ಅಕ್ರಮ ಕರಪತ್ರ ಸಾಗಿಸುತ್ತಿದ್ದ ವಾಹನ ವಶ

0
35

ಶಿಗ್ಗಾವಿ : ಪರವಾನಿಗೆ ಇಲ್ಲದೇ ಅಕ್ರಮವಾಗಿ ಕರಪತ್ರ ಹಾಗೂ ಬ್ಯಾನರ್‍ಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಚಾಲಕನನ್ನು ಭಂಧಿಸಿದ ಘಟನೆ ಭಾನುವಾರ ತಾಲೂಕಿನ ಹುಲಗೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪಾಣಿಗಟ್ಟಿ ಚೆಕ್ ಪೋಷ್ಟ್ ಬಳಿ ನಡೆದಿದೆ.

ಖಚಿತ ಮಾಹಿತಿ ಆಧರಿಸಿ ಚುನಾವಣಾ ಅಧಿಕಾರಿ ಮಹಮ್ಮದ್ ರೋಷನ್ ನೇತೃತ್ವದಲ್ಲಿ ವಾಹನ ಪರೀಶೀಲನೆ ಮಾಡಲಾಗಿ ಕುಂದಗೋಳ ವಿಧಾನ ಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಎಮ್ ಎಸ್ ಅಕ್ಕಿ ಅವರ ಚುನಾವಣಾ ಪ್ರಚಾರದ 2 ಸಾವಿರ ಕರಪತ್ರ ಹಾಗೂ ಬ್ಯಾನರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು ಪರೀಕ್ಷಾರ್ಥ ತಹಶೀಲ್ದಾರ ಶ್ರೀಧರ ಹಾಗೂ ವಿವಿಧ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

loading...