ಬೆಳಗಾವಿಯಲ್ಲಿ ನಾಡದ್ರೋಹಿ ಎಂಈಎಸ್ ಧೂಳಿಪಟ “ತಾಲೂಕಿನ ಮೂರು ಕ್ಷೇತ್ರಗಳಲ್ಲಿ ಝಾಪಾಗಳಿಗೆ ಸೋಲು “

0
81

  ಬೆಳಗಾವಿಯಲ್ಲಿ ನಾಡದ್ರೋಹಿ ಎಂಈಎಸ್ ಧೂಳಿಪಟ
“ತಾಲೂಕಿನ ಮೂರು ಕ್ಷೇತ್ರಗಳಲ್ಲಿ ಝಾಪಾಗಳಿಗೆ ಸೋಲು “
ಆನಂದ ಭಮ್ಮಣ್ಣವರ
ಬೆಳಗಾವಿ:ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನ ಸಭೆ ಚುನಾವಣೆ ಫಲಿತಾಂಶ ಅಚ್ಚರಿಯಾಗಿ ಬಂದಿದ್ದು ಜಿಲ್ಲೆಯಲ್ಲಿ ಯಾವಾಗಲೂ ಕ್ಯಾತೆ ತೆಗೆಯುತ್ತಿದ್ದ ಗಡಿ ಮತ್ತು ಭಾಷೆ ಹೆಸರಿನಲ್ಲಿ ಸದಾ ಗಡಿ ಭಾಗದಲ್ಲಿ ಗದ್ದಲ ಎಬ್ಬಿಸುತ್ತಿದ್ದ ನಾಡ ದ್ರೋಹಿ ಎಂಈಎಸ್‍ನ ಝಾಪಾಗಳಿಗೆ ಬೆಳಗಾವಿಯ ಕನ್ನಡಿಗರು ತಾಲೂಕಿನ ಮೂರು ಕ್ಷೇತ್ರದಲ್ಲಿ ಕಮಲ ಮತ್ತು ಕೈಗೆ ಬೆಂಬಲ ನೀಡಿ ಎಂಈಎಸ್‍ನ ಧೂಳಿಪಟ ಮಾಡಿದ್ದಾರೆ.
ದಕ್ಷಿಣ ಉತ್ತರದಲ್ಲಿ ಬಿಜೆಪಿಗೆ ಜೈ
ಮಂಗಳವಾರ ಹೊರಬಂದ ವಿಧಾನ ಸಭೆ ಚುನಾವಣೆ ಫಲಿತಾಂಶ ಕೆಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.ನಗರದ ಎರಡು ಮರಾಠ ಸಮುದಾಯದ ಪ್ರಾಬಲ್ಯವಿರುವ ಉತ್ತರ ಮತ್ತು ದಕ್ಷಿಣ ಮತ ಕ್ಷೇತ್ರದಲ್ಲಿ ಬೆಳಗಾವಿ ಜನತೆ ಅದರಲ್ಲೂ ಮರಾಠ ಸಮುದಾಯ ಬಿಜೆಪಿ ಅಭ್ಯರ್ಥಿಗಳಿಗೆ ಮನ್ನನೆ ನೀಡುವ ಮೂಲಕ ಮರಾಠಿಗರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದ ಎಂಈಎಸ್‍ಗೆ ತೀವ್ರ ಅಘಾತ ನೀಡಿ ಎಂಇಎಸ್ ಅಭ್ಯರ್ಥಿಗಳಿಗೆ ಠೇವಣಿ ಕಳೆಸದುಕೊಳ್ಳುವಂತೆ ಮಾಡಿದ್ದಾರೆ.
ದಕ್ಷಿಣ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲಗೆ 84498 ಮತ ನೀಡಿ 58 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ, ಕಾಂಗ್ರೆಸ್‍ನ ಅಭ್ಯರ್ಥಿ ಲಕ್ಷ್ಮೀ ನಾರಾಯಣಗೆ 25,806 ಮತ ನೀಡಿದರೆ,ಎಂಈಎಸ್‍ನ ಕಿರಣ ಸಾಯಿನಾಯಿಕ ಕೇವಲ 8295 ಮತ ಗಳಿಸಲು ಮಾತ್ರ ಸಾಧ್ಯವಾಗಿದೆ.