9ರಂದು ಜಿಲ್ಲೆಗೆ ಕುಮಾರಸ್ವಾಮಿ ಆಗಮನ: ಶಂಕರ ಮಾಡಲಗಿ

0
70

ಕನ್ನಡಮ್ಮ ಸುದ್ದಿ-ಬೆಳಗಾವಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಅವರು ಕುಮಾರಪರ್ವ ಸಮಾವೇಶಗಳನ್ನು ನಡೆಸಿ ಯಶಸ್ವಿಗೊಳಿಸಿದ್ದಾರೆ. ಅದರಂತೆ ಎಪ್ರಿಲ್ 9 ಹಾಗೂ 10 ರಂದು ಬೆಳಗಾವಿ ಜಿಲ್ಲೆಯಲ್ಲಿ ಕುಮಾರಪರ್ವ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಮಾತನಾಡಿದ ಅವರು, ಎಪ್ರಿಲ್ 9ರಂದು ಕುಮಾರಸ್ವಾಮಿ ಅವರು ಬಸವನ ಬಾಗೇವಾಡಿಯಿಂದ ಹೆಲಿಪ್ಯಾಡ್ ಮೂಲಕ ಅಥಣಿಗೆ ಕ್ಷೇತ್ರಕ್ಕೆ ಆಗಮಿಸಿ 11.30ರಿಂದ 1 ಗಂಟೆವರೆಗೆ ಕುಮಾರಪರ್ವ ಸಮಾವೇಶದಲ್ಲಿ ಭಾಗವಹಿಸಿ ರೈತ, ದಿನ ದಲಿತರ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳ ಬಗ್ಗೆ ಮಾತನಾಡಲಿದ್ದಾರೆ. ಅಥಣಿಯಿಂದ ಖಾನಾಪುರಕ್ಕೆ 1.30ಕ್ಕೆ ತೆರಳಿ 2 ಗಂಟೆಗೆ ಖಾನಾಪೂರಕ್ಕೆ ತೆರಳಿ ಅಲ್ಲಿ ಕುಮಾರಪರ್ವ ಸಮಾವೇಶದಲ್ಲಿ ಭಾಗವಹಿಸಿ, ಸಂಜೆ 5 ಗಂಟೆಗೆ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುರಗೋಡ ಹೋಬಳಿಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಬೈಲಹೊಂಗಲದಲ್ಲಿ ಪಕ್ಷದ ಕಾರ್ಯಕರ್ತ ಬಾಬು ಡಮ್ಮಣಗಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ವಿವರಿಸಿದರು.

ಅದೇ ರೀತಿ ಎಪ್ರಿಲ್ 10 ರಂದು 10.30ಕ್ಕೆ ಹೀರೆಬಾಗೇವಾಡಿಗೆ ಆಗಮಿಸಿ 12 ಗಂಟೆಗೆ ಕುಮಾರಪರ್ವ ಸಮಾವೇಶದಲ್ಲಿ ಭಾಗವಹಿಸಿ ಅಲ್ಲಿಂದ ನವಲಗುಂದ, ನರಗುಂದ ತೆರಳಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಇರುವ 18 ಕ್ಷೇತ್ರದಲ್ಲಿನ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನುಳಿದ ಕ್ಷೇತ್ರದ ಅಭ್ಯರ್ಥಿಗಳ ಕೂಡಲೆ ನೇಮಕ ಮಾಡಲಾಗುವುದೆಂದರು.

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ,ಈರಣ್ಣಾ ರೇವಡೆ, ಗಿರೀಶ ಗೋಕಾಕ, ಸಂತೋಷ ಉಪಾದ್ಯೆ, ಸುಭಾಸ ಪೂಜಾರಿ, ಗೌಸ್ ಖಾನಾಪೂರೆ, ಬಿ.ಎಸ್ ರುದ್ರಗೌಡ್ರ, ಕಲಿಂಮುಲ್ಲಾ ಮಾಲಿವಾಡೆ ಸೇರಿದಂತೆ ಜೆಡಿಎಸ್ ಮುಂಡರು ಹಾಜರಿದ್ದರು.

loading...