ಶಿರಸಿ‌ ಶಾಸಕರು ಸುಳ್ಳನ್ನೇ ಸರಮಾಲೆ ಮಾಡಿಕೊಂಡು ಇನ್ನೊಬ್ಬರ ಮೇಲೆ ಆಪಾದನೆ ಮಾಡುತ್ತಿದ್ದಾರೆ.

0
86
 ಶಿರಸಿ: ಶಿರಸಿ‌ ಶಾಸಕರು ಸುಳ್ಳನ್ನೇ ಸರಮಾಲೆ ಮಾಡಿಕೊಂಡು ಇನ್ನೊಬ್ಬರ ಮೇಲೆ ಆಪಾದನೆ ಮಾಡುತ್ತಿದ್ದಾರೆ.ಇಂದು ಶಿರಸಿಯ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ನಗರದ ಪಕ್ಷ ದ ಪದಾಧಿಕಾರಿಗಳು, ಕಾರ್ಯಕರ್ತರು,ಮುಖಂಡರು, ಜನ ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಮೇಲಿನಂತೆ ಹೇಳಿದರು.
ಇಂದು ಕರೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಜಿಲ್ಲೆಯ ಎಲ್ಲ ಕಾರ್ಯಕರ್ತರು ,ಮುಖಂಡ ರ ಅಭಿಪ್ರಾಯ ಗಳನ್ನು ಪಡೆದು ಅವರ ಅನಿಸಿಕಯಂತೆ ತನ್ನನ್ನು ಶಿರಸಿ ಸಿದ್ಧಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.
ಇದಕ್ಕೆ ಕಾರಣೀಭೂತರಾದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯಾಧ್ಯಕ್ಷ ಪರಮೇಶ್ವರ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ, ಕಾರ್ಯಾಧ್ಯಕ್ಷರಾದ ಎಸ್ ಆರ್ ಪಾಟೀಲ್, ದಿನೇಶ್ ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್  ಮತ್ತು ಎಲ್ಲ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಕಳೆದ ಇಪ್ಪತ್ತೈದು ವರ್ಷಗಳಿಂದ ಪಕ್ಷದ ಶಾಸಕರಿಲ್ಲದೇ ಕಂಗೆಟ್ಟಿದ್ದ ಕಾರ್ಯಕರ್ತರಿಗೆ ಗೆಲ್ಲುವ ಅಭ್ಯರ್ಥಿ ಎಂದು ಉತ್ಸಾಹ ತುಂಬುವ ಕೆಲಸ ಮಾಡಿದ್ದಾರೆ.ಅವರ ಸೂಚನೆಯಂತೆ ತಾವೆಲ್ಲ ಒಗ್ಗಟ್ಟಾಗಿ ಪ್ರಚಾರ ಕೈಗೊಂಡು ಮತದಾರರ ಮನವೊಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರುವ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜಿಲ್ಲೆಯ ಎಲ್ಲ ಆರೂ ಕ್ಷೇತ್ರ ಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೆಸ್ ಬಲಿಷ್ಠವಾಗಿದೆ ಎನ್ನುವುದನ್ನು ತೋರಿಸಬೇಕಾಗಿದೆ.