ಬಿಜೆಪಿಯತ್ತ ಹೆಜ್ಜೆ ಹಾಕುತ್ತಾರಾ ಮಾಸ್ಟರ್ ಮೈಂಡ್?

0
506

ಬಿಜೆಪಿಯತ್ತ ಹೆಜ್ಜೆ ಹಾಕುತ್ತಾರಾ ಮಾಸ್ಟರ್ ಮೈಂಡ್?

ಕನ್ನಡಮ್ಮ ಸುದ್ದಿ

ಚಿಕ್ಕೋಡಿ 16: ರಾಜ್ಯ ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆಯುತ್ತ ಮುಂದೆ ಸಾಗಿರುವ ಎಐಸಿಸಿ ಕಾರ್ಯದಶರ್ಿ ಸತೀಶ ಜಾರಕಿಹೊಳಿ ಅವರು ಬಿಜೆಪಿ ಸೇರುವ ಸಾಧ್ಯತೆಗಳು ದಟ್ಟವಾಗಲಾರಂಭಿಸಿದ್ದು, ಸತೀಶ್ ಬೆಂಬಲ ನೀಡಿದರೆ ಬಿಜೆಪಿ ಸರಕಾರ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ದೊರೆಯುವ ಸಾಧ್ಯತೆಗಳಿವೆ.

ಹೌದು, ಬಹುಮತದ ಕೊರತೆಯಿಂದ ಅಧಿಕಾರದಿಂದ ದೂರ ಉಳಿದಿರುವ ಬಿಜೆಪಿ ಮ್ಯಾಜಿಕ್ ನಂಬರಗೆ ಕೊರತೆಯಿರುವ ಬೆಂಬಲ ಪಡೆಯಲು ಶ್ರೀರಾಮುಲು ಹಾಗೂ ಮಾಜಿ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಎಐಸಿಸಿ ಕಾರ್ಯದಶರ್ಿ ಸತೀಶ ಜಾರಕಿಹೊಳಿ ಅವರಿಗೆ ಆಫರ್ ನೀಡಲಾಗಿದ್ದು, ಈಗಾಗಲೇ ರಾಜ್ಯಪಾಲರು ಬಿಜೆಪಿ ಸರಕಾರ ರಚನೆಗೆ ಅವಕಾಶ ಒದಗಿಸಿರುವದರಿಂದ ಮಾಸ್ಟರ್ ಮೈಂಡ ಮುಂದಿನ ನಡೆ ಬಿಜೆಪಿ ಭವಿಷ್ಯ ನಿಧರ್ಾರದಲ್ಲಿ ನಿಣರ್ಾಯಕ ಪಾತ್ರವಹಿಸಲಿದೆ.

ಇತ್ತೀಚಿಗೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ಮುನಿಸಿಕೊಂಡಿರುವ ಸತೀಶ ಜಾರಕಿಹೊಳಿ ಈ ಹಿಂದೆಯೇ ಪಕ್ಷ ತೊರೆಯುವ ಸಾಧ್ಯತೆಗಳನ್ನು ದಟ್ಟವಾಗಿದ್ದವು. ಆದರೂ ಎಲ್ಲವನ್ನು ಸರಿಪಡಿಸಿಕೊಂಡಿದ್ದ ಸತೀಶ ಜಾರಕಿಹೊಳಿ ಅವರಿಗೆ ಪಕ್ಷದಲ್ಲಿ ಪೂರ್ಣ ಪ್ರಮಾಣದ ಅಧಿಕಾರ ದೊರೆಯದೇ ಇರುವದರಿಂದ ಮುನಿಸಿಕೊಂಡಿರುವ ಸತೀಶ್ ಬಿಜೆಪಿ ಸೇರಲು ಮುಂದಾಗಿದ್ದಾರೆನ್ನಲಾಗಿದೆ.

ಒಂದು ವೇಳೆ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷ ತ್ಯಜಿಸುವದು ನಿಶ್ಚಿತವಾದರೆ ಪಕ್ಷ ಅವರಿಗೆ ಉನ್ನತಾಧಿಕಾರದ ಜೊತೆಗೆ ಉಪಮುಖ್ಯಮಂತ್ರಿ ಅಥವಾ ಯಾವುದಾದರೊಂದು ಪ್ರಬಲ ಖಾತೆ ನೀಡುವ ಭರವಸೆ ನೀಡಿದೆ ಎನ್ನಲಾಗಿದ್ದು, ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕ ಶ್ರೀರಾಮುಲು ಅವರೇ ಸತೀಶ ಜಾರಕಿಹೊಳಿ ಮನವೊಲೈಕೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದು, ಬೆಳಗಾವಿ ಜಿಲ್ಲೆಯ ಪ್ರಭಾವಿ ಸಚಿವ ಉಮೇಶ ಕತ್ತಿ ಅವರು ಸಹ ಸತೀಶ ಜಾರಕಿಹೊಳಿ ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ.

..

loading...