ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಗುರಿ: ಶಾಸಕ ಆಚಾರ

0
64

ಯಲಬುರ್ಗಾ: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಗುರಿ.ಪಾರದರ್ಶಕ ಆಡಳಿತ ನೀಡುವುದು ಜನಪರ ಕಾರ್ಯ ಕೆಲಸಗಳನ್ನು ಮಾಡುವ ಮೂಲಕ ಮಾದರಿ ತಾಲೂಕನ್ನಾಗಿ ಮಾಡುತ್ತೇನೆ ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ರವಿವಾರ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ತಾಲೂಕಿನ ಅಭಿವೃದ್ದಿಗೆ ನನ್ನದೇಯಾದ ಕನಸು ಹೊಂದಿದ್ದೇನೆ. ನನ್ನ ಸೇವೆಯನ್ನು ಮನ್ನಿಸಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದು, ಅವರ ಭರವಸೆಗೆ ತಕ್ಕಂತೆ ಹಗಲಿರುಳು ಕಾರ್ಯ ಮಾಡುವುದಾಗಿ ಭರವಸೆ ನೀಡಿದ ಅವರು, ಸಮಗ್ರ ನೀರಾವರಿ,ಕೃಷಿ ವಲಯದ ಭದ್ರತೆ,ಶುದ್ದ ಕುಡಿಯುವ ನೀರು,ಶಿಕ್ಷಣದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಸವಲಿಂಗಪ್ಪ ಭೂತೆ,ಸಿ.ಎಚ್.ಪೋಲೀಸ್ ಪಾಟೀಲ್, ರತನ ದೇಸಾಯಿ, ಎ.ಜಿ.ಭಾವಿಮನಿ, ಶಕುಂತಲಾದೇವಿ ಪೊಲೀಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...