ನೀರು ಹೊರಕ್ಕೆ ಬಿಡದ ಕಾರಣ ವಿದ್ಯುತ್‌ ಘಟಕ ಸ್ಥಗಿತ

0
69

ಕನ್ನಡಮ್ಮ ಸುದ್ದಿ-ಆಲಮಟ್ಟಿ: ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್‌ ಉತ್ಪಾದನಾ ಕೇಂದ್ರದ ಕಳೆದ ಆರ್ಥಿಕ ವರ್ಷದಲ್ಲಿ 441 ದಶಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದ್ದು, ಸದ್ಯ ಆಲಮಟ್ಟಿ ಜಲಾಶಯದಿಂದ ನೀರು ಹೊರಕ್ಕೆ ಬಿಡದ ಕಾರಣ ವಿದ್ಯುತ್‌ ಘಟಕ ಸ್ಥಗಿತವಾಗಿದೆ.
ಕಳೆದ ವರ್ಷ ಜಲಾಶಯಕ್ಕೆ ಹೆಚ್ಚು ನೀರು ಹರಿದ ಪರಿಣಾಮ ವಿದ್ಯುತ್‌ ಉತ್ಪಾದನೆಯೂ ಹೆಚ್ಚಿದೆ. 2017-18 ನೇ ಸಾಲಿನಲ್ಲಿ 482 ದಶಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯ ಗುರಿ ನೀಡಲಾಗಿತ್ತು ಆದರೆ 441 ದಶಲಕ್ಷ ಯೂನಿಟ್‌ ವಿದ್ಯತ್‌ ಉತ್ಪಾನೆಯಷ್ಠೆ ಸಾದ್ಯವಾಗಿದೆ.
ಈ ವರ್ಷ 426 ದಶಲಕ್ಷ ಯೂನಿಟ್‌ ಗುರಿ: ಪ್ರಸ್ತುತ ಸಾಲಿನಲ್ಲಿ ಘಟಕಕ್ಕೆ 426 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯ ಗುರಿ ನೀಡಲಾಗಿದೆ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದ ಅನುಗುಣವಾಗಿ ವಿದ್ಯುತ್‌ ಉತ್ಪಾದನೆಯಾಗುತ್ತದೆ ಎಂದು ಕೆಪಿಟಿಸಿಎಲ್‌ ಸುರಿಟೆಂಡಿಗ್‌ ಎಂಜಿನೀಯರ್‌ ಬಿಸ್ಲಾಪೂರ ಮಾಹಿತಿ ನೀಡಿದರು.
ಆಲಾಶಯದಲ್ಲಿ ಒಟ್ಟು 6 ಘಟಕಗಳಿದ್ದು 15 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಒಂದು.55 ಮೆಗಾವಾಟಿನ ಐದು ಘಟಕಗಳಿವೆ, ಎಲ್ಲಾ ಘಟಕಗಳು ಕಾಯಾರಂಭ ಮಾಡಲು 45 ಸಾವಿರ ಕ್ಯುಸೆಕ್‌ ನೀರಿನ ಅಗತ್ಯವಿದೆ. ಸದ್ಯ ಜಲಾಶಯದ ಮಟ್ಟ 508 ಮೀ ವರೆಗೆ ಇದ್ದು, ಈಗಲೂ 1500 ಕ್ಯೂಸೆಕ್‌ ನೀರು ಹರಿಸಿದರೂ ಮೊದಲ 15 ಮೆಗಾವಾಟಿನ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದರು. ನಿತ್ಯ ಎಲ್ಲ ಘಟಕಗಳು ಕಾರ್ಯಾರಂಭ ಮಾಡಿದರೆ 6 ದಶಲಕ್ಷ ಯುನಿಟ್‌ವರೆಗೆ ವಿದ್ಯುತ್‌ ಉತ್ಪಾದನೆ ಆಗಲಿದೆ. 