ಅಪವಿತ್ರ ಸರ್ಕಾರ ಕಿತ್ತೊಗೆಯುವರೆಗೆ ಬಿಜೆಪಿ ವಿಶ್ರಮಿಸುವದಿಲ್ಲ: ಪಾಟೀಲ

0
74

ಕನ್ನಡಮ್ಮ ಸುದ್ದಿ- ಬೈಲಹೊಂಗಲ: ಕರ್ನಾಟಕದ ಜನತೆ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕಾರಮಾಡಿದ್ದರೂ, ಮೈತ್ರಿ ಮಾಡಿಕೊಂಡು ಸುಳ್ಳು ಭರವಸೆಯ ಪ್ರಣಾಳಿಕೆ ನೀಡಿ ಸರ್ಕಾರ ರಚಿಸಿದ ಕುಮಾರಸ್ವಾಮಿಯವರ ನೇತೃತ್ವದ ಅಪವಿತ್ರಸರ್ಕಾರವನ್ನು ಕಿತ್ತೊಗೆಯುವರೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಶ್ರಮಿಸುವದಿಲ್ಲ ಎಂದು ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ ಹೇಳಿದರು.

ಪಟ್ಟಣದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ನೂರಾರು ಬಿಜೆಪಿ ಕಾರ್ಯುಕರ್ತರನ್ನು ಉದ್ದೆಶಿಸಿ ಮಾತನಾಡಿ, ಚುನಾವಣಾ ಪೂರ್ವ ಪರಸ್ಪರ ಬೈದಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಮೈತ್ರಿ ಮಾಡಿಕೊಂಡಿರುವದನ್ನ ಈ ನಾಡಿನ ಜನತೆ ಅವರನ್ನು ಎಂದು ಕ್ಷಮಿಸುವದಿಲ್ಲ ಎಂದರು.
ಬಹುಮತ ಬರದೆ ಹೊದರೆ ಸರ್ಕಾರ ರಚಿಸುವದಿಲ್ಲ ಎಂದು ಸಮಸ್ತ ಕರ್ನಾಟಕದ ಜನತೆಗೆ ಮಾಧ್ಯಮಗಳ ಮೂಲಕ ವಚನ ನೀಡಿದ್ದ ಕುಮಾರಸ್ವಾಮಿಯವರು, ಅಧಿಕಾರದ ಆಸೆಗಾಗಿ ವಚನ ಬೃಷ್ಟರಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು 5ವರ್ಷದ ಅಧಿಕಾರದ ಬ್ರಮೆಯಲ್ಲಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೆನೆ ಎಂಬ ಭರವಸೆ ನೀಡಿ ಈಗ ಉಲ್ಟಾ ಹೊಡೆಯುತ್ತಿರುವದನ್ನು ನೋಡಿದರೆ, ಅವರ ಮಾತಿನ ಮೇಲೆ ಕರ್ನಾಟಕದ ಜನತೆ ನಂಬಿಕೆ ಕಳೆದುಕೊಂಡಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ನೈತಿಕ ಹಕ್ಕು ಇಲ್ಲಾ. ಇಂತಹ ನಂಬಿಕೆ ದ್ರೋಹ ಸರ್ಕಾರ ಕೆಲವೆ ದಿನಗಳಲ್ಲಿ ಬಿದ್ದು ಹೊಗಲಿದೆ ಎಂದರು. ಸರ್ಕಾರ ರಚನೆಗೆ ಮೊದಲು ಬಾಹ್ಯ ಬೆಂಬಲ ನೀಡಿದ್ದ ಕಾಂಗ್ರೇಸ್ ಮುಖಂಡರು ಇಂದು ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಿ ತಮ್ಮಲ್ಲಿಯೆ ಅಸಮಾಧಾನ ಹೊರಹಾಕುವದನ್ನು ನೊಡಿದರೆ ಮುಂದಿನ ಸಂಸತ್ ಚುನಾವಣೆಗಿಂತ ಮೊದಲೆ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಕಾರ್ಯಕರ್ತರು ಸನ್ನದ್ದರಾಗಬೇಕು ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು 2 ಘಂಟೆಗಳಗಿಂತ ಹೆಚ್ಚು ಪಟ್ಟಣದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ. ನಂತರ ಮಾನವ ಸರಪಳಿ ರಚಿಸಿ ಮೈತ್ರಿ ಸರ್ಕಾರದ ವಿರುದ್ದ ಘೋಷನೆ ಕೂಗಿದರು. ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಸಂಜಯ ಗಡತರನವರ, ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಪುರಸಭೆ ಸದಸ್ಯ ಮಹೇಶ ಹರಕುಣಿ, ಬಿ.ಬಿ.ಸಂಗನಗೌಡರ, ರಾಜು ಭರಮಗೌಡರ, ಆಯ್.ಎಲ್.ಪಾಟೀಲ, ಮುರಿಗೆಪ್ಪ ಗುಂಡ್ಲೂರ, ಈಶ್ವರ ಕೊಪ್ಪದ, ನಿಂಗಪ್ಪ ಚೌಡನ್ನವರ, ಗುರುಪಾದ ಕಳ್ಳಿ, ಈರಣಗೌಡಾ ಪಾಟೀಲ, ಈಶ್ವರ ಬೋರಕನವರ, ಸಂಜಯ ಗಿರೆಪ್ಪಗೌಡರ, ಆನಂದ ಮೂಗಿ, ವಿಶಾಲ ಹೊಸೂರ, ಮಡಿವಾಳಪ್ಪ ಚಳಕೊಪ್ಪ, ಬಸವರಾಜ ನೇಸರಗಿ, ಮಲ್ಲಿಕಾರ್ಜುನ ದೇಸಾಯಿ, ವಿಠಲ ಅಂದಾನಿ, ರಾಜು ನರಸನ್ನವರ, ಉಮೇಶ ಮುಪ್ಪಯ್ಯನವರಮಠ, ಪ್ರಕಾಸ ಕರಿಗಾರ, ಸಿದ್ದಪ್ಪ ಸಿದ್ದಲಿಂಗನ್ನವರ ಹಾಗೂ ನೂರಾರು ಬಿಜೆಪಿ ಪಕ್ಷದ ಕಾರ್ಯಕರ್ತರು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

loading...