ಉತ್ತರದಲ್ಲಿದ್ದ ಬೆಂಬಲ ಯಮಕನಮರಡಿಯಲ್ಲಿ ಇಲ್ಲ ಕಮಲ ಅರಳಿಸುವ ಅಷ್ಟಗಿ ಪ್ರಯತ್ನಕೆ ಅಡ್ಡಿ ಯಾರು ?

0
381

ಉತ್ತರದಲ್ಲಿದ್ದ ಬೆಂಬಲ ಯಮಕನಮರಡಿಯಲ್ಲಿ ಇಲ್ಲ
ಕಮಲ ಅರಳಿಸುವ ಅಷ್ಟಗಿ ಪ್ರಯತ್ನಕೆ ಅಡ್ಡಿ ಯಾರು ?
ಆನಂದ ಭಮ್ಮಣ್ಣವರ
ಬೆಳಗಾವಿ :ಜಿಲ್ಲೆಯೆ ಪ್ರತೀಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಯಮಕನಮರಡಿ ವಿಧಾನ ಸಭೆ ಕ್ಷೇತ್ರದ ಚುನಾವಣೆ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ.ಕ್ಷೇತ್ರದಲ್ಲಿ ಕೆಲಸ ಮಾಡಿದ್ದೆನೆ ಪ್ರಚಾರಕ್ಕೆ ಹೋಗದೆ ಗೆಲ್ಲುತ್ತೆನೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಸೋಲಿನ ದವಡೆಯಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.ಊಹೆಗೂ ನಿಲುಕದಂತೆ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಅಚ್ಚರಿ ಮತಗಳಿಗೆಯನ್ನು ಪಡೆದಿದ್ದಾರೆ.ಇತ್ತ ಬಿಜೆಪಿ ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಒಗ್ಗಟಿನ ಪರಿಣಾಮ ಅನಿಲ ಬೆನಕೆ ಭರ್ಜರಿ ಗೆಲವು ಸಾಧಿಸಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕಾರಣದ ಮೇಲೆ ತಮ್ಮದೆ ಹಿಡಿತ ಹೊಂದಿರುವ ಕಾಂಗ್ರೆಸ್‍ನ ಸತೀಶ ಜಾರಕಿಹೊಳಿ ಈ ಬಾರಿ ದಾಖಲೆ ಮತಗಳ ಅಂತರ ಮತಗಳಿಂದ ಗೆಲ್ಲುತ್ತೆನೆ ಎಂದು ರಾಹು ಕಾಲದಲ್ಲಿ ನಾಮ ಪತ್ರ ಸಲ್ಲಿಸಿ ರಾಜ್ಯದ ತುಂಬ ಸುದ್ದಿಯಾಗಿದ್ದರು.ಆದರೆ ಇವರಿಗೆ ಈ ಬಾರಿ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಭರ್ಜರಿ ಮತ ಪಡೆದು ಜಿಲ್ಲೆಯೆ ನಾಯಕರು ಹುಬ್ಬೆರಿಸುವಂತೆ ಮಾಡಿದ್ದಾರೆ.
ಮಂಗಳವಾರ ಬಂದ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‍ನ ಸತೀಶ ಜಾರಕಿಹೊಳಿ 73,323 ಮತ ಪಡೆದು ನಿರಾಯಾಸದ ಗೆಲವು ಪಡೆದರೆ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ 70,506 ಮತ ಪಡೆದು ಎಐಸಿಸಿ ಕಾರ್ಯದರ್ಶಿಗಳಿಗೆ ನೇರಾ ನೇರ ಸ್ಪರ್ಧೆಯೊಡ್ಡಿ 2817 ಅಲ್ಪ ಮತಗಳಿಂದ ಸೋಲು ಕಂಡಿದ್ದಾರೆ.

