ಗುತ್ತಿಗೆದಾರರು ತಮಗೆ ನೀಡಿದ ಅನುದಾನದಲ್ಲಿ ಅಚ್ಚುಕಟ್ಟಾಗಿ ಕಟ್ಟಡ ನಿರ್ಮಿಸಿ: ಬಯ್ಯಾಪುರ

0
49

ಕನ್ನಡಮ್ಮ ಸುದ್ದಿ- ಕುಷ್ಟಗಿ : ಪಟ್ಟಣದ ಗಜೇಂದ್ರಗಡ ರಸ್ತೆಯ ಕ್ರೈಸ್ತ ಕಿಂಗ್ ಶಾಲೆಯ ಮುಂಬಾಗದಲ್ಲಿ ಬರುವ ಸರಕಾರಿ ಜಾಗದಲ್ಲಿ ನೂತನವಾಗಿ ಹಿಂದುಳಿದ ಮಹಿಳಾ ವಿದ್ಯಾರ್ಥಿ ನಿಲಯವನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದರು.

ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡುತ್ತ ಜಿ+3 ಬಿಲ್ಡಿಂಗ್ ವಿದ್ಯಾರ್ಥಿ ನಿಲಯ ಇನ್ನು 9 ತಿಂಗಳು ಒಳಗಾಗಿ ಪ್ರಾರಂಬವಾಗಿ ಈ ಭಾಗದ ಹಿಂದುಳಿದ ಬಡ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ಒಟ್ಟು 140×23 ವಿಸ್ತೀರ್ಣದಲ್ಲಿ ಒಲ್ಲೆಯ ಕಟ್ಟಡ ನಿರ್ಮಾಣವಾಗಲಿದೆ. ಒಟ್ಟು 3ಕೋಟಿ 20 ಲಕ್ಷ ವೆಚ್ಚದಲ್ಲಿ ಮುರು ಅಂತಸ್ತು ಬರಹತ್ ಕಟ್ಟಡ ನಿರ್ಮಾಣವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಉಜ್ಜಲಗೊಳ್ಳಲಿದೆ. ಕಟ್ಟಡ ಗುತ್ತಿಗೆÀ ಪಡೆದ ಗುತ್ತಿಗೆದಾರರು ತಮಗೆ ನೀಡಿದ ಅನುದಾನದಲ್ಲಿ ಅಚ್ಚುಕಟ್ಟಾಗಿ ನಿರ್ಮಾಣ ಮಾಡಲಿದ್ದಾರೆ. ಯಾವುದೇ ರೀತಿಯ ಕಳಂಕ ಬರದಂತೆ ಎಚ್ಚರವಹಿಸುವ ನಂಬಿಕೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮೈನುದ್ಧಿನ್ ಮುಲ್ಲಾ, ಪುರಸಭೆಯ ಸದಸ್ಯರಾದ ಚಂದ್ರಶೇಖರ ಹಿರೇಮನಿ, ಮಹೇಶ್ ಕೋಳೂರ್, ಮಂಜುಳಾ ಪಾಟೀಲ, ಹಾಗೂ ಕಾಂಗ್ರೆಸ್ ಮುಖಂಡರುಗಳಾದ ವಸಂತ ಮೇಲಿನಮನಿ, ಇಮಾಮ್‍ಸಾಬ ಗರಡಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಫೊಟೋ ನಂ 03: ಹಿಂದುಳಿದ ವರ್ಗದ ಮಹಿಳಾ ವಿದ್ಯಾರ್ಥಿ ನಿಲಯವನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದರು.

loading...