ಶಾಸಕ ಸುನೀಲ್ ನಾಯ್ಕರ ಕಾರ್ಯಾಲಯ ಉದ್ಘಾಟನೆ

0
71

ಕನ್ನಡಮ್ಮ ಸುದ್ದಿ-ಭಟ್ಕಳ: ನೂತನ ಶಾಸಕರಾಗಿ ಆಯ್ಕೆಯಾದ ಸುನೀಲ್ ನಾಯ್ಕರು ತಮ್ಮ ಅಧಿಕೃತ ಕಾರ್ಯಲಯವನ್ನು ತಾಲೂಕಾ ಪಂಚಾಯತ್ ಆವರಣದಲ್ಲಿ ಬುಧವಾರ ಗಣಹೋಮ ಹೋಮ ನೇರವೆರಿಸಿ ಪ್ರವೇಶಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಹಲವಾರು ಸಮಸ್ಯೆಗಳ ಬಗ್ಗೆ ಅರಿವಿದ್ದು ಪ್ರಮುಖವಾಗಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಸಾವಿರ ಕೋಟಿ ಕಾಮಗಾರಿ ಬ್ರಷ್ಟಚಾರದಿಂದ ಕೂಡಿದೆ. 80 ಶೇಕಡಾ ಕಾಮಗಾರಿ ಕಳಪೆ ಮಟ್ಟದಾಗಿದ್ದು ಕೂಡಲೇ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಅರಣ್ಯ ಅತೀಕ್ರಮಣದಾರರ ಬಗ್ಗೆ ತಮ್ಮ ನಿಲುವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರೀಯೆ ನೀಡಿದ ಅವರು ಕಾಂಗ್ರೇಸ್‍ನವರು ಅತೀಕ್ರಮಣವನ್ನು ರಾಜಕೀಯ ಮಾಡಿಕೊಂಡರೇ ಹೊರತು ಪಟ್ಟಾ ನೀಡಲಿಲ್ಲ. ಆದರೆ ನಾವು ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳದೇ ಪಟ್ಟಾ ನೀಡಲು ಎದುರಾಗುತ್ತಿರುವ ಕಾನೂನು ತೋಡಕುಗಳನ್ನು ನಿವಾರಿಸಲು ಪ್ರಾಮಾಣಿಕಪ್ರಯತ್ನ ಮಾಡುವುದಾಗಿ ತಿಳಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಎಲ್.ಎಸ್.ನಾಯ್ಕ, ಸುಬ್ರಾಯ ನಾಯ್ಕ, ಮಾದೇವ ನಾಯ್ಕ, ದೀಪಕ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...