ವಕೀಲರ ಸಹಕಾರದಿಂದ ಲೋಕ ಅದಾಲತ್ ಯಶಸ್ವಿ: ಪಾಟೀಲ

0
69

ಕನ್ನಡಮ್ಮ ಸುದ್ದಿ- ಬೆಳಗಾವಿ : ನ್ಯಾಯವಾದಿಗಳು ಹಾಗೂ ವಕೀಲರ ಸಹಕಾರದಿಂದ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ. ಅದಾಲತ್‍ಗೆ ಬಂದಿರುವ ಕಕ್ಷೀದಾರರು ತಮ್ಮ ಕೇಸ್‍ಗಳನ್ನು ಬಗೆ ಸೇರಿಸಿಕೊಳ್ಳಿ ಎಂದು ಹೈಕೋರ್ಟ್ ಜಡ್ರ್ಜ ಬಿ.ಎಸ್ ಪಾಟೀಲ ಹೇಳಿದರು.ಅವರು ಬೆಳಗಾವಿ ಜಿಲ್ಲಾ ಕಾನೂನು ಪ್ರಾಧಿಕಾರ ದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಜನರು ಹಲವು ವರ್ಷಗಳಿಂದ ನಿರ್ಣಯ ವಾಗದ ತಮ್ಮ ಕೇಸ್ ಗಳನ್ನು ಬಗೆ ಹರಿಯುತ್ತವೆ ಎಂಬ ನಿರೀಕ್ಷೆ ಹಾಗೂ ಉತ್ಸಾಹದಿಂದ ಆಗಮಿಸಿದ್ದು ,ಕಕ್ಷೀದಾರರು ತಮ್ಮ ಕೇಸ್ ಗಳನ್ನು ಬಗೆ ಸೇರಿಸಿಕೊಳ್ಳಿ ಎಂದರು. ಒಂದೊಂದು ಬಾರಿ ಸಮಯದ ಒತ್ತಡ ದಿಂದ ಶ್ರೀಘ್ರ ಪರಿಹಾರ ನೀಡಲು ಅಸಾಧ್ಯ ವಾಗುತ್ತದೆ. ರಾಜ್ಯ ದ ವಿವಿಧ ಜಿಲ್ಲೆಗಳಲ್ಲಿ ಲೋಕ ಅದಾಲತ್ ನಡೆಸಲಾಗಿದೆ ಅದೇ ರೀತಿ ಬೆಳಗಾವಿಯಲ್ಲೂ ರಾಷ್ಟೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರದಾನ ಜಿಲ್ಲಾ ನ್ಯಾಯಾಧೀಶ ಸತೀಶ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಬೆಳಗಾವಿ ಜಿಲ್ಲೆಗೆ ಇಂದು ಸುದಿನವಾಗಿದೆ. ಲೋಕ್ ಅದಾಲತ್ ನಲ್ಲಿ 4680 ಕೇಸ್ ಗಳು ಭಾಗಿಯಾಗಿದ್ದಾವೆ. 480 ಜರ್ಡ್ ಮಾಡುವಂತಹ ಕೆಲಸವನ್ನು ಲೋಕ ಅದಾಲತ್ ಮಾಡುತ್ತಿವೆ ಎಂದರು.
ಕಕ್ಷೀದಾರರು ಹೆಚ್ಚು ಹೆಚ್ಚು ನ್ಯಾಯಾಲಯ ಕ್ಕೆ ಆಗಮಿಸುತ್ತಾರೆಂದರೆ ಜನರಿಗೆ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಮೇಲ್ನೋಟಕ್ಕೆ ಅರ್ಥ ವಾಗುತ್ತದೆ ಎಂದು ಹೇಳಿದರು.
ಇಲ್ಲಿ ಯವರೆಗೆ 28 ಸಾವಿರ ಕೇಸ್ ಗಳನ್ನು ಲೋಕ ಅದಾಲತ್ ನಲ್ಲಿ ಬಗೆ ಹರಿಸಲಾಗಿದೆ ಎಂದರು.
ಇದೇ ವೇಳೆ ಕಾರ್ಮಿಕ ನ್ಯಾಯಾಲಯದಡಿ ಕೇಸ್ ಬಗೆ ಹರಿಸಿದವರಿಗೆ ಹೈಕೋರ್ಟ್ ಜಡ್ರ್ಜ ಬಿ.ಎಸ್ ಪಾಟೀಲ ಚೇಕ್ ವಿತರಿಸಿದರು.
ಈ ಸಂದರ್ಭದಲ್ಲಿ ನ್ಯಾಯಾದಿಶರು, ವಕೀಲರು, ಕಕ್ಷೀದಾರರು ಪಾಲ್ಗೊಂಡಿದ್ದರು.

loading...