27 ರಂದು ವಿದ್ಯಾರ್ಥಿಗಳಿಗೆ ಸನ್ಮಾನ

0
50

ನರಗುಂದ: ತಾಲೂಕಾ ಪಂಚಮಸಾಲಿ ಸಮಾಜದ ವತಿಯಿಂದ ಮೇ. 27 ರಂದು ಪಟ್ಟಣದ ಹಳೆ ಎಪಿಎಂಸಿ ಯಾರ್ಡಿನಲ್ಲಿಯ ಸಮಾಜದ ಕಾರ್ಯಾಲಯದಲ್ಲಿ 2018 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರತಿಶತ 90 ಅಂಕಗಳಿಸಿ ತೇರ್ಗಡೆಗೊಂಡ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರತಿಶತ 90 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೇ. 24 ರೊಳಗಾಗಿ ತಮ್ಮ ಹೆಸರುಗಳನ್ನು ದಾಖಲೆಗಳೊಂದಿಗೆ ಪಟ್ಟಣದ ಬಸ್‌ ನಿಲ್ದಾಣ ಬಳಿಯ ಸಾದು ಅಜ್ಜನ ದೇವಸ್ಥಾನ ಕಾಂಪ್ಲೆಕ್ಸ್‌ನಲ್ಲಿಯ ರೇಣುಕಾ ಸಿಮೆಂಟ್ಸ್‌ ಅವರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ. ಸಿ.ಕೆ. ರಾಚನಗೌಡ್ರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಳಿಗೆ ದೂ: 9448861430 ಅಥವಾ 9448103805 ಇಲ್ಲಿಗೆ ಸಂಪರ್ಕಿಸಲು ಕೋರಿದ್ದಾರೆ.

loading...