ಭೂಮಿ, ವಸತಿ ನೀಡಿದವರಿಗೆ ಮತ : ಇಮ್ತಿಯಾಜ್

0
71

ಕನ್ನಡಮ್ಮ ಸುದ್ದಿ- ಬೆಳಗಾವಿ: ಸ್ಲಂ ಜನಾಂಗದವರಿಗೆ ಭೂಮಿ, ವಸತಿ ಯಾರು ನೀಡುತ್ತಾರೋ, ಕೊಳಗೇರಿಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಘೋಷಿಸುತ್ತಾರೋ ಅಂತಹ ವ್ಯಕ್ತಿಗೆ,ಪಕ್ಷಕ್ಕೆ ನಮ್ಮ ಓಟ್ ನೀಡಲಾಗುತ್ತದೆ ಎಂದು ಕರ್ನಾಟಕದ ಸ್ಲಂ ಜನಾಂದೋಲನದ ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಮಾನವಿಯವರು ಹೇಳಿದರು.

ಅವರು ರವಿವಾರದಂದು ನಗರ ಅಂಬೇಡ್ಕರ ಉದ್ಯಾನವನದಲ್ಲಿ ಕರ್ನಾಟಕ ಸ್ಲಂ ಜನಾಂದೋಲನ ಹಾಗೂ ಬೆಳಗಾವಿ ಸ್ಲಂ ಸಮಿತಿ ವತಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಸ್ಲಂ ನಿವಾಸಿಗಳ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸ್ಲಂ ಜನರು ಇರುವ ಸ್ಥಳಗಳಲ್ಲಿ ಚುನಾವಣಾ ಜಾಗೃತಿ ಸಭೆಯನ್ನು ನಡೆಸಲಾಗುತ್ತಿದೆ. ಯಾರು ಸ್ಲಂ ಜನಾಂಗದವರಿಗೆ ಭೂಮಿ, ವಸತಿ ಹಾಗೂ ಕೊಳಗೇರಿಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಘೋಷಿಸುತ್ತಾರೋ ಮತ್ತು ಸ್ಲಂ ಜನರ ಅಭಿವೃದ್ಧಿಗೆ ಆಧ್ಯತೆ ನೀಡುತ್ತಾರೋ ಅಂತಹ ನಾಯಕರಿಗೆ, ಪಕ್ಷಕ್ಕೆ ನಮ್ಮ ಮತ ನೀಡಲಾಗುತ್ತದೆ ಎಂದರು.
ಈಗಾಗಲೇ ಬೆಳಗಾವಿಯ ಸ್ಲಂ ಜನಾಂಗ ಇರುವ ಸ್ಥಳಕ್ಕೆ ಹೊಗಿ ಅಲ್ಲಿಯ ಜನರೊಂದಿಗೆ ಸಭೆ ನಡೆಸಲಾಗಿದೆ. ಸ್ಲಂ ನಿವಾಸಿಗಳಿಗೂ ಜಾಗೃತಿ ಸಭೆ ನಡೆಸಲಾಗುತ್ತದೆ. ಸ್ಲಂ ಜನರ ಅಭಿವೃದ್ಧಿ, ಬೇಡಿಕೆಗಳಿಗೆ ಯಾರು ಆದ್ಯತೆ ನೀಡುತ್ತಾರೋ , ಅಂತಹ ವ್ಯಕ್ತಿಗೆ, ಪಕ್ಷಕ್ಕೆ ಒಮ್ಮತದಿಂದ ಮತ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಪಿ ಬಳ್ಳಾರಿ, ಕೃಷ್ಣ ನಾಯಕ, ಪಕ್ಕೀರಪ್ಪಾ ತಳವಾರ, ಮೀನಾ ಕಾಂಬಳೆ, ಸಂತೋಷ ಮೇದಾರ, ನರಸಿಂಹ ಸಾಕೇ, ಗೌತಮ್ಮ ಲೊಂಡೆ, ಪ್ರಶಾಂತ ಪೂಜಾರ ಸೇರಿದಂತೆ ಇತರರು ಇದ್ದರು.

loading...