ರೈತರಿಗೆ ಬೆಳೆ ವಿಮೆ ಹಣ ವಿಳಂಬ ಖಂಡನೀಯ: ಕಮತ

0
86

ಕನ್ನಡಮ್ಮ ಸುದ್ದಿ- ಬೈಲಹೊಂಗಲ: ನಾಲ್ಕೈದು ತಿಂಗಳ ಹಿಂದೆ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 900 ಕೋಟಿಗೂ ಹೆಚ್ಚು ಹಣ ಫಸಲ್ ಭೀಮಾ ಯೋಜನೆಯಡಿ ರಾಜ್ಯಕ್ಕೆ ಬಂದಿದೆ. ಅದರಲ್ಲಿ 108 ಕೋಟಿಗೂ ಹೆಚ್ಚಿನ ಹಣ ಬೆಳಗಾವಿ ಜಿಲ್ಲೆಗೆ ಬಂದಿದ್ದರು ಜಿಲ್ಲಾಧಿಕಾರಿಗಳು ರೈತರ ಖಾತೆಗಳಿಗೆ ಹಣ ಹಾಕದೆ ವಿಳಂಬ ನೀತಿ ಅನುಸರಿಸುತ್ತಿರುವದು ಖಂಡನೀಯವಾಗಿದ್ದು ತಕ್ಷಣ ಹಣ ರೈತರಿಗೆ ಸಂದಾಯ ಮಾಡದೆ ಹೊದರೆ ಸಾವಿರಾರು ರೈತರು ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಕಮತ ಹೇಳಿದರು.

