ಶಾಸಕ ನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆ ಸಾಲಮನ್ನಾಕ್ಕಾಗಿ ಆಗ್ರಹ

0
57

ಭಟ್ಕಳ: ಅಧಿಕಾರ ಹಿಡಿಯುವಾಗ ರೈತ ಸಾಲವನ್ನು ಮನ್ನಾ ಮಾಡುವುದಾಗಿ ಬರವಸೆಯನ್ನು ನೀಡಿ ಅಧಿಕಾರಕ್ಕೆ ಬಂದನಂತರ ರೈತರ ಸಾಲವನ್ನು ಮನ್ನಾ ಮಾಡಲು ಮೀನಾ ಮೇóಷ ಎಣಿಸುತ್ತಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿಯ ನೀತಿಯ ವಿರುದ್ಧ ಭಟ್ಕಳ ತಾಲೂಕ ಹಲವಾರು ರೈತ ಸಂಘಟನೆಗಳು ಹಾಗು ಬಿ.ಜೆ.ಪಿ ಭಟ್ಕಳ ಮಂಡಳದ ಸಹಯೋಗದೊಂದಿಗೆ ಶಾಸಕ ಸುನೀಲ್ ನಾಯ್ಕ ಮುಂದಾಳತ್ವದಲ್ಲಿ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಂಡು ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಬದಲ್ಲಿ ರೈತ ಮುಖಂಡ ಕೇದಾರ್ ಕೋಲ್ಲೆ ಮಾತನಾಡಿ ಸದ್ಯ ಸರಕಾರದ ಬೊಕ್ಕಸದಲ್ಲಿ ಹಣವಿದ್ದರು ಸಹ ರೈತರ ಸಾಲಮನ್ನಾ ಮಾಡಲು ಸರಕಾರ ಮೀನಾ ಮೇಶ ಎಣಿಸುತ್ತಿದೆ ಕುಮಾರ ಸ್ವಾಮಿ ಸರಕಾರಕ್ಕೆ ರೈತರ ಸಾಲಮನ್ನಾ ಮಾಡುವ ಇಚ್ಚಾಶಕ್ತಿ ಇಲ್ಲವಾಗಿದೆ ಇದರ ವಿರುದ್ದ ಈಗ ಭಟ್ಕಳದ ರೈತಸಂಘಗಳಾದ ಕ್ರಷೀಕ ಸಮಾಜ , ತಾಲೂಕ ಸಾವಯವ ಕ್ರಷೀಕ ಪರಿವಾರ ಹಾಗು ಭಾರತಿಯ ಕಿಸಾನ್ ಸಂಘ ಎಂಬ ಈ ಮೂರು ಸಂಘ ಹಾಗು ಶಾಸಕ ಸುನೀಲ್ ನಾಯ್ಕ ನೇತ್ರತ್ವದಲ್ಲಿ ಭಟ್ಕಳ ಬಿಜೆಪಿ ಮಂಡಳದ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಪ್ರತಿಭಟನೆಮಾಡಲಾಗುತ್ತಿದೆ ಒಂದು ವೇಳೆ ಮುಂದಿನ ದಿನಗಳಲ್ಲಿ ರೈತ ಸಾಲವನ್ನು ಮನ್ನಾ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ ಭಟ್ಕಳ ಬಿಜೆಪಿ ಮಂಡಲಾದ್ಯಕ್ಷ ರಾಜೇಶ ನಾಯ್ಕ ಬಿಜೆಪಿ ಮುಖಂಡರಾದ ಕ್ರಷ್ಣಾ ಆಸರಕೇರಿ, ಭಾಸ್ಕರ್ ದೈಮನೆ, ಪರಮೇಶ್ವರ ದೇವಾಡಿಗ ರೈತ ನಾಯಕರಾದ ಶ್ರೀಧರ್ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.

loading...