ಎಲ್ಲ ಕಾರ್ಯಕರ್ತರು, ಮುಖಂಡರು ಮುತುವರ್ಜಿ ವಹಿಸಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ಸರಕಾರದ ಸಾಧನೆಗಳನ್ನು ಮನೆಮನೆಗೆ ಹೋಗಿ ಜನಸಾಮಾನ್ಯರಿಗೆ ತಿಳಿಸುವ ಮೂಲಕ ಮತದಾರರ ಮನಸ್ಸನ್ನು ತಲುಪಿದ್ದಾರೆ,ನೊಂದಿರುವ ಶೋಷಿತ  ವರ್ಗಗಳಿಗೆ ಅನೇಕ ಭಾಗ್ಯಗಳನ್ನು ನೀಡುವ ಮುಖಾಂತರ ಅವರ ನೋವುಗಳನ್ನು ನೀಗಿಸಿದ  ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಧಿಕಾರ ವಹಿಸಿಕೊಂಡ ಕ್ಷಣದಲ್ಲೇ ಅನ್ನ ಭಾಗ್ಯ ನೀಡಿದ ಮಹಾನ್ ವ್ಯಕ್ತಿ. ಜನಸಾಮಾನ್ಯರ ಪ್ರೀತಿ ವಿಶ್ವಾಸ ಕ್ಕೆ ಪಾತ್ರವಾದ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿಯವರ ಮಾರ್ಗದರ್ಶನ ದಲ್ಲಿ ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನವಚೈತನ್ಯ ವನ್ನು ತುಂಬಿಕೊಂಡು ಉತ್ಸಾಹ ದಿಂದ ಸಾಗುತ್ತಿದೆ.ಅನೇಕ ಉಪಚುನಾವಣೆಗಳಲ್ಲಿ‌ ಜಯಗಳಿಸಿದ ಪಕ್ಷ, ಕರ್ನಾಟಕ ದಲ್ಲಿ ರಾಹುಲ್ ಗಾಂಧಿಯವರು ರಾಜ್ಯದಾದ್ಯಂತ ಮಿಂಚಿನ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ಹುರಿದುಂಬಿಸಿ ಚುನಾವಣೆ ಗೆಲ್ಲಲು ಸ್ಪೂರ್ತಿ ತುಂಬಿದ್ದಾರೆ.ಮಾನ್ಯ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಯವರ ಚುರುಕಾದ ಕಾರ್ಯವೈಖರಿ ಯಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತಂದು ಸಮರೋಪಾದಿಯಲ್ಲಿ ಅನುಷ್ಠಾನ ಗೊಳಿಸಲಾಗಿದೆ.ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಯ ಹೊಳೆಯನ್ನೇ ಹರಿಸಿದ್ದಾರೆ.ಆದರೆ ಶಿರಸಿ ಕ್ಷೇತ್ರದ ಶಾಸಕ ಕಾಗೇರಿಯವರು ಇದಾವುದೂ ತಮ್ಮ ಕೆಲಸ ವಲ್ಲ ತಮ್ಮದೇನಿದ್ದರೂ ಬರೀ ಮಾತಿನ ಅಭಿವೃದ್ಧಿ ಎಂಬಂತಿದ್ದಾರೆ.ತಮ್ಮ ಜವಾಬ್ದಾರಿಯನ್ನು ಮರೆತು ಮಾತನಾಡುತ್ತಿದ್ದಾರೆ.ಇಷ್ಟು ವರ್ಷಗಳಾದರೂ ಶಾಸಕರಾಗಿ ಮಂತ್ರಿಗಳಾಗಿ  ಮೂಲಭೂತ ಸೌಕರ್ಯಗಳಾದ ಸಂಪರ್ಕ ರಸ್ತೆಗಳು , ಕುಡಿಯುವ ನೀರು ,ಸೇತುವೆಗಳು ,ಕಾಲುಸಂಕಗಳು ಮುಂತಾದವನ್ನು  ಒದಗಿಸದೇ ,ಸುಳ್ಳನ್ನು ಹೇಳುತ್ತ ಜನಸಾಮಾನ್ಯರನ್ನು ಗೊಂದಲದಲ್ಲಿಟ್ಟಿದ್ದಾರೆ.ಜವಾಬ್ದಾರಿ
 ಅರಿತು ಕೆಲಸ ಮಾಡಿದ್ದರೆ ಕಾಂಗ್ರೆಸ್ ಸರಕಾರ ಈ ಕ್ಷೇತ್ರದಲ್ಲಿ ಸಚಿವರ ಮೂಲಕ ಕಾಮಗಾರಿಗೆ ಮಂಜೂರಾತಿ ತರುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವ ಮುಖಾಂತರ ತಕ್ಕ ಉತ್ತರ ನೀಡುವ ಕಾಲ ಪರಿಪಕ್ವವಾಗಿದೆ. ಅವರ ಕನಸುಗಳು ಹಗಲುಗನಸಾಗಿಯೇ ಉಳಿಯುತ್ತವೆ.
