ಅಮರೇಗೌಡಗೆ ತಪ್ಪಿದ ಸಚಿವ ಸ್ಥಾನ: ಸಾಮೂಹಿಕ ರಾಜಿನಾಮೆ

0
48

ಕುಷ್ಟಗಿ: ಕುಷ್ಟಗಿ ಕ್ಷೇತ್ರದ ಪ್ರಸ್ತುತ ಶಾಸಕರಾಗಿ 5ನೇ ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಹಿರಿಯ, ಸರಳ ಸಜ್ಜನಿಕೆಯ ವ್ಯಕ್ತಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ಸಹಿ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯ ಸರಕಾರದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಕಳುಹಿಸಿದ್ದಾರೆ.

ಸ್ವತಂತ್ರ್ಯ ನಂತರ ಕುಷ್ಟಗಿ ಮತಕ್ಷೇತ್ರದಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುತ್ತಾ ಬಂದರೂ ಈವರೆಗೂ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯದಿದ್ದಕ್ಕೆ ಅಸಮಾಧಾನವಾಗಿದೆ.
ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಭಿವೃದ್ಧಿಪರ ಆಡಳಿತವನ್ನು ಬೆಂಬಲಿಸಿ ಸಚಿವ ಸ್ಥಾನ ನೀಡುವಂತೆ ಮಾಡಿದ ಮನವಿಗೆ ಸೂಕ್ತ ಸ್ಪಂದನೆ ಸಿಗದ ಕಾರಣ ಕಾಂಗ್ರೆಸ್ ಪಕ್ಷದ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಮಂಜುಳಾ ಪರಶುರಾಮ ನಾಗರಾಳ, ಉದಯಾನಂದ ಬಸಪ್ಪ ದಾವಣಗೇರಿ, ಸಂತೋಷ ಗುರುಸಿದ್ದಯ್ಯ ಸರಗಣಾಚಾರಿ, ಸಂತೋಷ ಗುರುಸಿದ್ದಯ್ಯ ಸರಗಣಾಚಾರಿ, ಮಹೇಶ ಜೊಗುನಗೌಡ ಕೋಳೂರು, ಫಾತಿಮಾ ಹುಸೇನಸಾಬ ಲಡ್ಡಿ ಸಾಮೂಹಿಕ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಕಛೇರಿಗೆ ಕಳುಹಿಸಿದ್ದಾರೆ.

loading...