ಸಂಪನ್ನಗೂಂಡ ಬರವಣಿಗೆ ಕಲಿಕಾ ಶಿಬಿರ

0
30

ಕನ್ನಡಮ್ಮ ಸುದ್ದಿ-ಶಿರಸಿ: ಬೇಸಿಗೆ ರಜೆಯ ಖುಷಿಯಲ್ಲಿರುವ ಮಕ್ಕಳು ಕೈಯಲ್ಲಿ ಪೆನ್ನು ಹಿಡಿದು, ಕತೆ, ಕವನ, ಪ್ರಬಂಧ ಬರೆಯುವ ಕಲೆಯನ್ನು ಕಲಿತುಕೊಂಡರು. ಕನ್ನಡ ಭಾಷೆಯ ಸೊಡಗಿನ ಸವಿಯನ್ನು ಸವಿದರು.

ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ಬರವಣಿಗೆ ಕಲಿಕಾ ಶಿಬಿರವು ಶನಿವಾರ ಮುಕ್ತಾಯಗೊಂಡಿತು. ಕಿಲಾರದ ವಿಕ್ರಮ ಹೆಗಡೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಕ್ಕಳಿಗೆ ಬರವಣಿಗೆ ಕೌಶಲ ಹೇಳಿಕೊಟ್ಟರು.
ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಮೊಬೈಲ್, ಟಿ.ವಿ. ಯಾವುದನ್ನೂ ನೋಡದೇ, ಪುಸ್ತಕವನ್ನು ಓದಲು ಆರಂಭಿಸಿದೆ. ಪುಸ್ತಕದ ಓದು ನನ್ನಲ್ಲಿ ಜ್ಞಾನವನ್ನು ಬೆಳೆಸಿದ್ದಲ್ಲದೇ, ಬರವಣಿಗೆಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವಂತೆ ಮಾಡಿತು’ ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಧುಮತಿ ಹೆಗಡೆ ಸ್ವಾಗತಿಸಿದರು. ಪ್ರತಿಮಾ ಸ್ವಾದಿ ವಂದಿಸಿದರು. ಪ್ರಮೀಳಾ ಭಟ್ ನಿರೂಪಿಸಿದರು.
ಆಶಾ ಪೈ, ಆಶಾ ಹೆಗಡೆ, ದೀಕ್ಷಿತಾ ಭಟ್, ರಾಜಲಕ್ಷ್ಮಿ ಹೆಗಡೆ ಉಪಸ್ಥಿತರಿದ್ದರು.

loading...