ಸಾಮರಸ್ಯ ದಿಂದ , ಸೌಹಾರದತೆಯೊಂದಿಗೆ ಬಾಳುತ್ತಿರುವ ಜಿಲ್ಲೆಯಲ್ಲಿ  ದ್ವೇಷದ ಬೀಜ  ಬಿತ್ತಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ.ನೆಮ್ಮದಿ ಗೆ ಭಂಗ ತಂದಿದ್ದಾರೆ.ಯುವ ಶಕ್ತಿಯ ದುರ್ಬಳಕೆ ಮಾಡಿಕೊಂಡು ತಪ್ಪುದಾರಿಗೆ ಕೊಂಡೊಯ್ಯುತ್ತಿರುವ ಬಿಜೆಪಿಯನ್ನು ಜಿಲ್ಲೆಯಿಂದ ಮುಕ್ತಮಾಡುವ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ .ಜಿಲ್ಲೆಯಲ್ಲಿ ಪಕ್ಷ  ಸದೃಢ ವಾಗಿದೆ.ತಮ್ಮೆಲ್ಲರ ಪ್ರೀತಿ ವಿಶ್ವಾಸ ದಿಂದ ಇಷ್ಟು ವರ್ಷಗಳ ಕಾಲ ಪಕ್ಷವನ್ನು ಜಿಲ್ಲೆಯಲ್ಲಿ ಮುನ್ನಡೆಸಿಕೊಂಡು ಮುನ್ನಡೆಸಿಕೊಂಡು ಕಾರ್ಯನಿರ್ವಹಿಸಿದ್ದೇನೆ.ಇದೇ ಪ್ರೀತಿ ವಿಶ್ವಾಸ ಹೀಗೆ ಇರಲಿ ಎನ್ನುತ್ತ ನಾಳೆ ನಡೆಯುವ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದರು. ಸಭೆಯಲ್ಲಿ ಎನ್ ಪಿ ಗಾಂವಕರ,ವೆಂಕಟೇಶ್ ಹೆಗಡೆ,ಮೇರಿ ರೆಬೆಲ್ಲೋ, ರಮೇಶ ದುಭಾಶಿ, ಡಿ ಜಿ ಶೆಟ್ಟಿ,ಸಂತೋಷ ಶೆಟ್ಟಿ , ಪ್ರದೀಪ ಶೆಟ್ಟಿ  ಖಾದರ್ ಆನವಟ್ಟಿ, ಮಾಧವ ರೇವಣಕರ, ಅಬ್ಬಾಸ್ ತೋನ್ಸೆ ಮಾತನಾಡಿ ಸಲಹೆ ನೀಡಿದರು. ಉಪೇಂದ್ರ ಪೈ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ವಾರ್ಡ್ ನಂ.೧೯ ರ ನಗರಸಭಾ ಸದಸ್ಯೆ , ಬಿಎಸ್ ಆರ್ ಕಾಂಗ್ರೆಸ್ ನಿಂದ ಆಯ್ಕೆ ಯಾಗಿದ್ದ ಶ್ರೀಮತಿ ಫಾತಿಮ ಮೂಸಾ ಪಕ್ಷಕ್ಕೆ ಸೇರ್ಪಡೆಯಾದರು.