ತರಕಾರಿ ಮಾರುಕಟ್ಟೆ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಪೂರ್ಣ:ಜಾರಕಿಹೊಳಿ

0
60

ತರಕಾರಿ ಮಾರುಕಟ್ಟೆ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಪೂರ್ಣ:ಜಾರಕಿಹೊಳಿ
ಕನ್ನಡಮ್ಮ ಸುದ್ದಿ-ಬೆಳಗಾವಿ:ಎಪಿಎಂಸಿ ಆವರಣದಲ್ಲಿ ನಿರ್ಮಿಸಲುದ್ದೇಶಿಸಿದ್ದ ತರಕಾರಿ ಮಾರುಕಟ್ಟೆ ನಿರ್ಮಾಣ ಕಾರ್ಯ ತಾವು ಸಚಿವರಾಗಿದ್ದಾಗ ಶೇಕಡಾ 90 ರಷ್ಟುಗಿದೆ,ಉಳಿದ ಕಾರ್ಯವನ್ನು ಎಲ್ಲರೂ ಸೇರಿ ಪುರ್ಣಗೊಳಿಸಲು ಶ್ರಮೀಸುವುದಾಗಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಗುರುವಾರ ನಗರದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸುಮಾರು 70 ವರುಷ ಇತಿಹಾಸವಿರುವ ಮಾರುಕಟ್ಟೆಗೆ ರೈತರು ಭೂಮಿ ನೀಡುವುದರ ಜೊತೆಗೆ ಬೇರೆ ಬೇರೆ ರೀತಿ ಸಹಾಯವನ್ನು ಮಡಿದ್ದಾರೆ ಆದ್ದರಿಂದ ಈ ಮಾರುಕಟ್ಟೆಯಿಂದ ರೈತರಿಗೆ ಸಹಾಯವಾಗಬೇಕು ಎಂದರು.
ರೈತರಿಗೆ ನೇರವಾಗಿ ಅನುಕೂಲವಾಗುವಂತೆ ಮಾರುಕಟ್ಟೆಯನ್ನು ಅಭಿವೃದ್ಧಿ ಅಭಿವೃದ್ಧಿ ಪಡೆಸಲು ಎಲ್ಲ ಶಾಸಕರು ಒಟ್ಟಾಗಿ ಪ್ರಯತ್ನಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಶಾಸಕರಾದ ಅನಿಲ ಬೆನಕೆ,ಅಭಯ ಪಾಟೀಲ,ಎಪಿಎಮಸಿ ಅಧ್ಯಕ್ಷರಾದ ನಿಂಗಪ್ಪಾ ಜಾಧವ,ಸದಸ್ಯರುಗಳು ಮತ್ತು ಇತರರು ಇದ್ದರು.

loading...