ಎಂ.ಬಿ.ಪಾಟೀಲ ಬಬಲೇಶ್ವರದ ವಿವಿಧ ಪ್ರದೇಶಗಳಿಗೆ ಭೇಟಿ

0
54

ವಿಜಯಪುರ: ಜಲಸಂಪನ್ಮೂಲ ಸಚಿವ, ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ ಮತಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ನೂತನ ತಾಲೂಕು ಕೇಂದ್ರ ಬಬಲೇಶ್ವರದಿಂದ ಆರಂಭಿಸಿದ್ದು, ಶನಿವಾರ ಬಬಲೇಶ್ವರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಸಚಿವರೊಂದಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಪಾಟೀಲ, ಜಿ.ಪಂ ಸದಸ್ಯ ಉಮೇಶ ಕೊಳಕುರ, ಜಿ.ಪಂ ಮಾಜಿ ಉಪಾಧ್ಯಕ್ಷ ವಿ.ಎನ್.ಬಿರಾದಾರ, ಬಿ.ಜಿ.ಬಿರಾದಾರ, ಡಾ. ಎಂ.ಪಿ.ಬಿರಾದಾರ, ಈರಗೊಂಡ ಬಿರಾದಾರ, ಡಾ. ಪ್ರಕಾಶ ಬಿರಾದಾರ, ವಿದ್ಯಾರಾಣಿ ತುಂಗಳ, ಭಾರತಿ ದೊಡಮನಿ, ಸವಿತಾ ವಗ್ಗರ, ಆನಂದ ಬಿರಾದಾರ, ಚಂದ್ರಶೇಖರ ಬಿರಾದಾರ, ರವಿ ಬಡಚಿ, ಹಣಮಂತ ಬಡಚಿ, ರಾಜಗುರು ಉಳ್ಳಾಗಡ್ಡಿ, ಶಿವು ಕೊಟ್ಯಾಳ, ಪುಟ್ಟು ತಟಗಾರ, ಸಾಬು ಉಳ್ಳಾಗಡ್ಡಿ, ಹಣಮಂತ ನಂದಿಗೊಂಡ, ಶೆಟ್ಟೆಪ್ಪ ಬಂಡಿವಡ್ಡರ, ಗುರಪ್ಪ ವಡ್ಡರ, ಶಿವಲಿಂಗಪ್ಪ ಯಮನದ, ವಿಲಾಸ ಕಾಂಬಳೆ, ಮಲ್ಲು ಮಡ್ಡಿಮನಿ ಮತ್ತಿತರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ನಂತರ ಎಂ.ಬಿ.ಪಾಟೀಲರು ನಿಡೋಣಿ, ನಾಗರಾಳ, ಕುಮಠೆ, ಹೆಬ್ಬಾಳಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದರು.

loading...