ಮುಖಂಡರ ಪಡೆಯೊಂದಿಗೆ ಶ್ರಮಿಸುವೆ: ದೆಸಾಯಿ

0
66

ಕನ್ನಡಮ್ಮ ಸುದ್ದಿ-ಕೊಲ್ಹಾರ: ಮೆ.18 ವಿಧಾನಸಭಾ ಚುನಾವಣೆಯಲ್ಲಿ ಮತದಾರು ನೀಡಿರುವ ಆದೇಶಕ್ಕೆ ತಲೆಬಾಗುವೆ ಮತ್ತು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿರುವ ಮುಖಂಡರಿಗೆ, ಕಾರ್ಯಕರ್ತರಿಗೆ ಮತ್ತು ಮತದಾರ ಪ್ರಭುಗಳಿಗೆ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದ ಸಂಗರಾಜ ದೆಸಾಯಿ ಅಭಿನಂದಿಸಿದರು. ಅವರು ಶುಕ್ರವಾರ ಪಟ್ಟಣದಲ್ಲಿ ಎರ್ಪಡಿಸಿದ್ದ ಆತ್ಮಾವಲೋಕನ ಹಾಗೂ ಅಬಿನಂದನಾ ಸಭೆಯಲ್ಲಿ ಮಾತನಾಡಿ ಜನಾದೇಶವನ್ನು ಹುರುಪೀನಿಂದಲೆ ಸ್ವೀಕರಿಸುವೆ. ಚುನಾವನೆಯಲ್ಲಿ ಸೋಲುಂಟಾಗಿದೆ ಎಂದು ಸುಮ್ಮನೇ ಕುಳಿತು ಕೋಳ್ಳುವುದಿಲ್ಲ. ಇಂದಿನಿಂದಲೆ ಮತ್ತೇ ಪಕ್ಷವನ್ನು ಕಟ್ಟಲು ಎಲ್ಲ ಕಾರ್ಯಕರ್ತರ ಮತ್ತು ಮುಖಂಡರ ಪಡೆಯೊಂದಿಗೆ ಶ್ರಮಿಸುವೆ ಎಂದರು. ಬಿಜೆಪಿ ಮುಖಂಡ ಬಸವರಾಜ ಕುಂಬಾರ ಮಾತನಾಡಿ ಕಾರ್ಯಕರ್ತರು ಎದೆಗೊಳ್ಳಬಾರದು ಭಾರತಿಯ ಜನತಾ ಪಕ್ಷಕ್ಕೆ ಸೊಲು ಹೊಸದೆನಲ್ಲ ಈ ಸೊಲನ್ನೆ ಗೆಲುವಾಗಿಸಿಕೊಂಡು ಬರುವ 2019ರ ಲೋಕಸಭೆ ಚುನಾವವನೆಯಲ್ಲಿ ಅತಿ ಹೆಚ್ಚು ಮತಗಳನ್ನ ನಮ್ಮ ಮತಕ್ಷೇತ್ರದಿಂದ ಬರವಂತೆ ಮಾಡಿ ಪ್ರಧಾನಿ ನರೇಂದ್ರ ಮೊದಿಯವರ ಕೈ ಬಲಪಡಿಸೊನ ಎಂದರು. ಸಿದ್ದು ಹೂಗಾರ,ವ್ಹಿ.ಎಮ್‌.ಪರೇಣ್ಣವರ, ಜಗದೀಶ ಕೋಟ್ರಶೇಟ್ಟಿ, ಶಂಕರಗೌಡ ಪಾಟೀಲ ಹಾಗೂ ಗೊಳಸಂಗಿ ತಾಲೂಕ ಪಂಚಾಯತ ಸದಸ್ಯ ಅಮೃತ ಯಾದವ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಬಿ.ಕೆ.ಕಲ್ಲೂರ, ಹಿರಿಯರಾದ ಮಲ್ಲೇಶಪ್ಪ ಬಡಿಗೇರ, ಗೊಪಾಲ ಚಿಂಚೋಳ್ಳಿ, ಡಾ.ಕರಣಾಕರ ಚೌದ್ರಿ, ಜಿಲ್ಲಾ ವಕ್ತಾರ ಟಿ.ಟಿ.ಹಗೇದಾಳ ಎಸ್‌, ಬಿ ಪತಂಗಿ, ಸಿ.ಎಸ್‌ ಗಿಡ್ಡಪ್ಪಗೋಳ, ನಾಗನಗೌಡ ಬಿರಾದಾರ, ಸಾವಿತ್ರಿ ಕಲ್ಯಾಣಶೇಟ್ಟಿ, ಯಮನಾಜಿ ಕರಣಿ, ಶಂಕರ ಬಗಲಿ,ಎಸ್‌.ಎಸ್‌.ಗೌರಿ ಬಸವರಾಜ ಬುಮರೇಡ್ಡಿ ಹಾಗು ನೂರಾರು ಕಾರ್ಯಕರ್ತರಿದ್ದ.

loading...