ಬಿಜೆಪಿ ಸೋಲಿಗೆ ಪಕ್ಷದ ಮುಖಂಡರೇ ಕಾರಣ: ಚಂದ್ರಹಾಸ

0
70

ಕುಷ್ಟಗಿ: ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಲ್ಲಿಲ ಬಿಜೆಪಿ ಪಕ್ಷದ ಅಭ್ಯರ್ಥಿ ದೊಡ್ಡನಗೌಡ ಪಾಟೀಲರ ಸೋಲಿಗೆ ಬಿಜೆಪಿ ಪಕ್ಷದ ಮುಖಂಡರೇ ನೇರ ಕಾರಣ ಎಂದು ತಾಲೂಕ ಎಸ್‌.ಟಿ ಮೋರ್ಚಾದ ಮುಖಂಡ ಚಂದ್ರಹಾಸ ಭಾವಿಕಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದಲ್ಲಿರುವ ಕನಕ ಭವನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಚಿಂತನಾ ಸಭೆ ಹಾಗೂ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಸೋಲಬೇಕಾದರೆ ಕಾಂಗ್ರೆಸ್‌ ಪಕ್ಷದ ತಂತ್ರ ಕುತಂತ್ರಗಳಿಂದ ಹಾಗೂ ನಮ್ಮ ಮುಖಂಡರ ಷಡ್ಯಂತ್ರದಿಂದ 18 ಸಾವಿರ ಮತಗಳಿಂದ ಸೋಲಬೇಕಾಯಿತು. ಪಕ್ಷದ ನ್ಯೂನ್ಯತೆಗಳ ಬಗ್ಗೆ ತಿಳಿದಿದ್ದರೆ ನಮ್ಮ ಗೆಲುವು ನಿಶ್ಚಿತವಾಗುತ್ತಿತ್ತು. ಮುಖಂಡರ ನಿರ್ಲಕ್ಷದಿಂದ ಸೋಲಬೇಕಾಯಿತು ವಿನಃ ಮತದಾರರಿಂದಲ್ಲ. ದೊಡ್ಡನಗೌಡರನ್ನು ಹಿಂದಿನ ಚುನಾವಣೆಗಿಂತ 15ಸಾವಿರಕ್ಕೂ ಹೆಚ್ಚು ಮತ ನೀಡಿ ಆಶಿರ್ವದಿಸಿದ್ದಾರೆ ಹೇಳಿದರು.
ಮಾಜಿ ಶಾಸಕ ಕೆ. ಶರಣಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ನೇಮಣ್ಣ ಮೇಲ ಸಕ್ರಿ, ವಿಜಯನಾಯಕ, ಕೆ.ಮಹೇಶ, ವಿಜಯಕುಮಾರ ಹಿರೇಮಠ, ಶಶಿಧರ ಕವಲಿ, ಮಲ್ಲಣ್ಣ ಪಲ್ಲೇದ, ರಾಜು ಗಂಗನಾಳ, ತಮ್ಮಣ್ಣಾಆಚಾರ ದಿಗ್ಗಾವಿ, ವಿಠಪ್ಪ ನಾಗೂರು, ಪ್ರಕಾಶ ರಾಠೋಡ, ಉಮೇಶ ನಾಯಕ, ಚಂದ್ರ ನಾಲತವಾಡ, ಬಾಲಪ್ಪ ಚೌಕರಿ ಸೇರಿದಂತೆ ಇನ್ನಿತರರು ಇದ್ದರು. ಫೋಟೋ: ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕನಕ ಭವನದಲ್ಲಿ ನಡೆದ ಚಿಂತನ ಸಭೆಗೆ ಚಾಲನೆ ನೀಡಲಾಯಿತು.

loading...