್ನು ಗದಗ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬೀರಪ್ಪ ಬಂಡಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಹಿಂದಿನಿಂದಲೂ ಹಾಲುಮತ ಸಮಾಜದ ಬಾಂಧವರು ಕಾಂಗ್ರೆಸ್‍ನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಆದರೆ ಕಾಂಗ್ರೆಸ್‍ನಿಂದ ಆಯ್ಕೆಯಾದ ಜನಪ್ರನಿಧಿಗಳು ಮಾತ್ರ ನಮ್ಮ ಸಮಾಜವನ್ನು ನಿರ್ಲಕ್ಷ್ಯಿಸಿದೆ. ಅಲ್ಲದೆ ಹಾಲುಮತ ಸಮಾಜವನ್ನು ಕಾಂಗ್ರೆಸ್ ಪಕ್ಷವು ಕೇವಲ ಓಟ್‍ಬ್ಯಾಂಕ್‍ಗೆ ಸಿಮೀತ ಮಾಡಿಕೊಂಡಿರುವುದನ್ನು ಅರಿತು ಕೆಲವರು ಇತ್ತಿಚೆಗೆ ಕಾಂಗ್ರೆಸ್ ತೊರೆದು ಬಂದಿದ್ದಾರೆ. ಹೀಗಾಗಿ ನಾವೆಲ್ಲರೂ ಸಹ ರಾಜಕೀಯ ಪ್ರಜ್ಞೆಯನ್ನು ಬೆಳಸಿಕೊಳ್ಳುವ ಅವಶ್ಯಕತೆಯಿದೆ ಎಂದ ಅವರು, ರಾಜ್ಯದಲ್ಲಿ ಹಲವಾರು ಭಾಗ್ಯಗಳನ್ನು ನೀಡಿರುವ ಸಿದ್ದರಾಮಯ್ಯ ಅವರು ಹಾಲುಮತ ಸಮಾಜಕ್ಕೆ ಮಾತ್ರ ಈವರೆಗೂ ಯಾವೂದೇ ಭಾಗ್ಯವನ್ನು ನೀಡಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸರೆಸಿ ಬಿಜೆಪಿಯ ಮುಂಚೂಣಿ ನಾಯಕರಾಗಿರುವ ಮಾಜಿ ಡಿಸಿಎಂ ಈಶ್ವರಪ್ಪ ಹಾಗೂ ಹಾಲುಮತ ಸಮುದಾಯ ಅಭಿವೃದ್ಧಿಗಾಗಿ ಶ್ರಮಿಸುವ ಮಾಜಿ ಸಚಿವ ಕಳಕಪ್ಪ ಬಂಡಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸೋಣ ಎಂದರು.
ಮುಖಂಡ ಅಂದಪ್ಪ ಹಾರೋಗೇರಿ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಸಮುದಾಯದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ನಮಗೆ ಮತ ನೀಡಿ ಎಂದು ಬರುವ ಕಾಂಗ್ರೆಸ್ ನಾಯಕರಿಗೆ ಮತ ನೀಡಿದರೆ ಈ ಹಿಂದೆಯೂ ಹಾಲುಮತ ಸಮಾಜಕ್ಕೆ ಲಾಭವಾಗಿಲ್ಲ, ಮುಂದೆಯೂ ಆಗುವದಿಲ್ಲ. ಹೀಗಾಗಿ ರಾಜಕೀಯ ಕ್ಷೇತ್ರದಲ್ಲಿ ಪ್ರಭಲವಾಗಿ ಗುರಿತಿಸಲು ಅವಕಾಶಗಳನ್ನು ನೀಡುತ್ತಾ ಬಂದಿರುವ ಮಾಜಿ ಸಚಿವ ಕಳಕಪ್ಪ ಬಂಡಿ ಅವರನ್ನು ಬೆಂಬಲಿಸಿ ಕಾಂಗ್ರೆಸ್‍ಗೆ ತಕ್ಕಪಾಠ ಕಲಿಸಲು ಸಾಧ್ಯವಾಗುತ್ತದೆ ಎಂದರು.

ಬಿಜೆಪಿ ಯುವ ಮುಖಂಡ ಶ್ರೀಶೈಲ್ ಕಾಟಿ, ಶರಣಪ್ಪ ದೊಣ್ಣೆಗುಡ್ಡ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ಕೆಲಸ ಮಾಡುತ್ತಾ ಬಂದಿದ್ದರಿಂದ ಸಮುದಾಯಕ್ಕೆ ಎಂಎಲ್‍ಸಿ ಟಿಕೇಟ್ ನೀಡಬೇಕು ಎಂದಾಗ ಹಾಗೂ ಮತಕೇತ್ರದ ಅತ್ಯಂತ ದೊಡ್ಡ ಸಮುದಾಯವಾಗಿರುವ ಹಾಲುಮತ ಸಮುದಾಯಕ್ಕೆ ಟಿಕೇಟ್ ನೀಡಿ ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮಗೆ ಈಗ ಎಚ್ಚರವಾಗಿದೆಯಾ, ಟಿಕೇಟ್ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ ಕ್ಷಣವೇ ನಾವು ಸಹ ಕಾಂಗ್ರೆಸ್‍ನ ಓಟ್‍ಬ್ಯಾಂಕ್‍ನಂತೆ ಕೆಲಸ ಮಾಡುವದಿಲ್ಲ ಎಂದು ಹೊರಬಂದಿದ್ದೇವೆ. ಹೀಗಾಗಿ ಸಮುದಾಯದ ಬಗ್ಗೆ ವಿಶೇಷ ಕಾಳಜಿಯುಳ್ಳವರಾಗಿರುವ ಬಿಜೆಪಿಯ ಈಶ್ವರಪ್ಪ ಅವರನ್ನು ಬೆಂಬಲಿಸಿ ಮತೊಮ್ಮೆ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ಭವಿಷ್ಯದಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿಗೆ ಮತ ನೀಡುವಂತೆ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಮುಂದಾಗೋಣ ಎಂದರು. ಶರಣಪ್ಪ ಕಂಬಳಿ ಮಾತನಾಡಿದರು.
ಜಿ.ಪಂ ಮಾಜಿ ಸದಸ್ಯೆ ರೇಣುಕಾ ಕುರಿ, ಎಪಿಎಂಸಿ ಸದಸ್ಯ ಚಂದ್ರಶೇಖರ ಗ್ಯಾನಪ್ಪನವರ, ರಾಮಣ್ಣ ಶಿಂಗಟಾಲಕೇರಿ, ನೀಲಪ್ಪ ಗುರಿಕಾರ, ಶ್ರೀಶೈಲಪ್ಪ ಹೆಗ್ಗಣ್ಣವರ, ಎಸ್.ಬಿ.ತೆಗ್ಗಿನಕೆರಿ, ಶರಣಪ್ಪ ಬೆನಕನವಾರಿ, ಪರಶುರಾಮ ಚಿಲಝರಿ, ರಂಗನಾಥ ಮೇಟಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

loading...