ಟಿ ಎಸ್ ಎಸ್ ರೋಡ್ ನ ಬಿ ಜೆ ಪಿ ಕಾರ್ಯಕರ್ತರಾದ ಸಚಿನ್ ನೇತ್ರೇಕರ್,ಸ್ಮಿತಾ ನೇತ್ರೇಕರ್,ಸಚಿನ್ ಜೋಗಳೇಕರ್, ಅಲ್ಲದೇ ಚಂದ್ರಕಲಾ ಮೂಡ್ಕಣಿ ನೇತೃತ್ವದಲ್ಲಿ ಮರಾಠಿಕೊಪ್ಪದ ಮಾಲಾ ಶೆಟ್ಟಿ,ಗಿರಿಜಾ ಪುಟ್ಟಪ್ಪ,ಖೈರುನ್ನೀಸಾ ನಾಗನೂರ,ಪರವೀನ್ ಬಾನು,ನಾಗನೂರ,ಶೀಲಾ ಶ್ರೀರಾಮ, ಭರತ್ ನಾಯ್ಕ್,ಪವನ್ ನಾಯ್ಕ್,ಆದಿತ್ಯ ನಾಯ್ಕ್,ವಿಜಯ ಕೋಡಕಣಿ,ಮಧುಮತಿ ಎಸ್ ನಾಯ್ಕ್,ಕಳಕವ್ವ ತುಪ್ಪದ, ಜಯಶ್ರೀ ಪವಾರ,ಗೌತಮಿ ಗಿರೀಶ್, ಜಯಶ್ರೀ ಪೂಜಾರಿ, ನಿಖಿಲ್ ಮಡಿವಾಳ,ಮಾಲತಿ ಮಡಿವಾಳ,ಸ್ಮಿತಾ ಪ್ರಸಾದ,ಸೀಮಾ ಅರ್ ಜೆ,ಸಂಧ್ಯಾ ಸತೀಶ್ ರಾವ್,ಸಚಿನ್ ಡಿ ಎನ್,ಅಭಿಷೇಕ್ ವಿ, ಲಿಖಿತ್ ವಿ,ಮಂಗಲಾ ನಾಯ್ಕ್,ಸವಿತಾ,ಆಶಾ, ಅನ್ನಪೂರ್ಣ, ಲಕ್ಷ್ಮೀ, ಸುನಿಲ್ ನಾಯ್ಕ್,ಜೈನಾಬಿ ಎ ಮೊಹ್ಮದ್ ಮುಂತಾದವರು ಪಕ್ಷ ಸೇರ್ಪಡೆಯಾದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಎಸ್ ಕೆ ಭಾಗವತ್, ಸುಮಾ ಉಗ್ರಾಣಕರ್, ಸೂರ್ಯ ಪ್ರಕಾಶ,ವಿಕ್ಟರ್ ಡಯಾಸ್,ಬ್ಲಾಕ್ ಉಪಾಧ್ಯಕ್ಷ ಎನ್ ವಿ ವೈದ್ಯ, ಇಂಟಕ್ ಅಧ್ಯಕ್ಷ ಐ ಕೆ ನಾಯ್ಕ್,ಮೀನುಗಾರ ಕಾಂಗ್ರೆಸ್ ನ ರಾಜು ಉಗ್ರಾಣಕರ್, ಎಲ್ ಶೆಲ್ಲುಗಳ ಬ್ಲಾಕ್ ಅಧ್ಯಕ್ಷರು,  ನಗರಸಭಾ ಉಪಾಧ್ಯಕ್ಷೆ ಅರುಣಾ ವೆರ್ಣೇಕರ್,ರಾಚಪ್ಪ ಜೋಗಳೇಕರ್,ಗಿರಿಜಾ ನಾಯಕ್,ರಮ್ಯಾ ಚಂದಾವರ್,  ರಜಿಯಾಬಾನು ಜೈಲರ್,ಜ್ಯೋತಿ ಗೌಡ, ಶೀಲೂ ವಾಜ್,ರಜೀಯಾಬಿ ಶೇಖ್,ಸುಧಾಕರ ಶೆಟ್ಟಿ,ಯಶ್ವಂತ ಮರಾಠೆ,ಫ್ರಾನ್ಸಿಸ್ ನೊರೋನ,ಪಕ್ಷದ ಮುಖಂಡರು , ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು.
loading...