ಉತ್ತರದಲ್ಲಿ ಭರ್ಜರಿ ಗೆಲವು ಸಾಧಿಸಿದ ಬೆನಕೆ “ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದ್ದ ಸೇಠಗೆ ಸೋಲು”

0
172

ಉತ್ತರದಲ್ಲಿ ಭರ್ಜರಿ ಗೆಲವು ಸಾಧಿಸಿದ ಬೆನಕೆ

“ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದ್ದ ಸೇಠಗೆ ಸೋಲು”

ಕನ್ನಡಮ್ಮ ಸುದ್ದಿ-ಬೆಳಗಾವಿ:ಉತ್ತರ ಮತ ಕ್ಷೇತ್ರದಲ್ಲಿ ಹ್ರಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ನ ಅಭ್ಯರ್ಥಿ ಪಿರೋಜ್ ಸೇಠ್ ಅವರಿಗೆ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಸೋಲಿನ ರುಚಿ ತೋರಿಸಿ ಭಾರಿ ಅಂತರದಿಂದ ಗೆಲವು ಸಾಧಿಸಿ ಉತ್ತರ ಮತ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ 79057 ಮತ ಪಡೆದು 17,264 ಮತಗಳ ಅಂತರದಿಂದ ಭಾರಿ ಗೆಲವು ಸಾಧಿಸಿದ್ದಾರೆ. ಬಿಜೆಪಿ ಮತ್ತು ಎಂಈಎಸ್‍ನ ಒಡಕಿನ ಲಾಭ ಪಡೆದು ಎರಡು ಭಾರಿ ಗೆಲವು ಸಾಧಿಸಿದ್ದ ಪಿರೋಜ್ ಸೇಠಗೆ 61,793 ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದು  ಬಿಜೆಪಿ ಮನಿಸಲು ವಿಫಲರಾಗಿದ್ದಾರೆ.

ಸದಾ ನಾಡದ್ರೋಹಿ ಸುದ್ದಿ ಬಿತ್ತರಿಸು ಪತ್ರಿಕೆ ಒಂದರ ಕಛೇರಿಗೆ ಬೇಟಿ ನೀಡಿ ಮತಯಾಚನೆ ಮಾಡಿದ್ದ ಅನಿಲ ಬೆನಕೆ  ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.ಆದರೆ ಇದೆಲ್ಲವನ್ನು ಮರೆತ ಕನ್ನಡ ಭಾಷಿಕ ಮತದಾರರು ಬೆನಕೆಗೆ ಮತದಾನ ಮಾಡಿ ಗೆಲ್ಲಿಸಿರುವದು ವಿಶೇಷವಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ಕಣಕಿಳಿದಿದ ಅವರಿಗೆ ಸಂಸದರಾದ ಸುರೇಶ ಅಂಗಡಿ ಮತ್ತು ಪ್ರಭಾಕರ ಕೋರೆ ಗೆಲುವಿಗೆ ತಂತ್ರ ರೂಪಿಸಿ ಮಹಾ ನಗರ ಪಾಲಿಕೆಯ ಸುಮಾರು 20 ಕ್ಕೂ ಹೆಚ್ಚು ಸದಸ್ಯರು ಪಕ್ಷಾತೀತವಾಗಿ ಅನಿಲ ಬೆನಕೆ ಬೆನ್ನಿಗೆ ನಿಲ್ಲುವಂತೆ ಮಾಡಿದ ಸಂಸದರು ಉತ್ತರದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

loading...