ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಮಾಡಿ: ಕೌಜಲಗಿ

0
95

ಕನ್ನಡಮ್ಮ ಸುದ್ದಿ-ಬೈಲಹೊಂಗಲ- ಮುಂಗಾರು ಹಂಗಾಮಿನ ಬಿತ್ತೆನೆಗೆ ಸಜ್ಜಾಗಿರುವ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು ವಿನಾಕಾರಣ ರೈತರನ್ನು ಸತಾಯಿಸಬೇಡಿ ರೈತರಿಂದ ದೂರುಗಳು ಬಂದರೆ ಅಂತಹ ಅಧಿಕಾರಿಗಳ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಅವರು ಪಟ್ಟಣದ ರವಿವಾರ ಎಪಿಎಂಸಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡ ಮುಂಗಾರು ಹಂಗಾಮಿನ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಮುಂಗಾರು ಹಂಗಾಮಿಗೆ ವರುಣ ಕೃಪೆಯಿಂದ ಈ ಬಾರಿ ಮತಕ್ಷೇತ್ರದಲ್ಲಿ ನಿರೀಕ್ಷೇ ಮೀರಿ ಮಳೆ ಆಗಿದ್ದು ರೈತರ ಮೊಗದಲ್ಲಿ ಸಂತಸ ಮೂಡುವಂತಾಗಿದೆ ಎಂದರು. ಸರಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರಿಗೆ ತಲುಪಿಸಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಕೃಷಿ ಉತ್ಪಾದನೆಯಲ್ಲಿ ಹೆಚ್ಚಿನ ತಂತ್ರಜ್ಞಾನಗಳನ್ನು ಆಳವಡಿಸುವ ಕುರಿತು ಅಧಿಕಾರಿಗಳಿಂದ ರೈತರಿಗೆ ಮನವರಿಕೆ ಮಾಡಿಕೊಡಬೇಕೆಂದರು.ಯಾವುದೇ ರೀತಿಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದರು. ಸಹಾಯಕ ಕೃಷಿ ನಿರ್ದೇಶಕ ಮಹಾಬಳೇಶ್ವರ ಹೊಸಮನಿ ಮಾತನಾಡಿ, ತಾಲೂಕಿನಲ್ಲಿ ಮೂರು ರೈತ ಸಂಪರ್ಕ ಕೇಂದ್ರ ಒಳಗೊಂಡು 27 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. 75 ಸಾವಿರ ಹೆಕ್ಟೆರ್ ಬಿತ್ತನೆಗೊಳ್ಳುವ ನಿರೀಕ್ಷೆ ಇದ್ದು ಪೂರಕವಾಗಿ 22 ಸಾವಿರ ಕ್ವಿಂಟಲ್ ಬೇಡಿಕೆಯಿದ್ದು ಈಗಾಗಲೇ 20 ಸಾವಿರ ಕ್ವಿಂಟಲ್ ದಾಸ್ತಾನು ಮಾಡಲಾಗಿದೆ ಎಂದರು. ರಾಜ್ಯದಲ್ಲಿಯೇ ಬೈಲಹೊಂಗಲ ಕ್ಷೇತ್ರ ಸೋಯಾಬಿನ್ ಬೀಜ ಬಿತ್ತನೆಯಲ್ಲಿ ಪ್ರಥಮವಾಗಿದ್ದು ಅಲ್ಲದೇ ಇಳುವರಿಯಲ್ಲಿಯೂ ಸಹ ಪ್ರಥಮ ಸ್ಥಾನದಲ್ಲಿದೆ. ಅಲ್ಲದೇ ಹೆಸರು, ತೊಗರಿ, ಉದ್ದು ವಿತರಣೆ ಮಾಡಲಾಗುತ್ತಿದೆ. ಎಂ.ಕೆ.ಹುಬ್ಬಳ್ಳಿ, ಕಾದರವಳ್ಳಿ, ನಿಚ್ಚಣಕಿ ಗ್ರಾಮಗಳಲ್ಲಿ ಭತ್ತದ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು. ರೈತರು ಭೂಮಿ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಕುಮಾರಗೌಡ ಪಾಟೀಲ, ನಿರ್ದೇಶಕರಾದ ಸಂಜೀವಗೌಡ ಪಾಟೀಲ, ಬಸವರಾಜ ಮೂಗಿ, ಈರಣ್ಣಾ ಬೆಟಗೇರಿ, ಬಶೀರಹ್ಮದ ಪಾಟೀಲ, ಎಮ್.ಎ.ಕಂಠಿ, ಶಿವಪ್ಪ ಗುಂಡ್ಲೂರ, ಮಲ್ಲಿಕಾರ್ಜುನ ಗೀರನವರ, ಸೋಮನಿಂಗ ಲಿಂಬೆನ್ನವರ, ಕೃಷಿ ಇಲಾಖೆಯ ಜಿ.ಸಿ.ಹಿರೇಮಠ, ಯು.ಪಿ.ಈಟಿ, ಬಿ.ಕೆ.ಜಮಾದಾರ, ರಾಜಕುಮಾರ ನರಸನ್ನವರ, ಈಶ್ವರ ಉಳ್ಳೇಗಡ್ಡಿ, ರಮೇಶ ಪರಂಡಿ,ಉಮೇಶ ಬೊಳೆತ್ತಿನ, ಈರಣ್ಣ ಸಂಪಗಾಂವ ಹಾಗೂ ರೈತರು ಇತರರು ಉಪಸ್ಥಿತರಿದ್ದರು.

loading...