ಮಾತಿಗಿಂತ ಕೃತಿ ಮುಖ್ಯವಾಗಿರಲಿ: ನ್ಯಾ. ಮೋಹನಬಾಬು

0
81

ಕನ್ನಡಮ್ಮ ಸುದ್ದಿ-ಅಮೀನಗಡ: ಗಿಡಮರಗಳನ್ನು ಬೆಳೆಸಿದಾಗ ನಮ್ಮೆಲ್ಲರ ಮನಸ್ಸಿಗೆ ತೃಪ್ತಿಯುಂಟಾಗುತ್ತದೆ. ಪರಿಸರದ ಮಹತ್ವದ ಬಗ್ಗೆ ಮಾತಾನಾಡುವುದಕ್ಕಿಂತ ಅದರ ರಕ್ಷಣೆ ಮಾಡುವ ಮನೋಭಾವನೆ ಪ್ರತಿಯೊಬ್ಬರದಾಗಬೇಕು ಎಂದು ದಿವಾಣಿ ನ್ಯಾಯಾಧೀಶರಾದ ಶ್ರೀ ಬಿ. ಮೋಹನ ಬಾಬು ತಿಳಿಸಿದರು.
ಸಮೀಪದ ಸೂಳೇಭಾವಿ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ನಾಶದ ಪರಿಣಾಮವಾಗಿ ಮೊದಲೆಲ್ಲ ಉಚಿತವಾಗಿ ಸಿಗುತ್ತಿದ್ದ ನೀರು ಇಂದು ಹಣಕೊಟ್ಟು ಕೊಳ್ಳುವಂತ ಸ್ಥಿತಿ ಬಂದಿದೆ. ಇವತ್ತು ನೆಟ್ಟ ಸಸಿಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ದತ್ತು ತೆಗೆದುಕೊಂಡು ಅದನ್ನು ರಕ್ಷಿಸಿ ಪೋಷಿಸಿ ಹೆಮ್ಮರವಾಗಿ ಬೆಳೆಸುವಂತ ಕಾರ್ಯ ನಿಮ್ಮಿಂದಾಗಬೇಕು ಎಂದು ಪ್ರೋತ್ಸಾಹಿಸಿದರು. ಹುನಗುಂದ ವಲಯ ಅರಣ್ಯ ಅಧಿಕಾರಿ ಎಮ್.ಎಮ್.ಸಜ್ಜನ ವಿಶ್ವ ಪರಿಸರ ದಿನಾಚರಣೆಯ ಹಿನ್ನಲೆ, ಉದ್ದೇಶಗಳ ಬಗ್ಗೆ ತಮ್ಮ ಅತಿಥಿ ಉಪನ್ಯಾಸದಲ್ಲಿ ವಿವರಿಸಿದರು. ಹುನಗುಂದ ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಹುನಕುಂಟಿ, ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಬಿ.ಜೀರಗಿ ಮಾತನಾಡಿದರು. ಅಪರ ದಿವಾಣಿ ನ್ಯಾಯಾಧೀಶರಾದ ಶ್ರೀ ಗೌಡಾ ಜಗದೀಶ ರುದ್ರೆ, ಎಪಿಪಿ ಎಸ್.ಎಮ್.ಹಂಜಿ, ಹುನಗುಂದ ವಲಯ ಅರಣ್ಯ ಅಧಿಕಾರಿ ಎಸ್.ಸಿ.ಕುಂಟೋಜಿ, ಉಪಪ್ರಾಚಾರ್ಯ ಎ.ಎಚ್.ಬೆಲ್ಲದ, ವಿಜ್ಞಾನ ಶಿಕ್ಷಕಿ ಮಂಜುಳಾ ಕುಷ್ಟಗಿ, ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜ ಹೊಸಮನಿ, ಡಾ.ಎಸ್.ಸಿ.ರಂಜನಗಿ, ಮಂಜುಳಾ ಕುಷ್ಟಗಿ, ಎಸ್.ಎಸ್.ಹಿರೇಮಠ, ಎ.ಬಿ.ಲಮಾಣಿ, ಎಸ್.ಸಿ.ಚಲವಾದಿ, ಎಸ್.ಎಸ್.ಬಿರಾದಾರ, ಎಸ್.ಎಸ್.ಬಿಸಲದಿನ್ನಿ, ಎಲ್.ಎಸ್.ಬದಾಮಿ, ಮಹ್ಮದ್ ಇರ್ಫಾನ್, ಎಸ್.ಕೆ.ಅಬಕಾರಿ, ನಾಗಮ್ಮ ಪಲ್ಲೇದ, ಸವಿತಾ ಕಲ್ಲೂರ ಹಾಗೂ ಶಾಲಾ ವಿದ್ಯಾರ್ಥಿಗಳು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಹಾಜರಿದ್ದರು.

loading...