ಅಷ್ಟಗಿ ಬೆನ್ನಿಗೆ ನಿಲ್ಲದೆ ಕಮಲ ನಾಯಕರು:
ಯಮಕನಮರಡಿ ಮತ ಕ್ಷೇತ್ರದಲ್ಲಿ ಒಂದು ಸ್ಥಳಿಯ ಸಂಸ್ಥೆಗಳಲ್ಲಿ ಬಿಜೆಪಿ ಹಿಡಿತದಲ್ಲಿ ಇಲ್ಲದೆ ಜಿಲ್ಲೆಯ ಯಾವುದೇ ನಾಯಕರು ಪ್ರಚಾರಕ್ಕೆ ಸಹಕಾರ ನಿಡದೆ ಇದ್ದರು ಕಮಲ ಪಕ್ಷದ ಪರ ಯಮಕನಮರಡಿ ಕ್ಷೇತ್ರದ ಜನತೆ ಭರ್ಜರಿ ಮತ ನೀಡಿ ಅಷ್ಟಿಗಿ ಬೆನ್ನಿಗೆ ನಿಂತಿದ್ದಾರೆ.ಕಮಲ ಜಿಲ್ಲಾ ನಾಯಕರು ಅಷ್ಟಗಿ ಬೆನ್ನಿಗೆ ನಿಂತಿದ್ದೆ ಆದಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಕೈ ಸೋಲಿಸಿ ಕಮಲ ಅರಳುತ್ತಿತ್ತು ಇದಕ್ಕೆ ಜಿಲ್ಲೆಯೆ ನಾಯಕರೆ ಕಾರಣ ಎಂದು ಹೇಳಲಾಗುತ್ತಿದೆ.
ಅತಿಯಾದ ಆತ್ಮ ವಿಶ್ವಾಸ ಕೈ ಕೊಟ್ಟಿತಾ?
ಕಳೆದ ಹತ್ತು ವರುಷದಿಂದ ಶಾಸಕರಾಗಿ ಯಮಕನಮರಡಿ ಕ್ಷೇತ್ರದಲ್ಲಿ ಹಲವಾರೂ ಅಭಿವೃದ್ಧಿ ಕಾರ್ಯ ಮಾಡಿದ್ದೆನೆ ಈ ಬಾರಿ ಜನರು ಕಾರ್ಯಕರ್ತರು ಪ್ರಚಾರಕ್ಕೆ ಹೋಗದೆ ಗೆಲ್ಲಿಸುತ್ತಾರೆ ಎಂಬ ಅತಿಯಾದ ನಂಬಿಕೆಯಿಂದ ಇದ್ದ ಸತೀಶ ಜಾರಕಿಹೊಳಿ ಅವರಿಗೆ ಕ್ಷೇತ್ರದ ಜನತೆ ಕೈ ಕೊಟ್ಟಿದ್ದು ಗೆಲ್ಲಲು ಹರಸಾಹಸ ಪಡುವಂತಾಗಿದೆ.
ಮತ್ತು ಇದರ ಜೊತೆಗೆ ಶಾಸಕ ಸತೀಶ ಜಾರಕಿಹೊಳಿ ಪಿ.ಎ.ಗಳ ದರ್ಬಾರ ನಡೆಸಿದ್ದಾರೆ ಎಂಬ ಆರೋಪವು ಶಾಸಕರ ಮತ ಗಳಿಗೆಯಲ್ಲಿ ಬಾರಿ ಹಿನ್ನಡೆಯಾಗುವಂತೆ ಮಾಡಿದೆ ಎನ್ನಲಾಗುತ್ತಿದೆ.

ಮೋದಿ ಶಾ ಮತ್ತು ಯೋಗಿ ಪ್ರಭಾವ:
ಬೆಳಗಾವಿಯಲ್ಲಿ ಮೋದಿ,ಅಮೀತ ಶಾ ಮತ್ತು ಯೋಗಿ ಆಧಿತ್ಯನಾಥ ಅವರ ಪ್ರಚಾರದ ಪ್ರಭಾವವು ಮಾರುತಿ ಅಷ್ಟಗಿ ಮತ ಗಳಿಗೆ ಹೆಚ್ಚಿಸಿದೆ ಎನ್ನಲಾಗುತ್ತಿದೆ.
ಏನೆ ಆದರೂ ಮತದಾರರ ಪ್ರಭು ಮಾತ್ರ ಯಾವ ಸಂಧರ್ಭದಲ್ಲಿ ಯಾರ ಮೇಲೆ ಕೃಪೆ ತೋರುತ್ತಾನೆ ಎಂಬುವುದು ಮಾತ್ರ ಗೌಪ್ಯ ಮತದಾನದ ಪರಿಣಾಮವಾಗಿದೆ.

ಒಟ್ಟಿನಲ್ಲಿ ಈ ಬಾರಿ ಚುನಾವಣೆ ಪಲಿತಾಂಶ ಹಲವಾರು ಅಚ್ಚರಿಗೆ ಸಾಕ್ಷಿಯಾಗಿದ್ದು ಯಾರಿಗೂ ಸುಲಭದ ಗೆಲುವಿಗೆ ಮತದಾರರ ಬಿಡುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.

loading...