ತಮಿಳುನಾಡಿನ ಶಾಸಕ ದೇಶದ ಪತ್ರಕರ್ತರಲ್ಲಿ ಕೇಳಲಿ ಕ್ಷಮೆ : ಬೆಳಗಾವಿ ಪತ್ರಕರ್ತರ ಆಗ್ರಹ

0
64

ತಮಿಳುನಾಡು ಶಾಸಕ ಎಸ್.ವಿ. ಶೇಖರ್ ಮಹಿಳಾ ಪತ್ರಕರ್ತರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಬೆಳಗಾವಿ ಪತ್ರಕರ್ತರು ಕಪ್ಪು ಪಟ್ಟಿ ಕಟ್ಟಿಕೊಂಡು ಜಿಲ್ಲಾಧಿಕಾರಿಗೆ ರವಿವಾರ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಪತ್ರಕರ್ತರು ತೋಳಿಗೆ ಕಪ್ಪು ಪಟ್ಟಿ ಕಟ್ಟಿ ಶಾಸಕರ ಹೇಳಿಕೆಗೆ ಖಂಡಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಅಲ್ಲದೇ, ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿರುವ ಆ ಶಾಸಕನ ಶಾಸಕತ್ವ ರದ್ದುಗೊಳಿಸಬೇಕು. ಸರಕಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಪತ್ರಕರ್ತರ ನಡುವೆ ಅಸಂಬದ್ಧ ಸಂಬಂಧಗಳನ್ನು ಕಲ್ಪಿಸುವ ಕೀಳುಮಟ್ಟದ ಹೇಳಿಕೆ ಅಸಹ್ಯಕರವಾಗಿದೆ. ಸದರಿ ಶಾಸಕ ದೇಶದ ಪತ್ರಕರ್ತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಯಿತು.
ತಹಶೀಲ್ದಾರ ಮಂಜುನಾಥ ಜಾನಕಿ ಅವರು ಮನವಿ ಸ್ವೀಕರಿಸಿ ಖಂಡನಾ ಮನವಿಯನ್ನು ರಾಜ್ಯಪಾಲರಿಗೆ ಕಳಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪತ್ರಕರ್ತರಾದ ಕೀರ್ತನಾ ಕಾಸರಗೋಡು, ಮನಿಷಾ ಸುಬೇದಾರ, ಸುಧಾ ಪಾಟೀಲ, ಮುರಗೇಶ ಶಿವಪೂಜಿ, ಶ್ರೀಶೈಲ್ ಮಠದ, ರಮೇಶ ಹಿರೇಮಠ, ಕುಂತಿನಾಥ ಕಲಮನಿ, ಶಿವಾನಂದ ಚಿಕ್ಕಮಠ, ರಾಜೇಶ ವೈದ್ಯ, ಭೈರೋಬಾ ಕಾಂಬಳೆ, ಮಂಜುನಾಥ ಪಾಟೀಲ, ಸುರೇಶ ನೇರ್ಲಿ, ಮಾಲತೇಶ ಹೂಲಿಹಳ್ಳಿ, ಚೇತನ ಕುಲಕರ್ಣಿ, ಜಗದೀಶ ವೀರಕ್ತಮಠ, ಸುಭಾನಿ ಮುಲ್ಲಾ, ವಿಶ್ವನಾಥ ದೇಸಾಯಿ, ಚೇತನ ಕುಲಕರ್ಣಿ, ಮಾಲತೇಶ ಮತ್ತಿಗೇರ, ಪ್ರಮೋದ ಹರಿಕಾಂತ, ಶಾಮ ಜಾಧವ, ಜಗದೀಶ ದಡ್ಡಿಕರ, ಸುನೀಲ ಪಾಟೀಲ, ಜಿ. ಪುರುಷೋತ್ತಮ, ಶಿವಾನಂದ ತಿರಕನ್ನವರ, ಇಮಾಮಹುಸೇನ ಗೂಡನವರ, ವಿಶ್ವನಾಥ ದೇಸಾಯಿ, ಗಜಾನನ ರಾಮನಕಟ್ಟಿ, ಮಹಾಂತೇಶ ಗದ್ದಹಳ್ಳಿಶೆಟ್ಟರ, ಪ್ರವೀಣ ಶಿಂಧೆ, ಅಡಿವೆಪ್ಪ ಪಾಟೀಲ, ರಾಜು ಸದರೆ, ರವಿ ಭೋವಿ,ನೀರಜ ಅಗಸಿಮನಿ, ಸೋಮೇಶ ಮಾಳಕ್ಕನವರ, ಸಂಜು ಕಾಳೇನಟ್ಟಿ ಸೇರಿದಂತೆ ಇನ್ನಿತರೇ ಪತ್ರಕರ್ತರು ಭಾಗವಹಿಸಿದ್ದರು

loading...