ಮತ್ತು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಅವರಿಗೆ 79,057 ಮತ ನೀಡಿ ಗೆಲ್ಲಿಸಿದ್ದರಾ ,ಕಾಂಗ್ರೆಸ್‍ನ ಪೀರೋಜ್ ಸೇಠ ಅವರಿಗೆ 61,793 ಮತ ಬಂದಿದ್ದು,ಇಲ್ಲಿ ಎಂಈಎಸ್ ಅಭ್ಯರ್ಥಿ ಮಾಜಿ ಶಾಸಕ ಸಂಬಾಜಿ ಪಾಟೀಲ ಕೆವಲ 249 ಮತ ಗಳಿಸಿ ಹೀನಾಯ ಸೋಲು ಕಂಡಿದ್ದಾರೆ.
ಗ್ರಾಮೀಣದಲ್ಲಿ ಲಕ್ಷ್ಮಿ ಪರ ಮರಾಠಿಗರು:
ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಈ ಬಾರಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಎಲ್ಲ ಸಮುದಾಯದ ಮತದಾರರು ಕೈ ಹಿಡದಿದ್ದು ಅದರಲ್ಲಿಯೂ ಕೈ ಅಭ್ಯರ್ಥಿ ಹೆಬ್ಬಾಳಕರ ಅವರಿಗೆ ಎಂಇಎಸ್‍ನ ಮತದಾರ ಈ ಬಾರಿ ಕೈ ಪರ ಮತ ಚಲಾವಣೆ ಮಾಡಿ ಬಾರಿ ಅಂತರದಿಂದ ಗೆಲ್ಲಿಸಿದ್ದಾರೆ.
ಕಾಂಗ್ರೆಸ್‍ನ ಲಕ್ಷ್ಮಿ ಹೆಬ್ಬಾಳಕರ ಅವರಿಗೆ 1,02040 ಮತ ನೀಡಿ 50 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಮತ್ತು ಬಿಜೆಪಿ ಸಂಜಯ ಪಾಟೀಲ ಅವರಿಗೆ ಕೆವಲ 50,316 ಮತ ನೀಡಿದ್ದಾರೆ ,ಇಲ್ಲಿ ಎಂಇಎಸ್‍ನ ಅಭ್ಯರ್ಥಿ ಮನೋಹರ ಕಿಣೆಕರ ಅವರಿಗೆ 23,776 ಮತಗಳನ್ನು ಮಾತ್ರ ನೀಡಿದ್ದಾರೆ.
ಒಟ್ಟಿನಲ್ಲಿ ಬೆಳಗಾವಿಯಲ್ಲಿ ಮುಗ್ದ ಮರಾಠಿಗರ ಮತಗಳಿಂದ ರಾಜಕೀಯ ಬೆಳೆ ಬೆಯಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮೀತಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಬೆಳಗಾವಿ ತಾಲೂಕಿನ ಮೂರು ಕ್ಷೇತ್ರದ ಪ್ರಬುಧ್ದ ಕನ್ನಡಿಗ ಮತದಾರರು ಒಂದು ಕಡೆ ಕಾಂಗ್ರೆಸ್ ಪರ ನಿಂತರೆ ಮತ್ತೆರಡು ಕಡೆ ಬಿಜೆಪಿಗೆ ಜೈ ಎಂದು ಎಂಈಎಸ್ ಬೆಳಗಾವಿಯಲ್ಲಿ ಧೂಳಿಪಟ ಮಾಡಿದ್ದಾರೆ.

loading...