ಜನಸೇವೆ ಮಾಡುವದೇ ನನ್ನ ಉದ್ಯೋಗ: ಅಮರೇಗೌಡ

0
105

ಕುಷ್ಟಗಿ: ರಾಜಕೀಯ ನನ್ನ ಜೀವನ ಜನರ ಸೇವೆ ಮಾಡುವದೇ ನನ್ನ ಉದ್ಯೋಗ. ಹೀಗಾಗಿ ನಾನು ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಂಡೆ ಕುಷ್ಟಗಿ ಕ್ಷೇತ್ರಕ್ಕೆ ಬಂದಿದ್ದೇನೆ ನನಗೆ ಯಾರ ಅಳಕು ಇಲ್ಲ ಎಂದು ನೂತನ ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಪಟ್ಟಣದ ಶಾಸಕರ ನಿವಾಸದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ-ಹನಮಸಾಗರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕುಷ್ಟಗಿಯ ನೂತನ ಶಾಸಕರಾಗಿ ಆಯ್ಕೆಯಾದ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಆಯ್ಕೆಯಾಗಲು ಕಾರಣರಾದ ಕಾರ್ಯಕರ್ತರಿಗೆ, ಮುಖಂಡರುಗಳಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತಾ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ನಾನು ರಾಜಕೀಯದಲ್ಲಿ ಹಲವಾರು ರೀತಿಯ ಎಡರು ತೊಡರುಗಳನ್ನು ಕಂಡು ಗೆಲವು ಮತ್ತು ಸೋಲನ್ನು ಸರಿಸಮನಾಗಿ ಸ್ವೀಕಾರ ಮಾಡಿದ್ದೇನೆ. ಆದರೆ ನನ್ನಗೂ ರೋಶಾವೇಷÀ ಇದೆಯೆಂದು ಗೋಡೆಗೆ ತಲೆ ಜಜ್ಜಿಕೊಳ್ಳುವುದಿಲ್ಲ. 2018 ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಹತ್ತು ಹಲವಾರು ಆರೋಪ ಮಾಡಿ ವಿವಿದ ರೀತಿಯಲ್ಲಿ ಡೊಂಬರಾಟವಾಡಿದರು ಕುಷ್ಟಗಿಯ ಮಹಾಜನತೆ ನನಗೆ ಆರ್ಶಿವದಿಸಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಳೆದ 2013ರಲ್ಲಿ ನಡೆದ ಚುನಾವಣೆಯಲ್ಲಿ ನನಗೆ ಸೋಲಾಯಿತು ನಿಜ. ಆ ಸೋಲು ಯಾವುದೊ ರಾಜಕೀಯ ಪ್ರಜ್ಞೆ ಇಲ್ಲದ ವ್ಯಕ್ತಿಗಳು ಹಣ ಹೆಂಡದ ಹೊಳೆ ಹರಿಸಿ ನನಗೆ ಅಲ್ಪ ಅಂತರದಲ್ಲಿ ಸೋಲಾಯಿತು.
ಆದರೂ ಅಂದಿನಿಂದ ಜನತೆಯ ಸೇವೆ ಮಾಡಿದ್ದೇನೆ. ಅದರ ಪ್ರತಿಫಲ ನೀವುಗಳ ನನಗೆ ಮತವನ್ನು ನೀಡಿ 2018ರಲ್ಲಿ ಗೆಲ್ಲಿಸಿದ್ದಿರಿ. ನಿಮ್ಮ ಋಣವನ್ನು ನಾನು ಮರೆಯಲು ಸಾದ್ಯವಿಲ್ಲ. ನನ್ನ ಮೇಲೆ ಹೆಚ್ಚಿನ ಜವಬ್ದಾರಿ ಇರುವದರಿಂದ ಪ್ರತಿಯೋಬ್ಬರನ್ನು ಸರಿಸಮನಾಗಿ ನೋಡಿ ಜಾತ್ಯಾತೀತವಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೆನೆ. ಜನರ ಸೇವೆ ಜನಾರ್ಧನ ಸೇವೆ ಜನರೆ ನನ್ನ ದೇವರು ನಿಮ್ಮಗಳ ಕೆಲಸ ಮಾಡುವದರಿಂದ ನಾನು ದೇವರ ಸೇವೆ ಮಾಡಿದಂತೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ಮಾಜಿ ಜಿ.ಪಂ ಅಧ್ಯಕ್ಷೆ ಮಾಲತಿ ನಾಯಕ, ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಫಕೀರಪ್ಪ ಚಳಗೇರಿ ವಕೀಲರು, ಹನಮಂತಪ್ಪ ಚೌಡ್ಕಿ ಕಾರ್ಯಕ್ರಮ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಹನಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದಪ್ಪ ತಳವಾರ, ಯುಥ್‍ಕಾಂಗ್ರೆಸ್ ಅಧ್ಯಕ್ಷ ಲಾಡ್ಲೆ ಮಷಾಕ, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಹಿರೇಮಠ, ಶೇಖರಗೌಡ ಮಾಲಿಪಾಟೀಲ, ವಾಮರಾವ್ ಕುಲಕರ್ಣಿ, ತಾಜುದ್ದೀನ್, ಪರಸಪ್ಪ ಕತ್ತಿ, ಹನಮೇಶ ಕುಲಕರ್ಣಿ, ಬಾಬುಸಾಬ ಮೆಣೆಧಾಳ, ಕಂದಕೂರಪ್ಪ ವಾಲ್ಮೀಕಿ, ಇಮಾಮಸಾಬ ಗರಡಿಮನಿ, ಭಾರತಿ ನೀರಗೇರಿ, ಸಿದ್ದನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಫೋಟೋ : ಶಾಸಕ ಅಮರೇಗೌಡ ಬಯ್ಯಾಪುರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷ್ಣಾ ಬಿ ಸ್ಕೀಂ ನನ್ನ ಅಧಿಕಾರ ಅವಧಿಯಲ್ಲಿ ಅನುಷ್ಠಾನಗೊಳಿಸುವದು ಕಷ್ಟಸಾಧ್ಯದ ಕೆಲಸ. ಸುಮಾರು 70-80 ಸಾವಿರ ಕೋಟಿ ಹಣ ಬೇಕಾಗುವುದರಿಂದ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗದ ಮಾತು. ಏಕೆಂದರೆ ಸಮ್ಮಿಶ್ರ ಸರಕಾರ ಇರುವುದರಿಂದ ಇಷ್ಟೊಂದು ಹಣವನ್ನು ತಂದು ಈ ಯೋಜನೆಯನ್ನು ಜಾರಿಗೊಳಿಸಲು ಕನಸಿನ ಮಾತು. ನಾನು ಸುಳ್ಳು ಹೇಳಲು ಸಾಧ್ಯವಿಲ್ಲ. ಈ ಯೋಜನೆ ಜಾರಿಯಾಗಲು ಇನ್ನೂ ಅನೇಕ ವರ್ಷಗಳೇ ಬೇಕಾಗಬಹುದು. ನಾನು ಈ ಕೆಲಸ ಮಾಡುವ ಭರವಸೆ ಕೊಡುವುದಿಲ್ಲ. ಜನರಿಗೆ ಮಾತು ಕೊಟ್ಟು ತಪ್ಪುವ ಜಾಯಮಾನ ನನ್ನದಲ್ಲ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ.
ಅಮರೇಗೌಡ ಬಯ್ಯಾಪೂರ, ಶಾಸಕ

loading...