ನಿವಾಸಿಗಳಿಗೆ ಒಂದೇ ಒಂದು ನಿವೇಶನ ನೀಡಿಲ್ಲ: ಸಂಯಕ್ತಾ ಆರೋಪ

0
25

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಕಳೆದ ಐದು ವರ್ಷದಲ್ಲಿ ಶಾಸಕ ಜಿ.ಎಸ್‌.ಪಾಟೀಲ ಅವರು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡದ ಪರಿಣಾಮ ಇಂದಿಗೂ ಸಹ ಕ್ಷೇತ್ರದ ಜನರು ಸಮರ್ಪಕ ಕುಡಿಯುವ ನೀರಿಗಾಗಿ ಪ್ರತಿನಿತ್ಯವೂ ಸಹ ಪರದಾಡುವಂತಾಗಿದ್ದು ಒಂದೆಡೆಯಾದರೆ ಇತ್ತ ಸೂರಿಲ್ಲದ ಜನತೆಗೆ ಮನೆ ನೀಡುವದಾಗಿ ಸ್ಥಳೀಯ ಕೆಲ ಕಾಂಗ್ರೆಸ್‌ ಮುಖಂಡರು ಸಾವಿರಕ್ಕೂ ಅಧಿಕ ನಿವಾಸಿಗಳಿಂದ ಮನೆ ನೀಡುವ ಆಮೀಷ ಒಡ್ಡಿ ಮುಗ್ದ ನಿವಾಸಿಗಳಿಂದ ಹಗಲು ದರೋಡೆ ಮಾಡಿದ್ದಾರೆ ಹೊರತು ನಿವಾಸಿಗಳಿಗೆ ಒಂದೇ ಒಂದು ನಿವೇಶನ ನೀಡಿಲ್ಲ ಎಂದು ಸ್ನೇಹಾ ಮಹಿಳಾ ಮಂಡಳದ ಅಧ್ಯಕ್ಷೆ ಸಂಯಕ್ತಾ ಬಂಡಿ ಆರೋಪಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸ್ಥಳೀಯ ವಿವಿಧ ಬಡಾವಣೆಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕಳಕಪ್ಪ ಬಂಡಿ ಮತಯಾಚನೆ ಹಾಗೂ ಬಿರುಸಿನ ಪ್ರಚಾರ ನಡೆಸಿದ ಬಳಿಕ ಮಾತನಾಡಿದರು.
ಶಾಸಕ ಜಿ.ಎಸ್‌.ಪಾಟೀಲ ಅವರು ತಮ್ಮ ಇತ್ತಿಚಿನ ಕೆಲ ಚುನಾವಣಾ ಭಾಷಣಗಳಲ್ಲಿ ಖುದ್ದು ಕೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ಸ್ವಲ್ಪ ಹಿಂದುಳಿದಿದ್ದೇನೆ ಎನ್ನುವ ಮೂಲಕ ತಾವು ಅಭಿವೃದ್ಧಿ ಪೂರಕ ಆಡಳಿತಕ್ಕೆ ಆಧ್ಯತೆ ನೀಡಿಲ್ಲ ಎಂಬ ಸತ್ಯವನ್ನು ಶಾಸಕ ಜಿ.ಎಸ್‌.ಪಾಟೀಲ ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರು ಜಾರಿಗೆ ತಂದ ಯೋಜನೆಗಳು ಹಾಗೂ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ತುಲನೆ ಮಾಡಿ ನಿಮ್ಮ ಮತವನ್ನು ಚಲಾಯಿಸಲು ಮುಂದಾಗಿ ಎಂದು ಮನವಿ ಮಾಡಿದ ಅವರು, ಅಭಿವೃದ್ಧಿಹೀನ ಆಡಳಿತ ನಡೆಸಿರುವ ಕಾಂಗ್ರೆಸ್‌ ಶಾಸಕ ಜಿ.ಎಸ್‌.ಪಾಟೀಲರನ್ನು ಮನೆಗೆ ಕಳುಹಿಸಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡು ಭರ್ಜರಿ ಪ್ರಚಾರ ನಡೆಸಿದರು. ಪುಷ್ಪಾವತಿ ಭಾಂಡಗೆ ಹಾಗೂ ಸಂಗೀತಾ ಗಾಣಗೇರ ಮಾತನಾಡಿದರು.
ವಿದ್ಯಾ.ಎಸ್‌ ಬಂಡಿ, ಲೀಲಾ ಸವಣೂರ, ಉಮಾ ಜಾಲಗಾರ, ನಮ್ರತಾ ಜರಲಿ, ವಿದ್ಯಾ ರಾಯಬಾಗಿ, ಸುಕನ್ಯಾ ಹೊಗರಿ ಸೇರಿ ಇತರರು ಇದ್ದರು.

loading...