ಪಕ್ಷದ ನಡೆ ಖಂಡಿಸಿ ಸಾಮೂಹಿಕ ರಾಜೀನಾಮೆ: ಉಮೇಶ

0
55

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರಾಗಿ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದರು ಸಹ ಪಕ್ಷದಲ್ಲಿ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಪಕ್ಷದ ನಡೆ ಖಂಡಿಸಿ ಎಲ್ಲಾ ಪದಾಧಿಕಾರಿಗಳು ಎರಡು ದಿನಗಳಲ್ಲಿ ಸಾಮೂಹಿಕವಾಗಿ ಪಕ್ಷಕ್ಕೆ ರಾಜಿನಾಮೆ ನೀಡುತ್ತೇವೆ ಎಂದು ಜೆಡಿಎಸ್ ತಾಲೂಕಾ ಕಾರ್ಯಾಧ್ಯಕ್ಷ ಉಮೇಶ ಮಲ್ಲಾಪುರ ಹೇಳಿದರು.

ಪಟ್ಟಣದ ಸೇವಾಲಾಲ ಬಡಾವಣೆಯ ಬಸವರಾಜ ಮಾಳೊತ್ತರ ಅವರ ನಿವಾಸದಲ್ಲಿ ಗುರುವಾರ ನಡೆದ ಜೆಡಿಎಸ್ ಪಕ್ಷದ ಪ್ರಮುಖರ ಚಿಂತನಾ-ಮಂಥನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹಲವಾರು ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಕೆಲ ದಶಕಗಳಿಂದ ಈ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುತ್ತಾ ಬಂದಿರುವ ನಾಯಕರು ಪಕ್ಷದ ಸಂಘಟನೆಗಾಗಿ ನೀಡಿದ ಸಲಹೆಗಳಿಗೆ ಕನಿಷ್ಠ ಸಕಾರಾತ್ಮಕವಾಗಿ ಸ್ಪಂದನೆ ದೊರೆಯುತ್ತಿಲ್ಲ. ಆದರೆ ಇತ್ತಿಚೆಗೆ ಪಕ್ಷಕ್ಕೆ

ಸೇರ್ಪಡೆಯಾದವರ ಮಾತುಗಳಿಗೆ ಮೊದಲ ಆಧ್ಯತೆ ನೀಡುತ್ತಾ ನಮ್ಮನ್ನು ನಿರ್ಲಕ್ಷ್ಯಿಸುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದ ಅವರು, ಕಳೆದ 15 ವರ್ಷಗಳಿಂದ ರೈತರ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುತ್ತ ಬಂದಿರುವ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಸಹ ಜಿಲ್ಲಾಧ್ಯಕ್ಷರಿಂದ ಹಿಡಿದು ಪಕ್ಷದ ಪ್ರಮುಖ ವರಿಷ್ಠರ ಗಮನಕ್ಕೆ ತಂದರೂ ಸಹ ಯಾವೂದೇ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಪಕ್ಷವನ್ನು ತ್ಯಜಿಸಲು ಮುಂದಾಗುತ್ತಿದ್ದೇವೆ ಎಂದರು.
ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ನವಲಗುಂದ ಹಾಗೂ ಎಸ್.ಟಿ ಘಟಕದ ತಾಲೂಕಾಧ್ಯಕ್ಷ ಬಸವರಾಜ ಮಾಳೋತ್ತರ ಮಾತನಾಡಿದರು. ಈ ವೇಳೆ ಹಿಂದುಳಿದ ಘಟಕದ ಅಧ್ಯಕ್ಷ ದೇವಿಂದ್ರಪ್ಪ ಹುಡೇದ, ಎಸ್.ಟಿ ಘಟಕದ ತಾಲೂಕಾಧ್ಯಕ್ಷ ಬೀಮಪ್ಪ ತಳವಾರ, ಉಪಾಧ್ಯಕ್ಷ ಮೈಲಾರಪ್ಪ ದೇಶಣ್ಣವರ, ತಾಲೂಕಾ ಸಂಘಟನಾ ಕಾರ್ಯಾದರ್ಶಿ ವೀರನಗೌಡ ಪೊಲೀಸ್ ಪಾಟೀಲ ಮುಖಂಡರಾದ ನಾಗರಾಜ ಹೊಸಮನಿ, ಯಲ್ಲಪ್ಪ ನಾಗರಾಳ, ಮಲ್ಲಪ್ಪ ಕುರಿ, ಬೀಮಪ್ಪ ಗುಗಲೋತ್ತರ, ಈರಯ್ಯ ಹಿರೇಮಠ, ಬೀಮನಗೌಡ ಗೌಡ್ರ, ಸುನೀಲ್ ಕುರಿ ಸೇರಿಂದತೆ ಇತರರು ಉಪಸ್ಥಿತರಿದ್ದರು.

loading...