6/9/2007 ರಂದು 7.39 ದಶಲಕ್ಷ ಯುನಿಟ್‌ ವಿದ್ಯತ್‌ ಉತ್ಪಾದಿಸಿದ್ದು, ಈ ಘಟಕದ ಅತ್ಯಂತ ಗರಿಷ್ಟ ವಿದ್ಯುತ್‌ ಉತ್ಪಾದನೆ ದಾಖಲೆ ಆಗಿದೆ ಎಂದು ತಿಳಿಸಿದರು. ಆಲಮಟ್ಟಿಯಲ್ಲಿ 2004 ಮಾರ್ಚ್‌ ದಿಂದ ವಿದ್ಯುತ್‌ ಉತ್ಪಾದನೆ ಆರಂಭಗೊಂಡಿದೆ.ಇಲ್ಲಿಯವರೆಗೆ ಈ ಘಟಕದಲ್ಲಿ ಒಟ್ಟಾರೆಯಾಗಿ 6200 ದಶಲಕ್ಷ ಯುನಿಟ್‌ಗಿಂತಲೂ ಅಧಿಕ ವಿದ್ಯುತ್‌ ಉತ್ಪಾದನೆಯಗಿದೆ ಎಂದರು. ಜುಲೈ, ಅಗಷ್ಟ್‌ ಹಾಗೂ ಸೆಪ್ಟಂಬರ್‌ ತಿಂಗಳಲ್ಲಿ ಜಲ ವಿದ್ಯುತ್‌ ಉತ್ಪಾದನೆಯ ಪೀಕ್‌ ಅವಧಿ ಎಂದು ಕರೆಯಲಾಗುತ್ತಿದ್ದು, ಈ ಅವಧಿಯಲ್ಲಿ ಜಲಾಶಯದಿಂದ ವ್ಯಾಪಕ ಪ್ರಮಾಣದ ನೀರು ಹರಿಸುವ ಕಾರಣ ಇವೇ ಮೂರು ತಿಂಗಳಲ್ಲಿ ಸುಮಾರು 300 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಬಹುದು ಎಂದುರು. ಜುಲೈ ವೇಳೆಗೆ ಪುನರಾರಂಭ: ಜಲಾಶಯದಿಂದ ನೀರು ಬಿಡದ ಕಾರಣ ಘಟಕ ಸ್ಥಗಿತವಾಗಿದೆ. ಆಲಮಟ್ಟಿ ಜಲಾಶಯಕ್ಕೆ ಜುಲೈವೇಳೆ ಹೆಚ್ಚು ನೀರು ಬರಲಿದ್ದು, ಆಗ ನಾರಾಯಣಪುರ ಜಲಾಶಯಕ್ಕೆ ನೀರು ಹರಿದು ಬಿಟ್ಟಾಗ ವಿದ್ಯುತ್‌ ಘಟಕ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತದೆ ಎಂದು ಕೆಪಿಸಿಟಿಎಲ್‌ ಅಧೀಕ್ಷಕ ಎಂಜನೀಯರ್‌ ಎಸ್‌.ಬಿ.ಬಿಸ್ಲಾಪುರ ತಿಳಿಸಿದರು. ವಿದ್ಯುತ್‌ ಉತ್ಪಾದನಾ ಘಟಕ ಬಂದ್‌ ಆದ ಕಾರಣ 55 ಮೆಗಾವಾಟ್‌ ಸಾಮಥ್ಯದ ಎಲ್ಲಾ ಐದು ಘಟಕಗಳ ವಾರ್ಷಿಕ ನಿರ್ವಹಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು. ಇಲ್ಲಿ ಉತ್ಪತ್ತಿಯಾಗುವ ವಿದ್ಯುತ್‌ ಕೆಪಿಟಿಸಿಎಲ್‌ನ ಬಸವನ ಬಾಗೇವಾಡಿ-ಮಹಾಲಿಂಗಪುರ ಸ್ವೀಕೃತಿ ಗ್ರಿಡ್‌ಗೆ ಸೇರಿಸಲಾಗುತ್ತದೆ.

loading...