ಭ್ರಷ್ಟ ಕಾಂಗ್ರೆಸ್ ಕಿತ್ತೊಗೆಯಲು ಜನ ತಿರ್ಮಾನಿಸಿದ್ದಾರೆ: ಶ್ರೀರಾಮುಲು

0
34

ಗದಗ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಪಕ್ಷದ ವರ್ಚಸ್ಸು ಹೆಚ್ಚುತ್ತಿದ್ದು ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೋಗೆಯಲು ರಾಜ್ಯದ ಜನರು ತಿರ್ಮಾನಿಸಿದ್ದಾರೆ. ಹೀಗಾಗಿ ಕಾಂಗ್ರೇಸ್ ಪಕ್ಷವು ಕೇವಲ 60 ಸ್ಥಾನಕ್ಕೆ ಕುಸಿಯುತ್ತಿದೆ ಎಂದು ಸಂಸದ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.

ಗದಗ ತಾಲೂಕಿನ ಹಾಗೂ ನರಗುಂದ ಮತಕ್ಷೇತ್ರದ ಲಕ್ಕುಂಡಿ ಗ್ರಾಮದ ಬಜಾರ ರಸ್ತೆಯಲ್ಲಿ ನರಗುಂದ ಮತಕ್ಷೇತ್ರದ ಅಭ್ಯರ್ಥಿ ಸಿ.ಸಿ.ಪಾಟೀಲ ಅವರ ಪರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಯೋಜನೆಗಳನ್ನು ನಕಲು ಮಾಡಿರುವ ಸಿದ್ಧರಾಮಯ್ಯನವರ ಸರಕಾರ ಅಧಃಪತನಗೊಳ್ಳಲಿದೆ. ಇನ್ನೂ ಗದಗ ಜಿಲ್ಲೆಯಲ್ಲಿ ಸಚಿವ ಎಚ್.ಕೆ ಪಾಟೀಲ ಅವರು ಈ ಹಿಂದೆ ಯಡಿಯೂರಪ್ಪ ಸರಕಾರ ಅನುಷ್ಠಾನಗೊಂಡ ಅಭಿವೃದ್ದಿ ಕಾಮಗಾರಿಗಳನ್ನೇ ಪೂರ್ಣಗೊಳಿಸಿದ್ದು ಜಿಲ್ಲೆಯು ಕುಡಿಯುವ ನೀರು ಸೇರಿದಂತೆ ಹಲವು ಅಭಿವೃದ್ದಿಗಳಿಂದ ಹಿಂದೆ ಉಳಿದಿದೆ ಎಂದು ಆರೋಪಿಸಿದರು.
ರೈತರ ಸಹಕಾರಿ ಸಂಘಗಳು ಹಾಗೂ ಮಹಿಳಾ ಸ್ವ ಸಹಾಯ ಸಂಘಗಳ ಸಾಲವನ್ನು ಬಿ.ಜೆ.ಪಿ ಸರಕಾರ ರಚನೆಯಾದ 24 ಘಂಟೆಗಳಲ್ಲಿ ಮನ್ನಾ ಮಾಡಲಾಗುವುದು ಕಾರಣ ಸಿ.ಸಿ.ಪಾಟೀಲ ಅವರಿಗೆ ಮತ ನೀಡಬೇಕೆಂದÀರು. ಮಾಜಿ ಸಚಿವ ಅಭ್ಯರ್ಥಿ ಸಿ.ಸಿ.ಪಾಟೀಲ ಮಾತನಾಡಿ ಈಗಾಗಲೇ ಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದ ಪರವಾಗಿ ಅಧಿಕವಾಗಿ ಬೆಂಬಲ ವ್ಯಕ್ತವಾಗುತ್ತಿದ್ದು ಈ ಭಾರಿ ಬಿ.ಜೆ.ಪಿ ಬಾವುಟ ಹಾರಲಿದೆ. ಈಗಿರುವ ಶಾಸಕರು ಸ್ವಾರ್ಥ ಪರವಾಗಿ ಆಚರಿಸಿದ ಲಕ್ಕುಂಡಿ ಉತ್ಸವವನ್ನು ಈ ಹಿಂದೆ ಮಾಜಿ ಸಚಿವ ಎಸ್.ಎಸ್.ಪಾಟೀಲ ಮತ್ತು ನಾವು ಐತಿಹಾಸಿಕತೆಯನ್ನು ಬಿಂಬಿಸುವ ಹಾಗೆ ಆಚರಿಸಿ ಬೆಳಕು ಚಲ್ಲಿದ್ದೇವೆ ಎಂದ ಅವರು ಬಿ.ಶ್ರೀರಾಮುಲು ಅವರು ಬಡ ಜನರ ಆರೋಗ್ಯವನ್ನು ಕಾಪಾಡಲು 108 ಸೇವೆಯನ್ನು ಆರಂಭಿಸಿದ್ದು ಜನಪ್ರೀಯ ಕಂಡಿದೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೇಸ್ ತೊರೆದು ಬಿ.ಜೆ.ಪಿಯನ್ನು ಸೇರಿಕೊಂಡ ನೂರಾರು ಕಾರ್ಯಕರ್ತರನ್ನು ಪಕ್ಷದ ಧ್ವಜವನ್ನು ನೀಡಿ ಸಿ.ಸಿ.ಪಾಟೀಲ ಅವರು ಬರಮಾಡಿಕೊಂಡರು.

ಇದಕ್ಕೂ ಪೂರ್ವ ಗ್ರಾಮದ ಮಾರುತಿ ನಗರ, ಅಂಬೇಡ್ಕರ್ ನಗರದಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿಸಿದರು. ನಂತರ ಬಿ. ಶ್ರೀರಾಮುಲು, ಸಿ.ಸಿ.ಪಾಟೀಲ ಅವರು ಅತ್ತಿಮಬ್ಬೆ ಮಹಾದ್ವಾರದಿಂದ ಗ್ರಾಮ ಪಂಚಾಯತಿಯವರೆಗೂ ಎತ್ತಿನ ಬಂಡಿಯಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ವಿ.ಪ ಸದಸ್ಯ ಎಸ್.ವಿ.ಸಂಕನೂರ ಮುಂತಾದವರಿದ್ದರು.

loading...