ರೈತ ಸಂಪ್ರದಾಯ ಸುಗ್ಗಿಯ ಹಬ್ಬವಿದ್ದಂತೆ: ಶಾಸಕ ಬಯ್ಯಾಪುರ

0
38

ಕುಷ್ಟಗಿ: ರೈತರ ವರ್ಷಾರಂಭ ಬಿತ್ತನೆಯೊಂದಿಗೆ ಆರಂಭವಾಗುತ್ತದೆ. ಮಳೆಯಾಗದೇ ಬೆಳೆಯೂ ಬಾರದೇ ನಷ್ಟ ಅನುಭವಿಸಿದಾಗ್ಯೂ ರೈತ ಸಂಪ್ರದಾಯ ಸುಗ್ಗಿಯ ಹಬ್ಬವಿದ್ದಂತೆ ಸಂಪ್ರದಾಯ ಬಿಟ್ಟು ರೈತ ಬಾಳುವುದಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ತಾಲೂಕಿನ ಕಂದಕೂರು ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಶನಿವಾರ ಆಯೋಜಿಸಿದ್ದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಎತ್ತುಗಳ ಕರಿ ಹರಿಯುವುದು, ಬಂಡಿ ಸ್ಪರ್ಧೆ ಆಯೋಜಿಸುವುದು ಜಾನುವಾರಿಗಳಿಗೆ ತೊಂದರೆ ಕೊಡುವ ಉದ್ದೇಶದಿಂದಲ್ಲ. ಬದಲಿಗೆ ಸ್ಪರ್ಧೆ ಆಯೋಜಿಸುವ ಮೂಲಕ ರೈತರು ಹರ್ಷ ವ್ಯಕ್ತಪಡಿಸುತ್ತಾರೆ. ಎಂಥಹ ಸಂದರ್ಭ ಎದುರಾದರೂ ರೈತರು ದೃತಿಗೆಡದೇ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯದೊಂದಿಗೆ ಜೀವನ ನಡೆಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷ ಬಸವರಾಜ ತುಮರಗುದ್ದಿ, ಕಂದಕೂರಪ್ಪ ವಾಲ್ಮೀಕಿ, ಹನುಮಂತಪ್ಪ ಚೌಡ್ಕಿ, ಬಾಪುಗೌಡ ಪಾಟೀಲ್, ಶಿವಶಂಕರಗೌಡ ಪಾಟೀಲ್ ಕಡೂರು, ರುದ್ರಗೌಡ ಮಾಲಿಪಾಟೀಲ್, ಭೀಮನಗೌಡ ಪೊಲೀಸ್ ಪಾಟೀಲ್, ಶರಣಪ್ಪ ಬಿಜಕಲ್, ಶರಣಯ್ಯ ಅಬ್ಬಿಗೇರಿ, ಆಂಜನೇಯ ವಾಲ್ಮೀಕಿ, ಶರಬಯ್ಯ ಸಂಕಿನ್, ಶರಣಪ್ಪ ಎಂ. ತಾವರಗೇರಿ ಇತರರು ಇದ್ದರು. ಗ್ರಾಮದ 30 ರೈತರು ತಮ್ಮ ಎತ್ತಿನ ಬಂಡಿಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರಾಮಣ್ಣ ರಂಗಪ್ಪ ಮಡಿವಾಳರ್ ಪ್ರಥಮ ಸ್ಥಾನ ಪಡೆದು 5ಗ್ರಾಂ ಚಿನ್ನ ತಮ್ಮದಾಗಿಸಿಕೊಮಡರು. ಈರಪ್ಪ ಕಾಮನೂರು ದ್ವಿತೀಯ ಸ್ಥಾನ ಪಡೆದು 21ತೊಲ ಬೆಳ್ಳಿ ಹಾಗೂ ತೃತೀಯ ಸ್ಥಾನ ಪಡೆದ ದೇವಪ್ಪ ಆರೇರ 11ತೊಲ ಚಿನ್ನ ತಮ್ಮದಾಗಿಸಿಕೊಂಡರು.

loading...