ಮಂಗಳವಾರ ಪಟ್ಟಣದ ನಿರಿಕ್ಷಣಾ ಮಂದಿರದಿಂದ ಉಪವಿಭಾಗಾಧಿಕಾರಿಗಳ ಕಛೇರಿಯ ವರೆಗೆ ನೂರಾರು ರೈತರು ಪ್ರತಿಭಟನೆ ನಡೆಸಿ ಉಪವಿಭಾಗಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಮೂಲಕ ಬೆಳಗಾವಿ ಪ್ರಾದೇಶಿಕ ಆಯುಕ್ತರರಿಗೆ ಮನವಿ ಸಲ್ಲಿಸಿ ಮಾತನಾಡಿ, ಕರ್ನಾಟಕ ರಾಜ್ಯದ ರೈತರು ಕಳೆದ ನಾಲ್ಕು ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದು ಇವರ ನೆರವಿಗೆ ಅನೂಕುಲಕರವಾಗಲೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಯಡಿ, ರಾಜ್ಯದ ರೈತರಿಂದ ಇನ್ಸುರೆನ್ಸ ಕಂಪನಿ ಸಾವಿರಾರೂ ರೂಪಾಯಿಗಳನ್ನು ಪ್ರಿಮಿಯಂ ಹಣ ತುಂಬಿಸಿಕೊಂಡಿವೆ. ರೈತರ ಬೆಳೆ ನಷ್ಟವಾದರು ರೈತರಿಗೆ ಸಂದಬೇಕಾದ ಹಣ ತಲುಪದೆ ಇದ್ದಾಗ ಈ ಹಿಂದೆ ರೈತ ಹೋರಾಟಗಾರರು ಗೌರಾನ್ವಿತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಹಣ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದವು. ಜಿಲ್ಲಾಧಿಕಾರಿಗಳ ಖಾತೆಗೆ 108ಕೋಟಿರೂಪಾಯಿ ಬಂದಿದ್ದರು ಅದನ್ನು ಫಲಾನುಭವಿ ರೈತರ ಖಾತೆಗೆ ಜಮಾ ಮಾಡದೆ ರೈತರ ಬಗ್ಗೆ ಅಸಡ್ಡೆ ಮಾಡುತ್ತಿರುವ ಸರ್ಕಾರದ ನೀತಿಯನ್ನು ಉಗ್ರವಾಗಿ ಖಂಡಿಸಲಾಗುವದು. ರೈತರಿಗೆ ಬಂದಿರುವ ಫಸಲ್ ಭೀಮಾ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲು ಶಿಘ್ರವಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ತಿಳಿಸುವದಾಗಬೇಕು. ಸಂಕಷ್ಟದಲ್ಲಿರುವ ರೈತರ ಬಾಳಿಗೆ ಆಶಾ ಕಿರಣವಾಗಿರುವ ಫಸಲ್ ಭೀಮಾ ಯೋಜನೆ ಸದುಪಯೋಗವಾಗಬೇಕಾಗಿದೆ. ಮಳೆಯಾದ ತಕ್ಷಣ ರೈತರು ಬಿತ್ತನೆಯಲ್ಲಿ ತೊಡಗಿಕೊಳ್ಳುವದರಿಂದ ಬೀಜ, ಗೊಬ್ಬರ ಮತ್ತು ಕೃಷಿ ಆಧಾರಿತ ಸಾಮಗ್ರಿಗಳ ಖರೀದಿಗೆ ಅನುಕೂಲಕರವಾಗಲಿದೆ ಎಂದರು.
ಆದ್ದರಿಂದ ಶಿಘ್ರವಾಗಿ ಪೆಟ್ರೋಲ್ ಮತ್ತು ಡಿಸೈಲ್ ಬೆಲೆಯನ್ನು ಹತೋಟಿಗೆ ತರುವುದರ ಮೂಲಕ ಪ್ರಪಂಚದಲ್ಲಿ ಅತಿ ದುಬಾರಿ ಬೆಲೆಯಾದ ಪೆಟ್ರೋಲ್ ಮತ್ತು ಡಿಸೈಲ್ ಬೆಲೆಯನ್ನು ದೇಶದಲ್ಲಿ ಕಡಿಮೆ ಮಾಡಿ ಜಿಎಸ್‍ಟಿಗೆ ಒಳ ಪಡಿಸಬೇಕು. ತಕ್ಷಣ ಪೆಟ್ರೋಲಿಯಂ ಉತ್ಪನ್ನಗಳ ಮೇಲಿರುವ ಪ್ರತಿಶತ 45ಕೂ ಹೆಚ್ಚಿನ ಅಬಕಾರಿ ಸುಂಕನ್ನು ಕಡಿಮೆಗೊಳಿಸಿ ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಬೆಲೆ ನಿಗಧಿ ಗೊಳಿಸಬೇಕೆಂದು ಪ್ರಧಾನಿ ಮೋದಿಜಿಯವರಿಗೆ ಉಪವಿಭಾಗಾಧಿಕರಿಗಳ ಮೂಲಕ ಮನವಿ ಅರ್ಪಿಸಿ ರೈತ ಸಮುದಾಯದ ಪರವಾಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಈರಪ್ಪ ಹುಬ್ಬಳ್ಳಿ, ಸುರೇಶ ಹೋಳಿ, ಮಹಾದೇವ ಕಲಂಭಾವಿ, ಬಸವರಾಜ ದುಗ್ಗಾಣಿ, ಮಡಿವಾಳಪ್ಪ ತಳವಾರ, ರಂಗಪ್ಪ ಬೂದಿಹಾಳ, ಮೋಹನ ವಕ್ಕುಂದ, ಮಹೇಶ ಚಿಕ್ಕಮಠ, ಹಸನಸಾಬ ಯಕ್ಕುಂಡಿ, ಆನಂದ ಚಿಕ್ಕೊಪ್ಪ, ಮಲ್ಲಿಕಾರ್ಜುನ ಉಪ್ಪಿನ, ಸೋಮಲಿಂಗಪ್ಪ ಹುಂಬಿ, ಸೋಮಯ್ಯ ಏನಗಿಮಠ, ವಿನೋದ ಭಾಂವಿಹಾಳ, ಈರಪ್ಪ ಏನಗಿಮಠ, ನಾಗಪ್ಪ ಕಂಬಳಿ, ಮಹಾಮತೇಶ ಬಟ್ಟಿ, ಚಂದ್ರು ಹೊಂಗಲ, ಇಮಾಮಸಾಬ ವಕ್ಕುಂದ, ರವಿ ಚಿನ್ನಪ್ಪಗೌಡರ ಹಾಗೂ ನೂರಾರು ರೈತ ಮುಖಂಡರು ಉಪಸ್ಥಿತರಿದ್ದರು.

loading...