ಕಾವ್ಯ ಕವಿ ಮನಸ್ಸಿನ ಅಂತರಾಳದ ಮಾತು : ಹೂಗಾರ

0
76

ಗದಗ: ಕಾವ್ಯವು ಕವಿ ಮನಸ್ಸಿನ ಅಂತರಾಳದ ಮಾತಾಗಿದ್ದು ಕವಿಯ ಭಾವಗಳೇ ಪ್ರಕಟಗೊಂಡ ಅಕ್ಷರ ರೂಪಗಳಾಗಿವೆ. ಸೃಜನಶೀಲತೆಯನ್ನು ಒಳಗೊಂಡ ಕಾವ್ಯವು ಕೇಳುಗರ ಮನಸೂರೆಗೊಳ್ಳುವದೆಂದು ಚಿಂತಕ ಬಿ.ಬಿ.ಹೂಗಾರ ಹೇಳಿದರು.

ಅವರು ರವಿವಾರ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗದಗ ಚಕೋರ- 261 ಕವಿಕಾವ್ಯ ವಿಚಾರ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಕವಿ ಕಾವ್ಯದ ಸೃಷ್ಠಿಕರ್ತ, ಸಾಹಿತ್ಯದ ಒಳ ಹಾಗೂ ಹೊರ ಆಳದ ಅರಿವನ್ನು ಅರಿತು ಹಿತಮಿತಗಳೊಂದಿಗೆ ಆತ ರಚಿಸುವ ಕಾವ್ಯಗಳು ಖಡ್ಗಗಿಂತಲೂ ಹರಿತ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಬಿ.ಎಂ.ಹರಪನಹಳ್ಳಿ ಮಾತನಾಡಿ ಸಾಹಿತ್ಯ ಅಕಾಡೆಮಿಯ ಐದು ಮಹತ್ವದ ಯೋಜನೆಗಳಲ್ಲಿ ಚಕೋರ ಒಂದಾಗಿದ್ದು ಪ್ರತಿಭಾನ್ವಿತರಿಗೆ ಅವಕಾಶ ನೀಡುವಲ್ಲಿ ವೇದಿಕೆಯ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಲಿದೆ ಎಂದರು.
ಯುವ ಕವಿ ಶಿಕ್ಷಕ ಎಂ.ಎಚ್.ಜಮಾಲಸಾಬನವರ ತಾಯಿ ಕುರಿತಾಗಿ ಕವನ ವಾಚಿಸಿದರು, ಇವರ ಕಾವ್ಯಕ್ಕೆ ಪ್ರತಿಕ್ರಿಯಿಸಿದ ಹಿರಿಯ ಸಾಹಿತಿ ಡಾ.ಸಂಗಮೇಶ ತಮ್ಮನಗೌಡ್ರ ಮಾತನಾಡಿ ಪ್ರತಿಭೆಯ ಸೆಲೆ ಬದುಕಿನ ಮೂಲದಲ್ಲಿಯೇ ಇರುವದರಿಂದ ಅವೆರಡಕ್ಕೂ ಒಂದನ್ನೊಂದು ಬಿಡಲಾರದ ಸಜೀವ ಸಂಬಂಧವಿದೆ, ಇವೆರಡರ ಅಭಿವ್ಯಕ್ತಿಗೂ ಭಾಷೆ ಸಾಮಾನ್ಯ ಮಾಧ್ಯಮವಾಗಿರುವದರಿಂದ ಸಾಹಿತ್ಯವು ಕವಿ ಹೃದಯದ ಮಾತಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಗದಗ ಜಿಲ್ಲಾ ಚಕೋರ-261ರ ಸಂಚಾಲಕಿ ಕವಿತಾ ದಂಡಿನ ಮಾತನಾಡಿ ಭಾವನೆಗಳ ಸೆಲೆಯಲ್ಲಿ ಕವಿ ಹೃದಯ ರಚಿಸುವ ಕಾವ್ಯಧಾರೆಗೆ ಈ ವೇದಿಕೆಯಲ್ಲಿ ಅವಕಾಶಗಳಿದ್ದು ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುವದು ಎಂದರು.
ಪ್ರಾರಂಭದಲ್ಲಿ ಬಿ.ಎಂ.ಮರಡೂರ ಪ್ರಾರ್ಥಿಸಿದರು, ಡಾ.ಮಲ್ಲಣ್ಣ ರಾಟಿ ಸ್ವಾಗತಿಸಿದರು, ಶಿಕ್ಷಕಿ ಸುಧಾ ಬಂಡಾ ನಿರೂಪಿಸಿದರು ಕೊನೆಗೆ ಶಿಕ್ಷಕ ಲಿಂಗನಗೌಡ ಪಾಟೀಲ ವಂದಿಸಿದರು.

ವೇದಿಕೆಯ ಮೇಲೆ ಜಿ.ಎಸ್.ಹಿರೇಮಠ, ರಾಜಶೇಖರ ಕರಡಿ, ಪಿ.ಎಲ್.ನಾರಾಯಣಪೂರ, ಎನ್.ಆರ್.ಹೊಸಳ್ಳಿ, ಬಿ.ಎಸ್.ನಾಯ್ಕರ್, ಎಸ್.ಕೆ.ಬದಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿ.ಎ.ವಸ್ತ್ರದ, ಬಾಲಕೃಷ್ಣ ಹೊಸಮನಿ, ಎಸ್.ಎನ್.ಪಂಚಬಾವಿ, ಬಿ.ಎಸ್.ಮಾರನಬಸರಿ, ಎಂ.ಎಚ್.ಕುಲಕರ್ಣಿ, ಬಿ.ಎನ್.ಮೂಲಿಮನಿ, ವೈ.ಟಿ.ಬೊಮ್ಮಣ್ಣವರ, ಸಿ.ಸಿ.ಅಂಗಡಿ, ಎಚ್.ಐ.ಪುಡಕಲಕಟ್ಟಿ, ವ್ಹಿ.ಕೆ.ಕಳಕಣ್ಣವರ, ಐ.ಎಸ್.ಕಾಳಗಿ, ಕೆ.ವ್ಹಿ.ಗೌರಿ, ಎಂ.ಎಸ್.ಚಿಕ್ಕನಾಳ, ಕೆ.ಎಫ್.ದಬಾಲಿ, ಬಿ.ಬಿ.ಬಾಣದ, ಬಾಂಢಗೆ, ಆರ್.ಎಚ್.ಗಾಮನಗಟ್ಟಿ, ಜಿ.ವ್ಹಿ.ತಿಮ್ಮನಗೌಡ್ರ, ಬಿ.ಡಿ.ಘೋಡ್ಕೆ, ಎ.ಎಸ್.ಹಳ್ಳಿಕೇರಿ, ಎಚ್.ಎಂ.ಮಡಿವಾಳರ, ಎಂ.ಎಚ್.ಪಾಯಪ್ಪಗೌಡರ, ಬಿ.ಬಿ.ಕುಂದಗೋಳ, ಪಿ.ಡಿ.ಶೇಬಣ್ಣವರ, ಶಂಕ್ರಮ್ಮ ಯಲ್ಲಪ್ಪಗೌಡರ, ಜಿ.ಬಿ.ನಾಗರಕಟ್ಟಿ, ಎಚ್.ಬಿ.ದೊಡ್ಡಮನಿ ಮುಂತಾದವರಿದ್ದರು.

loading...