ಬಿಜೆಪಿಯೊಂದಿಗೆ ಮೈತ್ರಿ ಇಲ್ಲ, ಕಮಲ ನಾಯಕರ ಮೇಲೆ ಎಚ್ಡಿಕೆ ವಾಗ್ದಾಳಿ

0
109

ಬೆಂಗಳುರು: ಕರ್ನಾಟಕ ಚುನಾವಣಾ ಫಲಿತಾಂಶ ಅತಂತ್ರವಾದ ಮೇಲೆ ಸರಕಾರ ಯಾರು ರಚನೆ ಮಾಡ್ತಾರೆ ಎಂಬ ಪ್ರಶ್ನೆ ಈಡೀ ದೇಶಕ್ಕೆ ಕಾಡುತ್ತಿದೆ.
ಬೆಂಗಳೂರಿನ ಖಾಸಗಿ ಹೊಟೆಲವೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ ಮಾತಿನುದ್ದೂಕ್ಕೂ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು. ಕಮಲ ನಾಯಕರು ಜೆಡಿಎಸ್ನ ಕೆಲ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಹಾಗೂ ಕೋಟಿ ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗುತ್ತಿದೆ ಎಂದಿದ್ದಾರೆ. ಈ ಹಣ ಎಲ್ಲಿಂದ ಬರುತ್ತೆ…? ಇದು ಬ್ಲಾಕ್ ಮನಿ ನಿಮ್ಮ ಹತ್ರ ಇದ್ರೆ ಎಲ್ಲಿಟ್ಟಿದ್ದೀರಿ…? ವೈಟ್ ಮನಿ ನೀವುಂತು ಕೊಡಲಾ ಎಂದು ನೇರವಾಗಿ ಬಿಜೆಪಿ ರಾಷ್ಟ್ರ ಮುಖಂಡರ ಮೇಲೆ ಹಾಗೂ ಪ್ರಧಾನಿ ಮೇಲೆ ಎಚ್ಡಿಕೆ ವಾಕ್ ಪ್ರಹಾರ ನಡೆಸಿದ್ದಾರೆ. ಒಂದು ವೇಳೆ ನಮ್ಮ ಮುಖಂಡರನ್ನು ಸೆಳೆಯುವ ತಂತ್ರ ಮಾಡಿದರೆ ಸುನ್ನಿರೊಲ್ಲಾ ಎಂದು ಎಚ್ವರಿಕೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ. ಹಾಗೂ ೨೦೦೮ ರಲ್ಲಿ ಆಗಿದ್ದ ಮೈತ್ರಿ ಯಿಂದ ಪಾಠ ಕಲಿತಿದ್ದೇನೆ ಆ ತಪ್ಪು ಮಾಡಲ್ಲಾ ನನ್ನಿಂದ ನಮ್ಮ ತಂದೆ ರಾಜಕೀಯ ಜೀವನ ಮೇಲೆ ಕಪ್ಪು ಚುಕ್ಕೆ ಅಂಟಿದೆ ಈಗ ಆ ದೇವರು ಕಪ್ಪು ಚುಕ್ಕೆ ಅಳಿಸಲು ಒಂದು ಅವಕಾಶ ನೀಡಿದ್ದಾನೆ ಎಂದರು.
ಬಿಜೆಪಿಯವರು ಕುದರೆ ವ್ಯಾಪಾರ ನಡೆಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯವರು ನಡೆಸಿರುವ ದಾಳಿ ಕುರಿತು ಮಾತನಾಡಿದರು.ಕ್ಷಣ ಕ್ಷಣಕ್ಕೂ ಹೊಸ ರಾಜಕೀಯ ತಿರುವು ಪಡೆದಿಕೊಳ್ಳುತ್ತಿದೆ.

loading...