ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ಶಶಿಕಲಾ

0
40

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಸಿಎಂ ಸಿದ್ದರಾಮಯ್ಯ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ಪರ ಅಲೆ ಇದೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಶಶಿಕಲಾ ಮಿಥುನ್‌ ಪಾಟೀಲ್‌ ಹೇಳಿದರು.
ಪಟ್ಟಣದ ವಿವಿಧ ವಾರ್ಡುಗಳಲ್ಲಿ ತಮ್ಮ ಮಾವ ಕಾಂಗ್ರೆಸ್‌ ಅಭ್ಯರ್ಥಿ ಜಿ.ಎಸ್‌.ಪಾಟೀಲ್‌ ಪರ ಶಶಿಕಲಾ ಮಿಥುನ್‌ ಪಾಟೀಲ್‌ ಮತಯಾಚನೆ ನಡೆಸಿದರು.
ರಾಜ್ಯದ ಜನತೆ ಕಾಂಗ್ರೆಸ್‌ ಸರ್ಕಾರದ ಮೇಲೆ ಇಟ್ಟಿದ ಭರವಸೆಯಂತೆ ಚುನಾವಣಾ ಪೂರ್ವದಲ್ಲಿ ಜನತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಯೋಜನೆಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು ಈಗಾಗಲೇ 125ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮುಖಾಂತರ ನುಡಿದಂತೆ ನಡೆಯುವ ಸರ್ಕಾರ ಎಂದು ಜನಸಾಮನ್ಯರಿಂದ ಪ್ರಶಂಸೆಗೆ ಪಾತ್ರವಾಗಿರುವುದು ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಶಿವರಾಜ ಘೋರ್ಪಡೆ, ಚಂಬಣ್ಣ ಚವಡಿ, ಬಸವರಾಜ ಚನ್ನಿ, ಅಪ್ಪು ಮತ್ತಿಕಟ್ಟಿ, ಮಂಗಳಾ ದೇಶಮುಖ, ಅಂಜುಮ್‌ ಹುಬ್ಬಳ್ಳಿ, ದೀಪಾ ಚನ್ನಿ, ಸುಜಾತಾ ಚುಂಚಾ, ಶಾರದಾ ರಾಠೋಡ, ಮಲ್ಲು ಕಲ್ಲೊಡ್ಡರ, ದಾದು ತಾಳಿಕೋಟಿ, ರಫೀಕ್‌ ಯಲಬುಣಚಿ ಇದ್ದರು.

loading...