ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆದಿವೆ: ದೇಶಪಾಂಡೆ

0
67

ಕನ್ನಡಮ್ಮ ಸುದ್ದಿ-ದಾಂಡೇಲಿ: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆದಿವೆ. ಆದರೂ ಹಳಿಯಾಳ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ವಿಚಾರದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಮಹತ್ವದ ಉದ್ದೇಶವನ್ನಿಟ್ಟುಕೊಂಡು ಮತ್ತೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹಳಿಯಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇಶಪಾಂಡೆಯವರು ಹೇಳಿದರು.

ಅವರು ಸುಭಾಸನಗರ, ಅಜಾದ ನಗರ, ಗಣೇಶನಗರ, ನಿರ್ಮಲನಗರ, ಸುಧರ್ಶನ ನಗರ, ಬಸವೇಶ್ವರ ನಗರ ಹಾಗೂ ಸಂಜೆ ಡಿ.ಎಪ್.ಎ. ಟೌನ್‍ಶಿಪ್, ವನಶ್ರೀನಗರ, ಬಂಗೂರನಗರ ಮುಂತಾದೆಡೆ ಸಭೆ ನಡೆಸಿ ಮತಯಾಚಿಸಿ ಮಾತನಾಡಿದರು. ರಾಜ್ಯ ಸರಕಾರ ಹಾಗೂ ತಮ್ಮ ಕಳೆದ ಐದು ವರ್ಷಗಳಲ್ಲಿ ದಾಂಡೇಲಿ ಹಾಗೂ ಈ ಕ್ಷೇತ್ರದ ಅಭಿವೃದ್ದಿಗಾಗಿ ತಂದ ಸಾವಿರಾರು ಕೋಟಿ ರೂ.ಗಳ ಅಭಿವೃದ್ದಿ ಕೆಲಸಗಳನ್ನು ಜನತೆಯ ಮುಂದಿಟ್ಟರು. ಈ ಭಾಗದ ಜನರ ಬೇಡಿಕೆಯಂತೆ ದಾಂಡೇಲಿ ತಾಲೂಕನ್ನಾಗಿ ಮಾಡಾಗಿದೆ. ಈ ತಾಲೂಕಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕೊಡಿಸುವ ಜವಾಬ್ದಾರಿಯಿದೆ. ಪಟ್ಟಾ ಭೂಮಿಯನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು, ಅಕ್ರಮ ಸಕ್ರಮಕ್ಕೆ ಪ್ರಯತ್ನಿಸಲಾಗುವುದು. ಮಹಿಳಾ ಮೀಸಲಾತಿ ಹೆಚ್ಚಿಸಲಾಗುವುದು ಎಂದು ತಿಳಿಸಿದ ಅವರು ಕ್ಷೇತ್ರದಲ್ಲಾದ ಅಭಿವೃದ್ದಿ ಕೆಲಸಗಳನ್ನು ನೋಡಿ ಮತನೀಡುವಂತೆ ಮನವಿ ಮಾಡಿದರು. ನಾವು ಜಾತ್ಯಾತೀತ ವಿಚಾರಗಳನ್ನಿಟ್ಟುಕೊಂಡವರು. ನಮಗೆ ಧರ್ಮ ಧರ್ಮಗಳ ನಡುವೆ ದ್ವೇಷÀ ಹುಟ್ಟಿಸುವ ಕೆಲಸ ಬೇಕಾಗಿಲ್ಲ. ಅದನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಅಂತಹ ವಿಚಾರಗಳಿಗೆ ಬಲಿಯಾಗಬೇಡಿ. ನರೇಂದ್ರ ಮೋದಿ 2 ಕೋಟಿ ಜನರಿಗೆ ವರ್ಷಕ್ಕೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆ ಹುಸಿಯಾಗಿದೆ.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಂ, ಪ್ರಮುಖರಾದ ರಾಧಾಕೃಷ್ಣ ಕನ್ಯಾಡಿ, ಇಕ್ಬಾಲ ಶೇಖ, ತಸವರ ಸೌದಾಗರ, ಎಸ್.ಎಸ್. ಪೂಜಾರ್, ದಾದಾಪೀರ ನದಿಮುಲ್ಲಾ, ಯಾಸ್ಮಿನ್ ಕಿತ್ತೂರ, ಕೀರ್ತಿ ಗಾಂವಕರ, ಮೋಹನ ಹಲವಾಯಿ, ಅನಿಲ ದಂಡಗಲ್, ಅದಂ ದೇಸೂರ, ನಂದೀಶ ಮುಂಗರವಾಡಿ, ಅಪ್ಪನಗೌಡರ ಮುಂತಾದವರು ಜೊತೆಗಿದ್ದರು.

loading...