ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ: ಷಣ್ಮುಖಪ್ಪ

0
48

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪಟ್ಟಣದ ಪ್ರತಿಯೊಂದು ಬಡಾವಣೆಯಲ್ಲಿನ ಸಮಸ್ಯೆಗಳಿಗೆ ಅದರಲ್ಲೂ ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರಕ್ಕೆ ನೀಡುವ ಪ್ರತಿಯೊಂದು ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದು ಪುರಸಭೆ ನೂತನ ಉಪಾಧ್ಯಕ್ಷ ಷಣ್ಮುಖಪ್ಪ ಚಿಲಝರಿ ಹೇಳಿದರು.

ಪಟ್ಟಣದ ಪುರಸಭೆಯ ಉಪಾಧ್ಯಕ್ಷ ಸ್ಥಾನ ತೆರವಾದ ಹಿನ್ನಲೆಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಮೊದಲ ಕರ್ತವ್ಯವಾಗಿದೆ ಎನ್ನುವ ತತ್ವವನ್ನು ಅಕಷರ ಸಹ ಜೀವನದಲ್ಲಿ ಅಳವಡಿಸಿಕೊಂಡಿರುವ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಆಡಳಿತ ನನಗೆ ಮಾದರಿಯಾಗಿದೆ. ಹೀಗಾಗಿ ಸ್ಥಳೀಯ ಯಾವೂದೇ ಬಡಾವಣೆಯಲ್ಲಿನ ನಿವಾಸಿಗಳಿಗೆ ಎದುರಾಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಮರುಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಪರಿಸಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದರು.

ಮಾಜಿ ಪುರಸಭೆ ಸದಸ್ಯ ಬಸವರಾಜ ಬಂಕದ ಹಾಗೂ ಶರಣಪ್ಪ ಚಳಗೇರಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಯ ಜೊತೆಗೆ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ನಡೆಸುತ್ತಾ ಬಂದ ಹೋರಾಟದ ಪ್ರತಿಫಲವಾಗಿ ಪಕ್ಷವು ಉಪಾಧ್ಯಕ್ಷ ಸ್ಥಾನವನ್ನು ನಮ್ಮವರಿಗೆನೀಡಿರುವುದು ಖುಷಿ ತಂದಿದೆ. ಹೀಗಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರು ನಮ್ಮ ಸಮುದಾಯದ ಮೇಲಿಟ್ಟಿರುವ ವಿಶ್ವಾಸ ಹಾಗೂ ಪ್ರೀತಿಯನ್ನು ಎಂದಿಗೂ ಮರೆಯುವದಿಲ್ಲ ಎಂದರು.
ಇದಕ್ಕೂ ಮುನ್ನ ಪುರಸಭೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾವೂದೇ ಪ್ರತಿಸ್ಪರ್ದಿಯಿಂದ ನಾಮ ಪತ್ರ ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿ ಶಿವಲಿಂಗಪ್ರಭು ವಾಲಿ ಅವರು ಷಣ್ಮುಖಪ್ಪ ಚಿಲಝರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಈ ವೇಳೆ ಸ್ಥಾಯಿ ಕಮೀಟಿ ಚೇರಮನ ಪ್ರಭು ಚವಡಿ, ಸದಸ್ಯರಾದ ಅಶೋಕ ವನ್ನಾಲ, ಶರಣಪ್ಪ ರೇವಡಿ, ರವಿ ಕಲಾಲ, ಮಂಜುನಾಥ ಬಡಿಗೇರ, ಸುಮಿತ್ರಾ ತೊಂಡಿಹಾಳ, ವಿಜಯಲಕ್ಷ್ಮಿ ಚೆಟ್ಟರ ಸೇರಿಂದತೆ ಇತರರು ಸಿಹಿ ತಿನಿಸಿ ಅಭಿನಂದನೆ ಸಲ್ಲಿಸಿದರು.
ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ, ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಸಿ.ವಿ.ಕುಲಕರ್ಣಿ ಹಾಗೂ ದುರಗಪ್ಪ ಬಳೂಟಗಿ, ಮುತ್ತಣ್ಣ ಚೆಟ್ಟರ, ಯಲ್ಲಪ್ಪ ಬಂಕದ ಸೇರಿದಂತೆ ಇತರರು ಇದ್ದರು.

loading...