ಭಟ್ಕಳದ ಜಿಹಾದಿ ಮಟ್ಟಾ ಹಾಕಲು ಬಿಜೆಪಿ ಬೆಂಬಲಿಸಿ: ಯೋಗಿ ಆಧಿತ್ಯನಾಥ್‌

0
92

ಕನ್ನಡಮ್ಮ ಸುದ್ದಿ-ಭಟ್ಕಳ: ಜಗತಪ್ರಸಿದ್ದ ಮುರುಡೇಶ್ವರದ ಶಿವಮಂದಿರದಿಂದ ಗುರುತಿಸಿಕೊಳ್ಳಬೇಕಾದ ಭಟ್ಕಳ ಇಲ್ಲಿನ ಭಯೋತ್ಪದಾಕ ಜಿಹಾದಿಗಳೊಂದಿಗೆ ಗುರುತಿಸಿಕೊಳ್ಳುವಂತಾಗಿದೆ. ಅಂತಹ ಜಿಹಾದಿಗಳನ್ನು ಮಟ್ಟ ಹಾಕಲು ಮತ್ತು ಭಟ್ಕಳ ಕಳಂಕಿತ ಹೆಸರನ್ನು ಅಳಿಸಿ ಹಾಕಲು ಈ ಬಾರಿ ಬಿಜೆಪಿ ಗೆಲ್ಲಿಸುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾತ್‌ ಕರೆ ನೀಡಿದರು.
ಅವರು ಮಂಗಳವಾರ ಮುರುಡೇಶ್ವರದ ಆರ್‌.ಎನ್‌.ಎಸ್‌.ಪಾಲಿಟೆಕ್ನಿಕ್‌ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ರೈತ ವಿರೋಧಿ, ಸಮಾಜ ವಿರೋಧಿ ಸಿದ್ಧರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಜಾತೀ ವಿಷ ಬೀಜ ಬಿತ್ತಿ ಒಡೆದು ಆಳು ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯನ ಸರ್ಕಾರ ಜಿಹಾದಿಗಳ ಮೂಲಕ ಅನೇಕ ಹಿಂದೂಗಳ ಹತ್ಯೆ ಮಾಡಿದ್ದಾರೆ, ರೈತರ ಬಗ್ಗೆ ಅನುಕಂಪವಿರದ ಸಿದ್ದರಾಮಯ್ಯನ ಸರ್ಕಾರ ರೈತರ ಸಾಲಮನ್ನಾ ಬಗ್ಗೆ ಯೋಚನೆ ಮಾಡುತ್ತಿಲ್ಲ ಆದರೆ ಉತ್ತರಪ್ರದೇಶದಲ್ಲಿ ಒಂದು ಲಕ್ಷದ ವರೆಗೂ ರೈತ ಸಾಲ ಮನ್ನಾ ಮಾಡಿದ್ದೇವೆ. ಆದ್ದರಿಂದ ರಾಜ್ಯದಲ್ಲಿರುವ ರೈತ ವಿರೋಧಿ ಸರ್ಕಾರ ಕಿತ್ತೆಸಯಬೇಕು ಎಂದು ತಿಳಿದರು. ಪ್ರಧಾನಿ ಮೋದಿಯವರು ದೇಶದ ಅಭಿವೃದ್ದಿಗಾಘಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಕರ್ನಾಟಕ್ಕೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿಲ್ಲ ಎಂದು ತಿಳಿಸಿದರು.
ಭಟ್ಕಳದ ಪರಿಸರವು ಉತ್ತಮವಾಗಿದ್ದು ಈ ಪರಿಸರದಲ್ಲಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. 1993ರಲ್ಲಿ ಜಿಹಾದಿಗಳ ಅಟ್ಟಹಾಸಕ್ಕೆ ಭಟ್ಕಳದಲ್ಲಿ 17 ಜನ ಹಿಂದೂಗಳ ಬಲಿಯಾಯಿತು. ಇಂತಹ ಸುಂದರ ಪರಿಸರದ ಸುರಕ್ಷತೆಯೆ ನನಗೆ ಚಿಂತೆಯಾಗಿದ್ದು ಈ ಪರಿಸರವನ್ನು ಜಿಹಾದಿಗಳಿಂದ ಉಳಿಸಿಕೊಳ್ಳುವ ಸರ್ಕಾರ ಬರಬೇಕಾಗಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಸುನೀಲ್‌ ನಾಯ್ಕ ಮಾತನಾಡಿ ಈ ಬಾರಿಯ ಚುಣಾವಣೆ ಕಣ ಬಿಜೆಪಿ ಮತ್ತು ಕಾಂಗ್ರೇಸ್‌ ನಡುವೆ ಇಲ್ಲ. ಬದಲಾಗಿ ಹಿಂದುತ್ವ ಹಾಗೂ ಜಿಹಾದಿಗಳ ನಡುವೆ ನಡೆಯುವ ಯುದ್ದವಾಗಿದೆ ಎಂದು ತಿಳಿಸಿದಿರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ನಾಯ್ಕ ಸ್ವಾಗತಿಸಿದರು. ವೇದಿಕೆಯಲ್ಲಿ ಉ.ಪ್ರ. ಶಾಸಕ ಡಾ.ಹರೇಂದ್ರ ಸಿಂಗ್‌, ಅಭ್ಯಥಿ ಸುನಿಲ್‌ ನಾಯ್ಕ, ಎಂ.ಜಿ.ನಾಯ್ಕ, ವಿನೋದ ನಾಯ್ಕ, ಮಾಜಿ ಸಚಿವಾ ಶಿವಾನಂದ ನಾಯ್ಕ, ಗೋವಿಂದ ನಾಯ್ಕ, ಪರಮೇಶ್ವರದೇವಾಡಿಗ, ಕೃಷ್ಣ ನಾಯ್ಕ ವಿಕಾಸ್‌ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

loading...