ಭಟ್ಕಳ ಸರಕಾರಿ ಆಸ್ಪತ್ರೆಗೆ ಶಾಸಕ ಸುನಿಲ್ ಭೇಟಿ

0
79

ಕನ್ನಡಮ್ಮ ಸುದ್ದಿ-ಭಟ್ಕಳ: ಭಟ್ಕಳ ಸರಕಾರಿ ಆಸ್ಪತ್ರಗೆ ದಿಢೀರ್ ಭೇಟಿ ನೀಡಿದ ಶಾಸಕ ಸುನಿಲ್ ನಾಯ್ಕ ತಾಲೂಕಿನ ಸರಕಾರಿ ಆಸ್ಪತ್ರೆಯು ಅನೇಕ ಅವ್ಯವಸ್ಥೆಯಿಂದ ಕೂಡಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಈ ಸಮಸ್ಯೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಬಂದಿಸಿದ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಒಂದೊಂಮ್ಮೆ ಸರಕಾರಿ ಆಸ್ಪತೆಯಲ್ಲಿ ಇಂತ ಅವ್ಯವಸ್ಥೆ ಹೀಗೆ ಮುಂದುವರಿದಲ್ಲಿ ಶಿಸ್ತಿನ ಕ್ರಮವನ್ನು ಕೈಗೋಳ್ಳಲಾಗುದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯನ್ನೆ ಅವಲಂಬಿಸಿದ್ದು ತಾಲೂಕಿನಲ್ಲಿ ಖಾಸಗೀ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಜನರು ಸರಕಾರಿ ಆಸ್ಪತ್ರೆ ಇಲ್ಲವೇ ಕುಂದಾಪುರದ ಖಾಸಗೀ ಆಸ್ಪತ್ರೆಗೆ ತೆರಳುವುದು ಸಾಮಾನ್ಯವಾಗಿದೆ. ಆದರೆ ಭಟ್ಕಳ ಸರಕಾರಿ ಆಸ್ಪತ್ರೆ ಮಾತ್ರ ಮೊದಲಿನಿಂದಲೂ ಅನೇಕ ಅವ್ಯವಸ್ತೆಯಿಂದ ಕೂಡಿದ್ದು ಗುರುವಾರ ರಾತ್ರಿ 11.30ರ ಸುಮಾರಿಗೆ ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸರಕಾರಿ ಆಸ್ಪತ್ರೆಗೆ ಕರೆ ತಂದರೆ ರಾತ್ರಿ ಡ್ಯೂಟಿಯಲ್ಲಿರಬೇಕಾದ ವೈದ್ಯರಿಲ್ಲದೇ ಪರದಾಡಿದ ಪ್ರಸಂಗ ನಡೆಯಿತು. ರಾತ್ರಿ ಪಾಳಿಯ ಡಾ. ಜನಾರ್ಧನ ಅವರು ಕರೆ ಮಾಡಿದ ಅರ್ಧಗಂಟೆಯ ನಂತರ ಆಸ್ಪತ್ರೆಗೆ ಬಂದಿದ್ದು ಹಾಗು ಮರಣೊತ್ತರ ಪರೀಕ್ಷೇಯ ಸಂದರ್ಬದಲ್ಲಿ ಸಂಬಂದಿಸಿದ ವೈದ್ಯರು ಮರಣೋತ್ತರ ಪರೀಕ್ಷೇ ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲಾ ಸಂಬಂದಿಸಿದ ವೈದ್ಯರನ್ನು ಸಂಪರ್ಕಿಸಿ ಎನ್ನುವ ಬೇಜವಾಬ್ದಾರಿ ಹೇಳಿಕೆಯಿಂದ ಶಾಸಕರ ತನಕ ದೂರು ಹೋಗಲು ಕಾರಣವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಹ ಶಾಸಕರೇ ಆಸ್ಪತ್ರೆಗೆ ನಿನ್ನೆ ದಿಡೀರ್ ಭೇಟಿ ನೀಡಿ ಎಲ್ಲ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ: ದಿನಕರ್ ಪ್ರತಿಕ್ರಿಯಿಸಿ ನಾನು ಆಸ್ಪತ್ರೆಯ ಆಡಳಿತಾಧಿಕಾರಿ ಹುದ್ದೆಯಿಂದ ರೋಸಿ ಹೋಗಿದ್ದೆನೆ ಯಾರಿಂದಲೂ ನನಗೆ ಸರಿಯಾದ ಸಹಕಾರ ಸಿಗುತ್ತಿಲ್ಲಾ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲು ಆಗುತ್ತಿಲ್ಲಾ ಕಾರಣ ಎಲ್ಲಾ ವೈದ್ಯರೂ ಕೂಡಾ ಒಂದೇ ಗ್ರೇಡ್‍ನವರಾಗಿರುವುದರಿಂದ ಆಡಳಿತ ವೈದ್ಯಾಧಿಕಾರಿಯಾಗಿ ನಾನು ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಕೇವಲ ಅವರಿಗೆ ನೋಟೀಸು ನೀಡಬಹುದು ಮತ್ತು ಮೇಲಧಿಕಾರಿಗಳಿಗೆ ತಿಳಿಸಲು ಅವಕಾಶವಿದೆ ಇದನ್ನು ಹೊರತು ಪಡಿಸಿ ನನಗೆ ಯಾವುದೆ ಕ್ರಮವನ್ನು ಕೈಗೊಳ್ಳಲು ಸಾಧ್ಯವಿಲ್ಲಾ ಎಂದು ಹೇಳಿದರು.
ಆಸ್ಪತ್ರೆಯ ಕುಂದುಕೊರತೆಯ ಬಗ್ಗೆ ಪರಿಶಿಲಿಸಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಾನು ಇಂದು ದಿಡೀರ್ ಬೇಟಿಯನ್ನು ಮಾಡಿರುತ್ತೆನೆ ಆಸ್ಪತ್ರೆಯು ಅನೇಕ ಸಮಸ್ಯೆಗಳಿಂದ ಕೂಡಿದ್ದು ಇಲ್ಲಿನ ಅವ್ಯವಸ್ಥೆಯನ್ನು ನೋಡಿ ತುಂಬ ಬೇಸರವಾಗಿದೆ ಇಲ್ಲಿಮುಖ್ಯವಾಗಿ ಸಿಬ್ಬಂದಿಯ ಕೊರತೆಯಾಗಿದೆ ಇಲ್ಲಿ ಒಟ್ಟುನ 84 ಸಿಬ್ಬಂದಿಯ ಅವಶ್ಯತೆಯಿದ್ದು ಇಲ್ಲಿ ಕೆಲವ 20 ಜನ ಸಿಬ್ಬಂದಿಗಳಿದ್ದಾರೆ ಸುಮಾರು 64 ಜನ ಸಿಬ್ಬಂದಿಯ ಕೋರತೆಯಿದೆ ಇನ್ನು ಕೆಲವೇ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳುವ ಕುರಿತು ಕ್ರಮ ಜರುಗಿಸುತ್ತೇನೆ. ಹಾಗು ಇಲ್ಲಿಯೇ ಪರಿಹಾರವಾಗುವ ಸಮಸ್ಯೆಗಳನ್ನು ಇಲ್ಲಿಯೇ ಪರಿಹರಿಸಿ, ಅಗತ್ಯ ಇದ್ದ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು. ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಮುಖಂಡರಾದ ದಿನೇಶ ನಾಯ್ಕ, ಮೋಹನ ನಾಯ್ಕ, ಪ್ರಮೋದ ಜೋಶಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...