ದೊಡ್ಡಮನಿ ಪ್ರಮಾಣಿಕ ರಾಜಕಾರಣ ವಿಜೃಂಭಣಿಸಲಿ : ಹೊರಟ್ಟಿ

0
66

ಮುಂಡರಗಿ: ಅಂದಾನಪ್ಪ ಹಾಗೂ ಜ್ಞಾನದೇವ ದೊಡ್ಡಮನಿ ಪರಂಪರೆಯ ಸಾತ್ವಿಕ ಪ್ರಮಾಣಿಕ ರಾಜಕಾರಣ ಹಾಗೂ ಜನಪರ ನಿಲುವುಗಳು ಈಗ ರೋಣದ ರಾಜಕೀಯ ರಂಗದಲ್ಲಿ ವಿಜೃಂಭಣಿಸಲಿ ಎನ್ನುವ ಉದ್ದೇಶದಿಂದಾಗಿ ರೋಣ ಮತಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯಾಗಿ ರವೀಂದ್ರನಾಥ ದೊಡ್ಡಮೇಟಿ ಅವರು ಸ್ಪರ್ಧಿಸಿದ್ದಾರೆ ಎಂದು ಬಸವರಾಜ ಹೊರಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಡಾ.ಬಸವರಾಜ ಧಾರವಾಡ ಹೇಳಿದರು.
ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಹೆಂಡಕ್ಕೆ ಬೆಲೆ ಕೊಡದೇ ಸ್ವಾಭಿಮಾನಕ್ಕೆ ಬೆಲೆ ಕೊಟ್ಟು ಜೀವನ ನಡೆಸುತ್ತಿರುವ ದೊಡ್ಡಮೇಟಿ ಅವರು ಅಧಿಕಾರಕ್ಕೆ ಬಂದರೇ ರೋಣ ಮತಕ್ಷೇತ್ರವು ಅಭಿವೃದ್ಧಿ ಪಥದತ್ತ ಸಾಗಲಿದೆ. ಇಂತಹ ಉತ್ತಮ ಕುಟುಂಬದ ವ್ಯಕ್ತಿಯನ್ನು ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಮಾಡಿದ್ದು ನಮಗೆ ಖುಷಿ ತಂದಿದೆ ಎಂದು ತಿಳಿಸಿದರು.
ಜೆಡಿಎಸ್‌ ಜಿಲ್ಲಾಧ್ಯಕ್ಷ ಅಂದಾನಯ್ಯ ಕುರ್ತುಕೋಟಿಮಠ, ಜೆಡಿಎಸ್‌ ಹಿರಿಯ ಮುಖಂಡ ಬಿ.ಎಸ್‌.ಹಿರೇಗೌಡ್ರ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಗೆ ಬೇಸತ್ತ ಮತದಾರರು ಈ ಬಾರಿ ಜೆಡಿಎಸ್‌ ಪಕ್ಷಕ್ಕೆ ಮತ ಹಾಕಲಿದ್ದಾರೆ. ರೈತಪರ ಜನಸಮಾನ್ಯರ ಪರವಾಗಿ ಇರುವಂತ ಕುಮಾರಸ್ವಾಮಿ ಅವರ ಕೈಬಲಪಡಿಸಬೇಕು. ಜೆಡಿಎಸ್‌ ಕಾರ್ಯಕರ್ತರು ರವೀಂದ್ರನಾಥ ದೊಡ್ಡಮನಿ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಅಶೋಕ ತ್ಯಾಮನವರ, ಗುರುಲಿಂಗಯ್ಯ ಕೊಳ್ಳಿಮಠ, ಪ್ರಭು ಸಂಗನಾಳ, ರಮೇಶ ಕಲಬುರ್ಗಿ, ಎಚ್‌.ಎಂ.ಕಂಚಗಾರ, ಮೊದಲಾದವರು ಉಪಸ್ಥಿತರಿದ್ದರು.

loading...